ಧಾರವಾಡ –
ರಸ್ತೆ ಸುರಕ್ಷತಾ ಸಪ್ತಾಹದ ಹಿನ್ನಲೆಯಲ್ಲಿ ಧಾರವಾಡ ಸಂಚಾರಿ ಪೊಲೀಸರು ದಿನಕ್ಕೊಂದು ಹೊಸ ಪ್ರಯೋಗ ಹೊಸದಾದ ಕಾರ್ಯಗಳ ಮೂಲಕ ರಸ್ತೆ ಸುರಕ್ಷತಾ ಕುರಿತಂತೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ.

ಹೌದು ಈಗಾಗಲೇ ಕಳೆದ ಹದಿನೈದು ದಿನಗಳಿಂದ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಇನಸ್ಪೇಕ್ಟರ್ ಮಲಗೌಡ ನಾಯ್ಕರ್ ಅವರ ಮಾರ್ಗದರ್ಶನದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಇವೆಲ್ಲದರ ನಡುವೆ ಇದರೊಂದಿಗೆ ನಗರದ ಆದರ್ಶ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ಕೌಶಲ್ಯ ತರಭೇತಿ ಶಿಬಿರವನ್ನು ಉಪಯೋಗ ಮಾಡಿಕೊಂಡು ತರಬೇತಿ ಕಾರ್ಯಾಕ್ರಮಕ್ಕೆ ಬಂದ ಶಿಕ್ಷಕ ಬಳಗಕ್ಕೆ ರಸ್ತೆ ಸುರಕ್ಷತೆ ಕುರಿತು ಪಾಠ ಮಾಡಿದರು.

ಸುರಕ್ಷತೆ ಕುರಿತಂತೆ ಮಾಹಿತಿ ನೀಡಿದರು. ಶಿಕ್ಷಕರಿಗೆ ಕೆಲ ಕಾಲ ಧಾರವಾಡ ಸಂಚಾರಿ ಪೊಲೀಸರು ಶಿಕ್ಷಕರಾಗಿ ರಸ್ತೆಗಳ ನಿಯಮಗಳ ಕುರಿತಂತೆ ಪಾಠ ಮಾಡುತ್ತಾ ಸಮಗ್ರವಾದ ಮಾಹಿತಿಯನ್ನು ನೀಡಿದರು.

ಶಿಕ್ಷಕರು ಕೇವಲ ಪಾಠ ಮಾಡೊದು ಅಲ್ಲದೇ ರಸ್ತೆಯಲ್ಲಿ ನಮ್ಮ ಪಾತ್ರ ಏನು ಹೇಗೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು ವಾಹನಗಳಲ್ಲಿ ಹೋಗುವಾಗ ಹೇಗಿರಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.

ಹೇಗೆಲ್ಲಾ ಪ್ರಯಾಣಿಸಬೇಕು ಏನೇಲ್ಲಾ ದಾಖಲೆಗಳನ್ನು ತಗೆದುಕೊಂಡು ಹೋಗಬೇಕು ಎಂಬ ಕುರಿತಂತೆ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮಾಹಿತಿ ನೀಡಿದರು.

ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯವಾಗಿ ASI ಪೊಲೀಸ್ ಅಧಿಕಾರಿಗಳಾದ ಸೀತಾ ಕಟಗಿ,ಎಮ್ ಎಸ್ ಕರಿಗನ್ನವರ, ಸಿಬ್ಬಂದಿಗಳಾದ ಬಸಯ್ಯ ಎಸ್ ಜಿ,ಲಿಂಗರಾಜ ನಾಯಕ,ಸೇರಿದಂತೆ ಹಲವರು ಉಪಸ್ಥಿತರಿದ್ದರು.ಒಟ್ಟಾರೆ ಬಿಡುವಿಲ್ಲದ ಕರ್ತವ್ಯದ ನಡುವೆ ಧಾರವಾಡ ಸಂಚಾರಿ ಪೊಲೀಸರು ಒಂದು ಒಳ್ಳೆಯ ಸಾಮಾಜಿಕ ಕಾರ್ಯ ಮಾಡಿದರು.

ಇನ್ನೂ ಇಷ್ಟೆಲ್ಲಾ ಪಾಠ ಮಾಡಿದ ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ಪಾಠ ಕೇಳಿದ ಶಿಕ್ಷಕರು ಒಂದು ಸೆಲ್ಪಿ ಪೊಟೊ ತಗೆದುಕೊಂಡು ನೆನಪಿನ ಬುತ್ತಿಯೊಂದಿಗೆ ನಗು ನಗುತ್ತಾ ಧನ್ಯವಾದಗಳನ್ನು ಹೇಳಿ ಹೊರಟರು.