ವಿಶಾಖಪಟ್ಟಣ –
ಹೃದಯಾಘಾತದಿಂದ ಸಚಿವರೊಬ್ಬರು ನಿಧನರಾದ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.ಹೌದು ಆಂಧ್ರಪ್ರ ದೇಶದ ಕೈಗಾರಿಕೆ,ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಮೇಕಪತಿ ಗೌತಮ್ ರೆಡ್ಡಿ ಕೊನೆಯುಸಿರೆಳೆದಿದ್ದಾರೆ ಭಾನುವಾರ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗೌತಮ್ ರೆಡ್ಡಿ ಎರಡು ಮೂರು ದಿನಗಳ ಹಿಂದೆಯೇ ದುಬೈನಿಂದ ಭಾರತಕ್ಕೆ ಬಂದಿದ್ದರು.ನೆಲ್ಲೂರು ಜಿಲ್ಲೆಯ ಆತ್ಮಕೂರ್ ವಿಧಾನಸಭಾ ಕ್ಷೇತ್ರವನ್ನು ಎರಡನೇ ಬಾರಿಗೆ ಪ್ರತಿನಿಧಿಸುವ ಆಂಧ್ರಪ್ರದೇಶದ ವಿಧಾನಸಭೆಯ ಸದಸ್ಯ ರಾದ ಮೇಕಪತಿ ಗೌತಮ್ ರೆಡ್ಡಿ ಮುಂಜಾನೆ ಹೃದಯಾ ಘಾತದಿಂದ ಮೃತಪಟ್ಟಿದ್ದು ಅಗಲಿಕಿಗೆ ನಾಡಿನ ಗಣ್ಯರು ಸೇರಿದಂತೆ ಹಲವರು ಸಂತಾಪ ವನ್ನು ಸೂಚಿಸಿದ್ದಾರೆ