ಧಾರವಾಡ –
ಧಾರವಾಡ ವಿದ್ಯಾಗಿರಿ ಪೊಲೀಸರು ಭರ್ಜರಿ ಕಾರ್ಯಾಚ ರಣೆ ಮಾಡಿ ಮನೆ ಕಳ್ಳತನ ಮಾಡುತ್ತಿದ್ದವರನ್ನು ಬಂಧನ ಮಾಡಿದ್ದಾರೆ.ಹೌದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ ಐವರು ಕಳ್ಳರನ್ನು ಯಶಶ್ವಿ ಕಾರ್ಯಾಚ ರಣೆ ಮಾಡಿ ಬಂಧಿಸಿದ್ದಾರೆ.
ಕಳೆದ ಜನವರಿ 27 ರಂದು ಕೇಶವ ನಗರದಲ್ಲಿ ಮನೆ ಕಳ್ಳತನ ಪ್ರಕರಣ ನಡೆದಿತ್ತು ಈ ಕುರಿತಂತೆ ಮಹೇಂದ್ರಕರ ಎಂಬುವರ ದೂರನ್ನು ನೀಡಿದ್ದರು.ದೂರು ದಾಖಲಾಗುತ್ತಿ ದ್ದಂತೆ ತನಿಖೆಗಾಗಿ ಪೊಲೀಸ್ ಆಯುಕ್ತರು ವಿಶೇಷವಾದ ತಂಡವನ್ನು ತನಿಖೆಗಾಗಿ ನೇಮಿಸಲಾಗಿತ್ತು.ಕಳ್ಳತನ ನಡೆದು ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆ ಮಾಡಿದ ವಿದ್ಯಾಗಿರಿ ಪೊಲೀಸರು ಆರೋಪಿಗಳನ್ನು ಎಡೆಮೂರಿ ಕಟ್ಟಿದ್ದಾರೆ.
ಹೌದು ಕಳ್ಳತನ ಕುರಿತಂತೆ ದೂರು ದಾಖಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆಗಾಗಿ ಟೀಮ್ ಮಾಡಲಾಗಿತ್ತು ಪ್ರಕರಣ ಕುರಿತಂತೆ ಐವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಕಳ್ಳತನ ಮಾಡಿದ ವಸ್ತುಗಳನ್ನು ತಗೆದುಕೊಳ್ಳುತ್ತಿದ್ದ ಮೂವರನ್ನು ಹಾಗೇ ಕಳ್ಳತನ ಮಾಡುತ್ತಿದ್ದ ಇಭ್ಬರನ್ನು ಪೊಲೀಸರು ಬಂಧನ ಮಾಡಿದ್ದು ಇವರಿಂದ 562 ಗ್ರಾಂ ಚಿನ್ನ ಹಾಗೂ 20 ಸಾವಿರ ನಗದು ಹಣವನ್ನು ಹಾಗೇ ಎರಡು ಕಾರುಗಳನ್ನು ವಶಕ್ಕೆ ತಗೆದುಕೊಳ್ಳಲಾಗಿದೆ.4.5 ಲಕ್ಷ ಮೌಲ್ಯದ ಎರಡು ಕಾರು ವಶಕ್ಕೆ ತಗೆದುಕೊಂಡಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಯಶಶ್ವಿ ಕಾರ್ಯಾಚರಣೆ ಮಾಡಿದ ವಿದ್ಯಾಗಿರಿ ಪೊಲೀಸರಿಗೆ ಪೊಲೀಸ್ ಆಯುಕ್ತ ರಿಂದ ವಿದ್ಯಾಗಿರಿ ಪೊಲೀಸರಿಗೆ ೨೫ ಸಾವಿರ ಬಹುಮಾನ ಘೋಷಣೆಯನ್ನು ಪೊಲೀಸ್ ಆಯುಕ್ತ ಲಾಬುರಾಮ್ ಅವರಿಂದ ಘೋಷಣೆ ಮಾಡಿದ್ದಾರೆ.
ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಈ ಒಂದು ಕಾರ್ಯಾಚರಣೆಯಲ್ಲಿ ಇನ್ಸ್ಪೇಕ್ಟರ್ ಬಾಳನಗೌಡ ಎಸ್ ಎಮ್,ವಿಶ್ವನಾಥ್ ಚೌಗಲೆ,ಸಚಿನಕುಮಾರ ದಾಸ ರಡ್ಡಿ,ಎಸ್ ಆರ್ ತೇಗೂರ,ದೇವೆಂದ್ರ ಮಾವಿನಂಡಿ, ಬಿ ಎಮ್ ಅಂಗಡಿ,ಹೆಚ್ ಕೆ ಗೂಡುನಾಯ್ಕರ್,ಭೀಮಶಿ ಮಂಕಣಿ,ಎಮ್ ಎಪ್ ನದಾಫ್,ಐ ಪಿ ಬುರ್ಜಿ,ಆರ್ ಕೆ ಅತ್ತಾರ,ಎಸ್ ಹೆಚ್ ಕೆಂಪೊಡಿ,ದಯಾನಂದ ಗುಂಡಗೈ, ಆರ್ ಆರ್ ಕೆಂಚನ್ನವರ,ಟಿ ಜಿ ಬಂಡಿವಡ್ಡರ,ರಮೇಶ ಕೋತಂಬರಿ,ಎಮ್ ಜಿ ಪಾಟೀಲ,ಬಿ ಎಮ್ ಪಟಾತ್, ಎಮ್ ವೈ ಮಾದರ.ಎನ್ ಎಮ್ ಹಟ್ಟಿಮನಿ,ಎಮ್ ಎಸ್ ಚಿಕ್ಕಮಠ,ಪಾಲ್ಗೊಂಡಿದ್ದರು.