ಧಾರವಾಡ –
ಪೊಲೀಸ್ರು ಅಂದರೆ ಅವರು ಹಾಗೇ ಬಿಡ್ರಿ ಹೀಗೆ ಬಿಡ್ರಿ ಅಂತಾ ಮಾತನಾಡಿಕೊಳ್ಳೊರೆ ಹೆಚ್ಚು.ಎನೇ ಸಮಸ್ಯೆಗಳಾದ್ರೇ ಯಾವುದೇ ಕೆಲಸ ಕಾರ್ಯಗಳಾಗಬೇಕು ಎಂದರೇ ನಮ್ಮ ಪೊಲೀಸರು ಎಲ್ಲಿರಿಗೂ ಬೇಕು ಆದರೆ ಅವರ ಮಾಡುವ ಕರ್ತವ್ಯ ಕೆಲಸಗಳನ್ನು ನೋಡಿದ್ರೆ ನಿಜಕ್ಕೂ ಪೊಲೀಸ್ ಕೆಲಸ ಬೇಡಪ್ಪಾ ಬೇಡ ಎನ್ನುವಂತಾಗುತ್ತದೆ. ಏನೇ ಮಾಡಿದ್ರೂ ನಮ್ಮ ಜನ ಪೊಲೀಸರಿಗೆ ಒಂದು ಮಾತು ಅಂದೇ ಅನ್ನುತ್ತಾರೆ ಅದರಲ್ಲೂ ಸಂಚಾರಿ ಪೊಲೀಸ್ರು ಅಂದರಂತೂ ಹೇ ಬಿಡೋ ಮಾರಾಯ ಅವರು ಸುಮ್ಮ ಸುಮ್ಮನೇ ಗಾಡಿ ಹಿಡಿತಾರೆ ದಂಡ ಹಾಕ್ತಾರೆ ಹೀಗೆ ಅಂತೆ ಕಂತೆಗಳ ಮಾತುಗಳು ಹೆಚ್ಚು . ಸಂಚಾರಿ ಪೊಲೀಸರ ಕರ್ತವ್ಯ ಎಷ್ಟು ಕಷ್ಟದ್ದು ಅಂತಾ ಕರ್ತವ್ಯ ಮಾಡುವ ಸಿಬ್ಬಂದಿಗಳಿಗೆ ಗೋತ್ತು. ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆ ಮಾಡುತ್ತಾ ಎಲ್ಲಿಯೂ ಸಂಚಾರ ಅಸ್ಥವ್ಯಸ್ಥತೆ ಆಗದಂತೆ, ಟ್ರಾಫೀಕ್ ಜಾಮ್ ಆಗಲಾರದಂತೆ ಅಪಘಾತವಾದ್ರೆ ಸ್ಥಳಕ್ಕೇ ಹೋಗಿ ಎಲ್ಲವನ್ನೂ ಸರಿ ಮಾಡೊದು ಇನ್ನೂ ನಗರ ಪ್ರದೇಶಗಳಲ್ಲಿ ಯಾವುದೇ ಸಂಚಾರ ಸಮಸ್ಯೆ ಆಗದಂತೆ ನೋಡಿಕೊಳ್ಳೊದು ದೊಡ್ಡ ಸವಾಲಿನ ಕೆಲಸ. ಎಲ್ಲಿಯಾದ್ರೂ ಯಾವುದೇ ಸಮಸ್ಯೆಗಳಾದ್ರೆ ಕಂಟ್ರೋಲ್ ರೂಮ್ ಗೆ ಪೊನ್ ಮಾಡಿ ಹೇಳ್ತಾರೆ ಅಲ್ಲಿಂದ ಕಚೇರಿಗೆ ಹೇಳ್ತಾರೆ ಹಿರಿಯ ಅಧಿಕಾರಿಗಳಿಂದ ಯಾವುದನ್ನು ಹೇಳಿಸಿಕೊಳ್ಳದೇ ವಾಕಿಯೊಂದನ್ನು ಹೆಗಲ ಮೇಲೆ ಶರ್ಟ್ ಗೆ ಹಾಕಿಕೊಂಡು ಸದಾ ಕಿವಿಯಲ್ಲಿ ಆಲಿಸುತ್ತಾ ಆ ಕಡೆಯಿಂದ ಈಕಡೆಗೆ ಈಕಡೆಗೆ ಆಕಡೆಗೆ ತಿರುಗಾಡುತ್ತಾ ಬಾಯಲ್ಲೊಂದು ವಿಜಲ್ ಇಟ್ಟುಕೊಂಡು ಆಟೋದವರನ್ನು ಅವರಿವರನ್ನು ಕಳಿಸುತ್ತಾ ಸದಾ ಕೆಲಸ ಮಾಡೊದನ್ನು ನೋಡಿದ್ರೆ ನಿಜಕ್ಕೂ ಸಂಚಾರಿ ಪೊಲೀಸ್ ಸಿಬ್ಬಂದಿಗಳ ತಾಳ್ಮೆ ಮೆಚ್ಚುವಂತದ್ದು.ಇನ್ನೂ ಇದು ಒಂದೆಡೆಯಾದ್ರೆ ಇಲಾಖೆಯ ಸೂಚನೆ ಸರ್ಕಾರದ ಮಾರ್ಗದರ್ಶನ ಹಿರಿಯ ಅಧಿಕಾರಿಗಳ ಆದೇಶ ಇವೆಲ್ಲದರ ನಡುವೆ ವಾಹನಗಳನ್ನು ಪರಿಶೀಲನೆ ಮಾಡಿ ದಂಡಗಳನ್ನು ಹಾಕೊದು ಸಾಮಾನ್ಯ. ಆದರೆ ಇದನ್ನೇ ಕೆಲವರು ನಮ್ಮ ಸಂಚಾರಿ ಪೊಲೀಸರು ಹಾಗೇ ಹೀಗೆ ಎನ್ನೊದು ದೊಡ್ಡ ತಪ್ಪು.ಇವೆಲ್ಲದರ ನಡುವೆ ನಮ್ಮ ಸಂಚಾರಿ ಪೊಲೀಸರಿಗೆ ಕೆಲವೊಂದಿಷ್ಟು ಮಾನವೀಯತೆಯ ಗುಣಗಳು ಕರ್ತವ್ಯ ಕಾಳಜಿ ಇದೆ ಎನ್ನೊದಕ್ಕೇ ಧಾರವಾಡ ಸಂಚಾರಿ ಪೊಲೀಸರೇ ಸಾಕ್ಷಿ.

ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಕೇವಲ ಸಂಚಾರವನ್ನು ಸರಿ ಮಾಡಿಸೊದೇ ನಮ್ಮ ಕೆಲಸವೆಂದು ಮಾಡದೇ ಧಾರವಾಡದ ಸಂಚಾರಿ ಪೊಲೀಸ್ ಸಿಬ್ಬಂದ್ದಿಗಳಲ್ಲಿ ಸಾಮಾಜಿಕ ಕಾಳಜಿಯ ಗುಣಗಳಿವೆ ಎನ್ನೊದಕ್ಕೇ ನಗರದ ಹಾವೇರಿ ಪೇಟೆಯ ಕ್ರಾಸ್ ನಲ್ಲಿ ಕಂಡು ಬಂದ ಚಿತ್ರಣ.

ಘಟನೆ ವಿವರ
ಕಬ್ಬನ್ನು ತುಂಬಿಕೊಂಡು ಟ್ಯಾಕ್ಟರ್ ವೊಂದು ಹೋಗುತ್ತಿತ್ತು. ಹೆಚ್ಚು ಭಾರದ ಈ ಟ್ಯಾಕ್ಚರ್ ರಸ್ತೆ ಮಧ್ಯೆದಲ್ಲಿಯೇ ಸಿಲುಕಿಕೊಂಡಿತು. ಯಾರೋ ಸಾರ್ವಜನಿಕರು ಸಂಚಾರಿ ಪೊಲೀಸ್ ಠಾಣೆಗೆ ಪೊನ್ ಮಾಡಿ ಸರ್ ಹಾವೇರಿ ಪೇಟೆಯಲ್ಲಿ ಕಬ್ಬು ತುಂಬಿದ ಟ್ಯಾಕ್ಟರ್ ತುಂಬಿದೆ ಟ್ರಾಫೀಕ್ ಜಾಮ್ ಆಗಿದೆ ಎಂದು ಹೇಳುತ್ತಿದ್ದಂತೆ ಠಾಣೆಯಿಂದ ಕರ್ತವ್ಯದ ಮೇಲಿದ್ದ ಸಿಬ್ಬಂದಿಯೊಬ್ಬರು ಕೂಡಲೇ ಪೊಲೀಸ್ ಸಿಬ್ಬಂದಿ ಮಹಾಂತೇಶ ಶೇತಸಂಧಿ ಅವರಿಗೆ ಪೊನ್ ಮಾಡಿ ಕೂಡಲೇ ಸ್ಥಳಕ್ಕೇ ಹೋಗಿ ನೋಡಿ ಏನಾಗಿದೆ ಸರಿ ಮಾಡಿ ಎಂದು ಹೇಳಿದ್ದಾರೆ.

