ನಾನು ಸಮಾಜಕ್ಕೆ ಮಿಸ್ ಗೈಡ್ ಮಾಡಿಲ್ಲ,ಮೂಜಗು ಸ್ವಾಮೀಜಿಯನ್ನು ಮಿಸ್ ಯ್ಯೂಸ್ ಮಾಡಿಕೊಂಡಿದ್ದಾರೆ ದಿಂಗಾಲೇಶ್ವರ ಸ್ವಾಮೀಜಿ

Suddi Sante Desk

ಹುಬ್ಬಳ್ಳಿ –

ನಾನು ಯಾವುದೇ ಕಾರಣಕ್ಕೂ ಸಮಾಜಕ್ಕೆ ಮಿಸ್ ಗೈಡ್ ಮಾಡಿಲ್ಲ.ಅವರೇ ಮೂರು ಸಾವಿರ ಮಠದ ಮುಜಗು ಶ್ರೀಗಳನ್ನು ಮಿಸ್ ಯ್ಯೂಸ್ ಮಾಡಿಕೊಂಡಿದ್ದಾರೆ ಎಂದು ಪ್ರಭಾಕರ ಕೋರೆಗೆ ದಿಂಗಾಲೇಶ್ವರ ಸ್ವಾಮೀಜಿ ತೀರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮಠಕ್ಕೆ ಮಾಲೀಕರಿಲ್ಲ ಎನ್ನೋ ಮಾತು ಒಪ್ಪಲ್ಲ. ಮಠಾಧೀಶರೇ ಮಠದ ಮಾಲೀಕರು.ಆ ರೀತಿ ಹೇಳಿಕೆ ಅವರ ಬುದ್ದಿ ಮಟ್ಟ ತೋರಿಸುತ್ತದೆ. ಕೋರೆಯವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ.ಭೂಮಿ ದಾನ ತೆಗೆದುಕೊಂಡು 17 ವರ್ಷ ಆಯಿತು ಅಂತಾರೆ.ಆದರೆ ಭೂಮಿ ತೆಗೆದುಕೊಂಡಿದ್ದು 2012ರಲ್ಲಿ ಅದಕ್ಕೆ ನನ್ನ ಹತ್ತಿರ ದಾಖಲೆಗಳಿವೆ ಎಂದರು.

ಈ ಹಿಂದೆಯು ನಿಮ್ಮ ಸಂಸ್ಥೆಯ ಅನೇಕ ಕಾಲೇಜುಗಳಿಗೆ ಭೂಮಿ ತೆಗೆದುಕೊಂಡಿದ್ದಿರಿ.ಆದರೆ ಮಠಕ್ಕೆ ನಿಮ್ಮ ಕೊಡುಗೆ ಏನು ಎನ್ನುವುದನ್ನು ಜನರಿಗೆ ತಿಳಿಸಿ.ಮಠದ ಆಸ್ತಿ ಪಡೆಯೋಕೆ ಯಾರ ಅನುಮತಿ ಬೇಕಿಲ್ಲ ಅಂತೀರಾ.ಅದು ನಿಮ್ಮ ಉದ್ಧಟನದ ಹೇಳಿಕೆ ಎಂದ ಅವರು,ಕೋರೆಯವರೆ ನಿಮ್ಮ ದಬ್ಬಾಳಿಕೆಗೆ ಹೆದರೋ ಸ್ವಾಮೀಜಿ ನಾನಲ್ಲ.ನನ್ನ ಜೀವ ಹೋದರು ಸರಿ ಮಠದ ಅಸ್ತಿ ವಾಪಸ್ ತರುತ್ತೆನೆ ಎಂದು ಅವರು ಹೇಳಿದರು.

ಕೋರೆಯವರು ನೀವು ನನ್ನನ್ನು ಸ್ವಾಮೀಜಿ ಅಂತ ಒಪ್ಪಿಕೊಳ್ಳಬೇಕಾದ ಅವಶ್ಯಕತೆ ಇಲ್ಲ.ಇಡೀ ನಾಡು ನನ್ನನ್ನ ಸ್ವಾಮೀಜಿ ಅಂತ ಒಪ್ಪಿಕೊಂಡಿದೆ.ಮೂರು ಸಾವಿರ ಮಠದ ವಿಷಯಕ್ಕೆ ದಿಂಗಾಲೇಶ್ವರ ಶ್ರೀ ಏನು ಸಂಬಂಧ ಅಂತ ಕೇಳ್ತಾರೆ.ಅವರೇ ನನ್ನನ್ನ ಉತ್ತರಾಧಿಕಾರಿ ಅಂತ ಕಾಗದ ಪತ್ರಕ್ಕೆ ಸಹಿ ಹಾಕಿದ್ದಾರೆ‌ ಎಂದ ದಿಂಗಾಲೇಶ್ವರ ಸ್ವಾಮೀಜಿ ಆ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.

ಮಠ ಉಳಿಸಬೇಕು ಎನ್ನುವವರನ್ನು ಕತ್ತುಪಟ್ಟಿ ಹಿಡಿದು ಆಚೆ ತಳ್ತಾರೆ.ಮಠದ ಆಸ್ತಿ ಬರೆದುಕೊಡು ವವರನ್ನು ಮಠದಲ್ಲಿ ಬಿಡ್ತಾರೆ.ನಾನು ಅವರನ್ನು ಆಹ್ವಾನ ಮಾಡುತ್ತೇನೆ ಮಠಕ್ಕೆ ಬನ್ನಿ ವಿವಾದ ಬಗೆಹರಿಸೋಣ.ಆದರೆ ಅವರ್ಯಾರು ಬರ್ತಿಲ್ಲ.ಎಲ್ಲಿ ಅವರ ಬಣ್ಣ ಬಯಲಾಗುತ್ತೋ ಎನ್ನೋ ಭಯ ಅವರಿಗೆ.‌ವಿವಾದದ ತಾರ್ಕಿಕ ಅಂತ್ಯ ಭಕ್ತರು ಹಾಗೂ ನ್ಯಾಯಲಯ ನಿರ್ಧರಿಸುತ್ತೆ ಎಂದು ಅವರು ಹೇಳಿದರು.

ಶಂಕರಣ್ಣ ಮುನವಳ್ಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ನನ್ನ ಜೀವಕ್ಕೆ ಏನಾದರೂ ಅದರೇ ಸ್ವಾಮೀಜಿ ಕಾರಣ ಅಂತಾರೆ.ನನ್ನಿಂದ ನಿಮಗೇನು ಆಗಲ್ಲ.ನೀವೆ ಮಠದ ಆಸ್ತಿ ವಿಚಾರವಾಗಿ ಮಾನಸಿಕವಾಗಿ ಏನಾದ್ರು‌ ಆಗಬಹುದು. ಹಾಗೇನಾದ್ರು ಆದ್ರೂ ನಾನೇ ನಿಮ್ಮನ್ನ ಆಸ್ಪತ್ರೆಗೆ ದಾಖಲಿಸಿ ನಿಮ್ಮನ್ನು ಉಳಿಸಿಕೊಳ್ಳುತ್ತೆನೆ.ನೀವು ಸಾಯುವದಕ್ಕಿಂತ ಮುಂಚೆ ಮಠದ ಆಸ್ತಿವಿವಾದ ಬಗೆಹರಿಸಿ‌ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.