ಧಾರವಾಡ –
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಿಗದಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಘಾಟಿನ ಹಾಗೂ ಅವರ ಸಹೋದರರು ಓರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮುರಕಟ್ಟಿ ಹದ್ದಿಗೆ ಹೊಂದಿಕೊಂಡಿರುವ 6 ಎಕರೆ ಜಮೀನು ಇದ್ದು, ಆ ಜಮೀನಿನ ವ್ಯಾಜ್ಯ ನ್ಯಾಯಾಲ ಯದಲ್ಲಿದೆ. ಹೀಗಿದ್ದರೂ ನಿಂಗಪ್ಪ ಘಾಟಿನ ಹಾಗೂ ಅವರ ಸಹೋದರರು ಆ ಭೂಮಿಯನ್ನು ಇಂದು ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಅಪ್ಪಣ್ಣ ಕಾಶಿ ಸೇರಿದಂತೆ ಇನ್ನಿತರ ನಾಲ್ಕೈದು ಜನ ಅಲ್ಲಿಗೆ ಹೋಗಿ ಈ ಜಮೀನಿನ ವ್ಯಾಜ್ಯ ಇನ್ನೂ ನ್ಯಾಯಾಲಯದಲ್ಲಿ ದೆ.

ಈಗೇಕೆ ಉಳುಮೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಮಾತಿಗೆ ಮಾತು ಬೆಳೆದು ನಿಂಗಪ್ಪ ಘಾಟಿನ, ನಾಗರಾಜ ಘಾಟಿನ ಹಾಗೂ ಅರ್ಜುನ್ ಘಾಟಿನ್ ಎಂಬುವವರು ಕೊಡಲಿ ಸೇರಿದಂತೆ ಮಾರಕಾಸ್ತ್ರಗಳಿಂದ ಅಪ್ಪಣ್ಣ ಕಾಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಜಗಳದ ದೃಶ್ಯವನ್ನು ಅಲ್ಲಿಯವರೇ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಅಪ್ಪಣ್ಣ ಕಾಶಿ ಅವರ ಬೆನ್ನಿಗೆ ಗಾಯವಾಗಿದ್ದು, ಚಿಕಿತ್ಸೆ ನಂತರ ಅವರು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ನಿಂಗಪ್ಪ ಘಾಟಿನ ಸೇರಿದಂತೆ ಮೂವರ ಮೇಲೆ ದೂರು ದಾಖಲಿಸಿದ್ದಾರೆ