ಇಷ್ಟು ಹೇಳುತ್ತಿದ್ದಂತೆ ಸ್ಥಳಕ್ಕೇ ಹೋಗಿ ನೋಡುತ್ತಲೇ ಎರಡು ಟ್ರೇಲರ್ ಗಳಲ್ಲಿ ಕಬ್ಬನ್ನು ತುಂಬಿಕೊಂಡ ಟ್ಯಾಕ್ಟರ್ ರಸ್ತೆ ಮಧ್ಯದಲ್ಲಿಯೇ ಸಿಲುಕಿಕೊಂಡಿತ್ತು. ಹಿಂದೆ ಮುಂದೆ ಸಿಕ್ಕಾಪಟ್ಟಿ ಟ್ರಾಫೀಕ್ ಜಾಮ್ ಹೇಗಪ್ಪಾ ಇದನ್ನು ಸರಿ ಮಾಡೋದು ಎಂದುಕೊಂಡ ಪೊಲೀಸ್ ಪೇದೆ ಮಹಾಂತೇಶ ಅವರು ಕೂಡಲೇ ತಮ್ಮ ಸಿಬ್ಬಂದಿಗಳಾದ ಬಸಯ್ಯಾ ಸುತಗಟ್ಟಿಮಠ ಮತ್ತು ಅಲಿ ಹಾಡ್ಕರ್ ಅವರಿಗೆ ಪೊನ್ ಮಾಡಿ ಬರಲು ಹೇಳಿದ್ದಾರೆ.

ಮೂವರು ಪೊಲೀಸ್ ಸಿಬ್ಬಂದಿಗಳು ಸೇರಿಕೊಂಡು ಟೋಯಿಂಗ್ ವಾಹನವನ್ನು ತರಿಸಿ ತಕ್ಷಣವೇ ಕಬ್ಬು ತುಂಬಿಕೊಂಡು ಸಿಲುಕಿಕೊಂಡು ರಸ್ತೆ ಮಧ್ಯದಲ್ಲಿ ನಿಂತಿದ್ದ ಟ್ಯಾಕ್ಟರ್ ನ್ನು ತೆರುವು ಮಾಡಿದ್ದಾರೆ.

ಮೊದಲು ಸುಗಮ ಸಂಚಾರ ವ್ಯವಸ್ಥೆ ಮಾಡಿ ನಂತರ ಎಲ್ಲವೂ ಸರಿಯಾಯಿತು ಎಂದುಕೊಂಡು ತಮ್ಮ ಪಾಡಿಗೆ ಈ ಮೂವರು ಪೊಲೀಸ್ ಸಿಬ್ಬಂದಿಗಳು ಹೊಗದೇ ಮತ್ತೊಂದು ಸಾಮಾಜಿಕ ಕಾಳಜಿಯ ಕೆಲಸವನ್ನು ಮಾಡಿದ್ದಾರೆ.

ಹೌದು ಸಿಕ್ಕಾಪಟ್ಟಿ ತೆಗ್ಗು ಬಿದ್ದಿದ್ದ ರಸ್ತೆಯ ಗುಂಡಿಗಳನ್ನು ಸಂಚಾರಿ ಪೊಲೀಸ್ ಸಿಬ್ಬಂದಿಗಳಾದ ಮಹಾಂತೇಶ ಶೇತಸಂಧಿ, ಬಸಯ್ಯಾ ಸುತಗಟ್ಟಿಮಠ ಮತ್ತು ಅಲಿ ಹಾಡ್ಕರ್ ಜೊತೆಯಲ್ಲಿ ಸೇರಿಕೊಂಡು ಸುತ್ತ ಮುತ್ತಲಿನವರ ಬಳಿ ಸಲಿಕೆ ತರಿಸಿಕೊಂಡು ತೆಗ್ಗು ದಿಣ್ಣೆಗಳನ್ನು ಮುಚ್ಚಿದ್ದಾರೆ.

