ಪಕ್ಷ ತೊರೆಯಲು ಮುಂದಾದ ಧಾರವಾಡದ ಕೈ ಪಕ್ಷದ ಅಜೀತ್ ಬೊಗಾರ್ – ಪ್ರಾಮಾಣಿಕತೆಗೆ ಸಿಗದ ಬೆಲೆ…..

Suddi Sante Desk

ಧಾರವಾಡ –

ಅಜಿತ್ ಬೋಗಾರ್ ಧಾರವಾಡದ ಕೈ ಪಕ್ಷದ ಯುವ ಮುಖಂಡ ಕಳೆದ ಹಲವಾರು ವರ್ಷಗಳಿಂದ ಪ್ರಾಮಾಣಿಕತೆಯಿಂದ ಪಕ್ಷ ನೀಡಿದ ಕೊಟ್ಟ ಜವಾಬ್ದಾರಿಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ಈವರೆಗೆ ಪಕ್ಷದಲ್ಲಿ ಎಲ್ಲರಂತೆ ಇವರೊಬ್ಬರು ಕೂಡಾ ಸಾಮಾನ್ಯ ಕಾರ್ಯಕರ್ತರಾಗಿದ್ದುಕೊಂಡು ಏನೇಲ್ಲಾ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಚಾಚು ತಪ್ಪದೇ ಮಾಡಿಕೊಂಡು ಬರತಾ ಇದ್ದಾರೆ.

ಹೀಗಿರುವಾಗ ಈಬಾರಿ ಆದರೂ ವಾರ್ಡ್13 ರಿಂದ ಪಾಲಿಕೆಯ ಚುನಾವಣೆಯಲ್ಲಿ ಪಕ್ಷದಿಂದ ಟಿಕೇಟ್ ಸಿಗುತ್ತದೆ ಎಂದುಕೊಂಡಿದ್ದರು ಇವರ ವಾರ್ಡ್ ನ ಜನರು ಕೂಡಾ ಇವರ ಆಪ್ತರು ಹೀಗೆ ಎಲ್ಲರೂ ಆಸೆಯನ್ನು ಇಟ್ಟುಕೊಂಡಿದ್ದರು ಆದರೆ ಈ ಬಾರಿಯೂ ಕೂಡಾ ಮತ್ತೆ ಪಕ್ಷ ಮಾತನ್ನು ತಪ್ಪಿದೆ

ಈ ಹಿಂದೆ ಎರಡು ಬಾರಿ ಟಿಕೇಟ್ ಸಿಗುತ್ತದೆ ಸಿಗುತ್ತದೆ ಎನ್ನುವಷ್ಟರಲ್ಲಿಯೇ ಮಿಸ್ ಆಗಿತ್ತು ಮತ್ತೆ ಈ ಬಾರಿಯೂ ತಪ್ಪಿದ್ದು ಹೀಗಾಗಿ ಇದರಿಂದಾಗಿ ಇವರು ಮುನಿಸಿಕೊಂಡು ಕೈ ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.

ಇದಕ್ಕೆ ಇವರು ವಾರ್ಡ್ ನವರು ಆಪ್ತರು ಬೆಂಬಲಿ ಗರು ಹೀಗೆ ಎಲ್ಲರೂ ಕೂಡಾ ಬೆಂಬಲವನ್ನು ನೀಡಿ ದ್ದಾರೆ.ಈವರೆಗೆ ಪಕ್ಷದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದಕ್ಕೆ ದೊಡ್ಡದಾದ ಗೌರವವನ್ನು ನೀಡಿದ್ದಕ್ಕಾಗಿ ತುಂಬಾ ಬೇಸರಗೊಂಡಿದ್ದು ಸಧ್ಯ ಈಬಾರಿಯಾದ ರೂ

ಪಾಲಿಕೆಯ ಚುನಾವಣೆಯಲ್ಲಿ ಅವಕಾಶ ನೀಡು ತ್ತಾರೆ ಎಂದುಕೊಳ್ಳಲಾಗಿತ್ತು ಆದರೆ ಅದ್ಯಾಕೋ ಏನೋ ಈ ಬಾರಿಯೂ ಕೂಡಾ ಮತ್ತೆ ಕೈ ಕೊಟ್ಟಿದ್ದು ಇದರಿಂದಾಗಿ ತುಂಬಾ ಬೇಸರಗೊಂಡಿರುವ ಇವರು ಮುಂದೇನು ಮಾಡುತ್ತಾರೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.