ಧಾರವಾಡ –
ಧಾರವಾಡ ಜಿಲ್ಲಾ ಪಂಚಾಯತಿ,ತಾಲೂಕು ಪಂಚಾಯತಿ ಮಿಸಲಾತಿಯ ಆದೇಶವನ್ನು ರದ್ದು ಮಾಡಿದೆ ಧಾರವಾಡ ಹೈಕೊರ್ಟ್ ಪೀಠ. ಹೌದು ಈ ಹಿಂದೆ ಹೊರಡಿಸಲಾಗಿದ್ದ ಮೀಸಲಾತಿಯನ್ನು ರದ್ದು ಮಾಡಿ ಆದೇಶವನ್ನು ಮಾಡಿದೆ ಧಾರವಾಡ ಹೈಕೋರ್ಟ್ ಏಕ ಸದಸ್ಯ ಪೀಠ.
ಸರಕಾರ ಇತ್ತಿಚಿಗೆ ಹೊರಡಿಸಿದ ಅಧಿಸೂಚನೆ ಯನ್ನೇ ರದ್ದು ಗೊಳಿಸಿದೆ ಹೈಕೋರ್ಟ.ಧಾರವಾಡ, ಗದಗ, ಬೆಳಗಾವಿ, ಹಾವೇರಿ, ಇತರ ಜಿಲ್ಲೆಗಳ ರಾಜಕೀಯ ಮುಖಂಡರು ಹೈಕೋರ್ಟ ನಲ್ಲಿ ಅರ್ಜಿ ಸಲ್ಲಿಸಿದ್ರು.ಮಿಸಲಾತಿ, ಕ್ಷೇತ್ರ ವಿಂಗಡನೆ ಬಗ್ಗೆ ಆಕ್ಷೇ ಪಣೆಯನ್ನು ಸಲ್ಲಿಸಿದ್ದರು ರಾಜಕಿಯ ಮುಖಂಡ ರುಗಳು.
ಹೀಗಾಗಿ ಸರಕಾರ ಹೊರಡಿಸಿರುವ ಮಿಸಲಾತಿ ಕ್ಷೇತ್ರ ವಿಂಗಡನೆಯಲ್ಲಿ ಕಾನೂನು ಪಾಲನೆಯಾಗಿಲ್ಲ ಎಂದು ಕೋರ್ಟ ರದ್ದುಗೊಳಿಸಿ ಆದೇಶವನ್ನು ಮಾಡಿದೆ.ಹೀಗಾಗಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಗಳ ಚುನಾವಣೆಗೆ ಇನ್ನೂ ಮತ್ತಷ್ಟು ವಿಳಂಬವಾಗುವ ಲಕ್ಷಣಗಳು ಕಾಣುತ್ತಿದ್ದು ಇನ್ನೂ ರಾಜ್ಯ ಸರ್ಕಾರ ಮುಂದೆ ಯಾವ ಹೆಜ್ಜೆಯನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.