ರಸ್ತೆ ಅಕ್ಕ ಪಕ್ಕದಲ್ಲಿದ್ದ ಕಲ್ಲುಗಳನ್ನು ಮೊದಲು ದೊಡ್ಡ ದೊಡ್ಡ ತೆಗ್ಗುಗಳಿಗೆ ಹಾಕಿದ್ದಾರೆ. ನಂತರ ಅದರ ಮೇಲೆ ಮಣ್ಣನ್ನು ಹಾಕಿ ರಸ್ತೆಯನ್ನು ಸರಿ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕ್ಕೇ ಅಭಿನಂದನೆಗಳು ಮಹಾಪೂರ
ಹೌದು ಮಳೆಗೆ ರಸ್ತೆಗಳು ಹಾಳಾಗಿವೆ ನಿಜ ಆದರೆ ಅವುಗಳನ್ನು ಸರಿ ಮಾಡಿಸೋದು ಪಾಲಿಕೆಯ ಜನಪ್ರತಿನಿಧಿಗಳ ಕೆಲಸ ಆದರೆ ತಮ್ಮ ಕೆಲಸದೊಂದಿಗೆ ರಸ್ತೆಯಲ್ಲಿ ಯಾವುದೇ ವಾಹನಗಳು ಸಿಲುಕಿಕೊಳ್ಳಬಾರುದು ಯಾರಿಗೂ ತೊಂದರೆಯಾಗಬಾರದು ಎಂದುಕೊಂಡು ಹೀಗೆ ಮಾಡಿರುವ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳಿಗೆ ನಿಜಕ್ಕೂ ಒಂದು ದೊಡ್ಡ ಅಭಿನಂದನೆ ಹೇಳಲೆಬೇಕು.

ಇನ್ನು ಇವರು ಮಾಡಿದ ಈ ಒಂದು ಸಾಮಾಜಿಕ ಕೆಲಸವನ್ನು ನೋಡಿ ಸಾರ್ವಜನಿಕರು ಕೂಡಾ ಮೆಚ್ಚಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಮಾಡಿ ಅಭಿನಂದನೆಗಳನ್ನು ಹೇಳುತ್ತಿದ್ದಾರೆ. ಇದರೊಂದಿಗೆ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಮಲಗೌಡ ನಾಯ್ಕರ್ . ಎಎಸ್ ಐ ಪೊಲೀಸ್ ಅಧಿಕಾರಿಗಳಾದ ಬಸವರಾಜ ಕುರಿ. ಎಸ್ ಎಚ್ ಕಡಕೋಳ. ವಿರೇಶ ಬಳ್ಳಾರಿ. ಸೀತಾ ಕಟಗಿ .ಎಸ್ ಬಿ ಶಿಂಧೆ .ಎಮ್ ಎ,ನಮಾಜಿ . ವೈ ಡಿ ಮೇದಾರ . ಎಮ್ ಎಸ್ ಕರಿಗಣ್ಣನವರ. ಎ ಆರ್ ನಾಗನೂರು. ಎಸ್ ಸಿ ಮನಕವಾಡಿ, ಸೇರಿದಂತೆ ಸಂಚಾರಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಕರ್ತವ್ಯದೊಂದಿಗೆ ಸಾಮಾಜಿಕ ಕೆಲಸ ಮಾಡಿದ ಮೂವರು ಸಹೋದ್ಯೋಗಿಗಳನ್ನು ಬೆನ್ನು ತಟ್ಟಿ ಅಭಿನಂದಿಸಿದ್ದಾರೆ. ಒಟ್ಟಾರೆ ಪೊಲೀಸರು ಯಾವಾಗಲೂ ಜನಸ್ನೇಹಿ ಎನ್ನೊದಕ್ಕೇ ಧಾರವಾಡ ಪೊಲೀಸರೇ ಸಾಕ್ಷಿಯಾಗಿದ್ದು ನಿಜಕ್ಕೂ ಕೂಡಾ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅದರಲ್ಲೂ ಮೂವರ ಕಾಯಕ್ಕೇ ಸುದ್ದಿ ಸಂತೆ ವೇಬ್ ನ್ಯೂಸ್ ನಿಂದ ಅಭಿನಂದನೆಗಳು.