ಧಾರವಾಡ ಭೀಕರ ಅಪಘಾತ ಮೃತರ ಸಂಖ್ಯೆ 11 – ಗುರುತು ಸಿಗಲಾರದಷ್ಟು ದೇಹಗಳು ನುಜ್ಜು ಗುಜ್ಜು

Suddi Sante Desk

ಧಾರವಾಡ –

ಧಾರವಾಡ ಹೊರವಲಯದಲ್ಲಿ ನಡೆದ ಟೆಂಪೂ ಮತ್ತು ಟಿಪ್ಪರ್ ನಡುವಿನ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ 11 ಆಗಿದೆ. ಟೆಂಪೊ ದಲ್ಲಿ ಪ್ರಯಾಣ ಮಾಡುತ್ತಿದ್ದ 16 ಜನರಲ್ಲಿ 11 ಜನರು ಸಾವಿಗೀಡಾಗಿದ್ದಾರೆ‌.

ಈಗಾಗಲೇ ಮೃತರಾದವರಲ್ಲಿ ಕೆಲವರು ಹೆಸರುಗಳು ಲಭ್ಯವಾಗಿವೆ‌ . ವೀಣಾ ಮತ್ತಿಹಳ್ಳಿ,ಮಂಜುಳಾ ನಟೇಶ್,ರಜನಿ,ಪರಂಜ್ಯೋತಿ,ಪ್ರೀತಿ ರವಿಕುಮಾರ್ ಹೀಗೆ ಐದು ಜನರ ಮಾಹಿತಿ ಸಿಕ್ಕಿದೆ.

ಇನ್ನೂಳಿದಂತೆ ಆರು ಜನರ ಗುರುತು ಪತ್ತೆ ಹಚ್ಚಲು ತುಂಬಾ ಕಷ್ಟವಾಗುತ್ತಿದೆ‌ .ಅಪಘಾತದಲ್ಲಿ ಇವರ ದೇಹಗಳು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನುಜ್ಜು ಗುಜ್ಜಾಗಿವೆ.ಹೀಗಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಇವರ ದೇಹವನ್ನು ಇಡಲಾಗಿದ್ದು ತುಂಬಾ ತುಂಬಾ ಕಷ್ಟವಾಗುತ್ತಿದೆ.

ಇನ್ನೂ ಬೆಳಗಿನ ಲೇಡಿಜ್ ಕ್ಲಬ್‌ ನ‌ವರು ಸೇರಿಕೊಂಡು ದಾವಣಗೆರೆ ಯಿಂದ ಸಂತೋಷ ಕೂಟ ಮಾಡಲು ಹೊರಟಿದ್ದರು. ಬೆಳಗಿನ ಜಾವ ಟೆಂಪೂ ದಲ್ಲಿ ಕುಳಿತುಕೊಂಡು ಒಂದು ಸೆಲ್ಪಿ ತಗೆದುಕೊಂಡು ಗಾಡಿ ಹತ್ತಿದವರು ಅರ್ಧ ದಾರಿಯಲ್ಲಿ ಬೆಳಗಾಗುವಷ್ಟರಲ್ಲಿ ರಸ್ತೆ ಅಪಘಾತವಾಗಿದೆ.

ಕೊನೆಯ ಸೆಲ್ಪಿ ಪೊಟೊ

ಧಾರವಾಡಗೆ ಬಂದು ಇಲ್ಲಿ ಉಪಹಾರ ಮಾಡಿಕೊಂಡು ಮುಂದೆ ಹೊರಡುವ ಪ್ಲಾನ್ ಇತ್ತು ಆದರೆ ಆಗಿದ್ದು ಬೇರೆ. ಸಧ್ಯ 11 ಜನರು ಸಾವಿಗೀಡಾಗಿದ್ದು ಎಲ್ಲರ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.