ಧಾರವಾಡ –
ಮೋಟರ ಸೈಕಲ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಧಾರವಾಡದಲ್ಲಿ ಬಂಧನ ಮಾಡ ಲಾಗಿದೆ.ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ವಾದ ದ್ವಿ ಚಕ್ರ ವಾಹನಗಳ ನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಶ್ರೀಮತಿ ಜಿ ಅನುಷಾ ಸಹಾಯಕ ಪೊಲೀಸ್ ಆಯುಕ್ತರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಮ್.ಕೆ. ಬಸಾ ಪೂರ ರವರ ಮಾರ್ಗದರ್ಶನದಲ್ಲಿ ಆರೋಪಿತರ ಪತ್ತೆ ಕುರಿತು ವಿಶೇಷ ತಂಡ ರಚಿಸಿ
ಎಸ್.ಆರ್. ತೆಗೂರ ಪಿಎಸ್‌ಐ ಅಪರಾಧ ವಿಭಾಗ, ಸಚಿನ ಕುಮಾರ ದಾಸರಡ್ಡಿ ಪಿಎಸ್‌ಐ(ಕಾವಸು), ಹಾಗೂ ಬಿ.ಎಮ್.ಅಂಗಡಿ ಎಎಸ್‌ಐ, ಎಮ್.ಎಫ್. ನದಾಫ, ಐ.ಪಿ ಬುರ್ಜಿ, ಆರ್.ಕೆ. ಅತ್ತಾರ, ಬಿ.ಎಮ್ ಪಠಾತ, ಎಮ್.ಜಿ.ಪಾಟೀಲ, ಎಮ್.ಸಿ. ಮಂಕಣಿ, ಎಮ್.ವಾಯ್.ಮಾದರ, ಡಿ.ಎಸ್.ಸಾಂಗ್ಲಿಕರ ಇವರೆಲ್ಲರೂ ಕೂಡಿ ನಕಲಿ ಕೀಲಿಯನ್ನು ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿತನಾದ
ಕೃಷ್ಣಾ @ ಕಿಟ್ಟ್ಯಾ ತಂದೆ ಜ್ಞಾನದೇವ ಮಿರಜಕರ ಹಾವೇರಿ ಜಿಲ್ಲೆಯ ಮೊಟೆಬೆನ್ನೂರ ಮ್ಯಾಳಗಿ ಪ್ಯಾಟಿ ಹಾಲಿ ಧಾರವಾಡ ಮಾಳಮಡ್ಡಿ ಗೌಳಿಗಲ್ಲಿ ಹನಮಂತ ದೇವರ ಗುಡಿ ಹತ್ತಿರ ಈತನಿಗೆ ಪತ್ತೆ ಮಾಡಿ ಈತನ ತಾಬಾದಲ್ಲಿದ್ದ ಒಟ್ಟು 7 ಮೋಟರ ಸೈಕಲ್ ಗಳು ಹಾಗೂ 1 ಹೊಂಡಾ ಸ್ಕೂಟರನ್ನು ಪತ್ತೆ ಮಾಡಿದ್ದು ಇವುಗಳ ಒಟ್ಟು 25000/ ರೂ ಬೆಲೆಯ ಮೋಟರ ಸೈಕಲ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ 5 ಪ್ರಕರಣ ಗಳು ಹಾಗೂ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯ 1 ಪ್ರಕರಣ ಪತ್ತೆಯಾಗಿದ್ದು ಈ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರರು ಹುಬ್ಬಳ್ಳಿ ಧಾರವಾಡರವರು ಈ ಕಾರ್ಯವನ್ನು ಪ್ರಶಂಶಿಸಿರುತ್ತಾ
ರೆ.