ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ನಿಧನ – ಚಿಕಿತ್ಸೆ ಫಲಿಸದೇ ನಿಧನರಾದ ಸುರೇಶಗೌಡ ಪಾಟೀಲ್

Suddi Sante Desk

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ನಿಧನ

ಧಾರವಾಡ –

ಧಾರವಾಡ ಜಿಲ್ಲಾ ಪಂಚಾಯತ ಕಾಂಗ್ರೆಸ್ ಪಕ್ಷದ ಸದಸ್ಯ ಸುರೇಶ ಗೌಡ ಪಾಟೀಲ್ ನಿಧನರಾಗಿದ್ದಾರೆ. ಮೊದಲ ಬಾರಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅದರಗುಂಚಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು.

ಮೊದಲು ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು‌. ಮಾಜಿ ಸಚಿವರಾಗಿದ್ದ ಸಿ ಎಸ್ ಶಿವಳ್ಳಿ, ವಿನಯ ಕುಲಕರ್ಣಿ ಆಪ್ತರಾಗಿದ್ದರು.

ಇನ್ನೂ ಯುವ ಉತ್ಸಾಹಿಯಾಗಿದ್ದ ಸುರೇಶಗೌಡರು ಕಳೆದ ಒಂದು ವರುಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು‌.ಪೂನಾದಲ್ಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‌ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಪೂನಾದಲ್ಲಿ ನಿಧನರಾಗಿದ್ದಾರೆ.

ಅದರಗುಂಚಿ ಗ್ರಾಮದಲ್ಲಿ ಶೋಕ ಮುಗಿಲು ಮುಟ್ಟಿದೆ. ಇನ್ನೂ ಮೃತರು ಒರ್ವ ಗಂಡು ಮಗು ಇಬ್ಬರು ಹೆಣ್ಣು ಮಕ್ಕಳು ಪತ್ನಿ ಯನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಕುಂದಗೋಳ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಮತ್ತು ಗ್ರಾಮ ಪಂಚಾಯತಿ ಮಾಜಿ ಮುಖಂಡರು ಬಾಲಚಂದ್ರ ಸಂಕನ್ನವರ ಸೇರಿದಂತೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.