ಧಾರವಾಡ –
ಧಾರವಾಡದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಗಂಭೀರವಾಗಿ ತಗೆದುಕೊಂಡಿದ್ದಾರೆ. ನಗರದಲ್ಲಿ ಹೆಚ್ಚಾಗುತ್ತಿರುವ ಕಳ್ಳತನ ಪ್ರಕರಣ ಕುರಿತು ಗೃಹ ಕಚೇರಿಯಲ್ಲಿ ನಗರದ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಾಡಿದರು.

ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಧಾರವಾಡ ಉಪವಿಭಾಗದ ಎಸಿಪಿ ಅಧಿಕಾರಿ ಅನುಷಾ,ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ,ಶಹರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ಅವರೊಂದಿಗೆ ಸಭೆ ಮಾಡಿದರು .

ಒಂದು ಘಂಟೆಗಳ ಗೃಹ ಕಚೇರಿಯಲ್ಲಿ ನಡೆದ ಸಭೆಸಭೆ ಮಾಡಿದ ಶಾಸಕರು ನಗರದಲ್ಲಿ ಹೆಚ್ಚಾಗುತ್ತಿರುವ ಕಳ್ಳತನ ಪ್ರಕರಣ ಕುರಿತು ಯಾವ ಯಾವ ಕ್ರಮಗಳನ್ನು ಕೈಗೊಂಡಿದ್ದಿರಿ ಎಂಬ ಕುರಿತು ಮಾಹಿತಿ ಪಡೆದುಕೊಂಡರು.

ಯಾವುದೇ ಕಾರಣಕ್ಕೂ ಕಳ್ಳತನ ಪ್ರಕರಣಗಳ ಕುರಿತು ಸುಮ್ಮನೆ ಇರಬೇಡಿ,ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂಥಹ ಘಟನೆಗಳಿಂದ ತಪ್ಪು ಸಂದೇಶ ಹೋಗುತ್ತಿದೆ ಸರಿಯಾಗಿ ಕಟ್ಟು ನಿಟ್ಟಾಗಿ ನಿಯಂತ್ರಣ ಮಾಡಿ ಎಂದು ಸೂಚಿಸಿದರು.

ರಾತ್ರಿ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿ ಎಲ್ಲೇಡೆ ಕಣ್ಗಾವಲು ಇರಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಜೊತೆಯಲ್ಲಿ ಜನರೊಂದಿಗೆ ಸೂಕ್ತವಾದ ಸಹಕಾರ ತಗೆದುಕೊಂಡು ನಿಯಂತ್ರಣ ಮಾಡಿ ಎಂದು ಸೂಚಿದರು.

ಈ ಒಂದು ಸಭೆಯಲ್ಲಿ ಮೂರು ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ ,ಎಸಿಪಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ಸುನೀಲ ಮೊರೆ,ಶಾಸಕರ ಆಪ್ತ ಕಾರ್ಯದರ್ಶಿ ಪ್ರಕಾಶ ಕಟ್ಟಿ , ಭೀಮಾಶಂಕರ,ಮಂಜುನಾಥ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.