ಹುಬ್ಬಳ್ಳಿ –
ಮೂರುಸಾವಿರ ಮಠದ ಆಸ್ತಿಯಲ್ಲಿ ಕೆಎಲ್ಇ ಸಂಸ್ಥೆ ಕಾಲೇಜು ಭೂಮಿ ಪೂಜೆ ವಿಚಾರದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳು ಮತ್ತೆ ಗರಂ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತಂತೆ ಕೆಲ ದಾಖಲೆಗಳನ್ನು ಬಿಡುಡಗೆ ಮಾಡಿದರು.
ಮೂರುಸಾವಿರ ಮಠದ ಭೂಮಿಯಲ್ಲಿ ಮೆಡಿಕಲ್ ಕಾಲೇಜು ಕಟ್ಟುವ ಬದಲಾಗಿ,ಸ್ವತಂತ್ರ ಭೂಮಿಯಲ್ಲಿ ಕಟ್ಟಲಿ ಎಂದಿದ್ದೆ ಅದರ ದಾಖಲೆಗಳ ಬಿಡುಗಡೆ ಮಾಡಲು ಮತ್ತೆ ಬಂದಿದ್ದೇನೆ ಎಂದರು. ಇನ್ನೂ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಆಗುವುದು ಸಂತಸದ ವಿಷಯ 17-07-2009 ರಲ್ಲಿ ಕಲ್ಕತ್ತಾದಲ್ಲಿ ಅವಾರ್ಡ್ ಆದ ದಾಖಲೆ ಬಿಡುಗಡೆ ಸುಪ್ರೀಂ ಕೋರ್ಟ್ ನ ಚಿತ್ತಕೋಶ ಮುಖರ್ಜಿ ಅವರನ್ನು ಹೈಕೋರ್ಟ್ ಆರ್ಬಿಟೇಟರ್ ನೇಮಕ ಮಾಡಲಾಗಿತ್ತು ಮಠದ ಆಸ್ತಿಯನ್ನು ಯಾವುದೇ ಪರಿಸ್ಥಿತಿಯಲ್ಲಿ ಪರಬಾರೆ ಮಾಡಬಾರದು ಎಂಬ ಆದೇಶ ಇದರಲ್ಲಿದೆ.
ಈ ಆಸ್ತಿಯನ್ನು ಪರಬಾರೆ ಮಾಡಬಾರದು ಅನ್ನೋದು ಕೇವಲ ಕೆಎಲ್ಇ ಮಾತ್ರವಲ್ಲ ಯಾರಿಗೂ ಮಠದ ಆಸ್ತಿಯನ್ನು ನೀಡಬಾರದು ಅನ್ನೋದು ನನ್ನ ಉದ್ದೇಶ 30-04-2012 ರಲ್ಲಿ ಆರ್ಬಿಟೇಷನ್ ಆದೇಶ ತಿದ್ದುಪಡಿ ಮಾಡಲಾಗಿದೆ ಸಿ.ಐ ಬರ್ಮಗೌಡರ ಅವರು ಧಾರವಾಡದಲ್ಲಿ ತಿದ್ದುಪಡಿ ಆದೇಶ ಹೊರಡಿಸಿದ್ದು ಕಾನೂನು ಬಾಹಿರ ನಾಡಿನ ಸಮಜಾದ ಗಣ್ಯರು ಮೂರುಸಾವಿರ ಮಠದ ಬಗ್ಗೆ ಸ್ವಲ್ಪ ಕಾಳಜಿ ಇಲ್ಲ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಮಠದ ಆಸ್ತಿ ಹಾಳಾಗಿರುವ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಗಳು ಯಾರಿಗಾದರೂ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದೇನೆಯೇ ಎಂದು ಪ್ರಶ್ನೆ ಮಾಡಿದ್ದಾರೆ ಅದಕ್ಕೆ ಬೇಕಾದ ದಾಖಲೆಗಳು ನಮ್ಮ ಬಳಿ ಇದೆ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿಗಳು ಮಲ್ಲಿಕಾರ್ಜುನ ಎನ್ ಎಚ್ ಎಂಬುವರಿಗೆ ಆಸ್ತಿ ಮಾರಾಟ ಮಾಡಿದ್ದಾರ ಮಠಕ್ಕೆ ತೊಂದರೆ ಇದೆಯೆಂದು ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಮಠ ಆರ್ಥಿಕ ತೊಂದರೆಯಲ್ಲಿದೆ ಅನ್ನೋ ಸಂದರ್ಭದಲ್ಲಿ 25 ಎಕರೆ ಜಮೀನು ಮಾರಾಟ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಪ್ರತಿ ಹಂತ ಹಂತದಲ್ಲಿ ಹಿಂದಿನ ಜಗದ್ಗುರುಗಳು ಕೊಟ್ಟಿದ್ದು ಎನ್ನುತ್ತಿದ್ದಾರೆ.ಇದು ನನಗೆ ಆಶ್ಚರ್ಯ ತರುತ್ತಿದೆ ಐದು ನೂರು ಕೋಟಿ ರೂಪಾಯಿ ಜಮೀನು ದಾನ ಮಾಡಿದ್ದು ಸರಿಯೇ? ಸಮರ್ಥರಿಗೆ ದಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಹುಬ್ಬಳ್ಳಿ ಸುತ್ತಮುತ್ತ ಬೃಹತ್ ಆಸ್ತಿಯನ್ನು ಹೊಂದಿರುವ ಸಂಸ್ಥೆಗೆ ಆಸ್ತಿ ನೀಡಿದ್ದಾರೆ ದಾನ ಮಾಡವವರು ದಾನ ಪಡೆಯುವವರಿಗಿಂತ ಪ್ರಭಲರಾಗಿದ್ದಾರೆ ಇಷ್ಟು ದಿನ ದಿಂಗಾಲೇಶ್ವರ ಶ್ರೀಗಳು ಯಾಕೆ ಸುಮ್ಮಿನಿದ್ದರು? ನಾನು ಇಲ್ಲಿಯವರೆಗೆ ಸುಮ್ಮನೆ ಕುಳಿತಿಲ್ಲ ಕಲ್ಕತ್ತಾದ ಆದೇಶವನ್ನು ಕನ್ನಡಕ್ಕೆ ಅನುವಾದ ಮಾಡಿಸಿದ್ದು ನಾನು ಜಗದೀಶ್ ಶೆಟ್ಟರ್ ಅವರ ಮೆನೆಗೆ ಇದೇ ಕಾಗದವನ್ನು ತೆಗೆದುಕೊಂಡು ಹೋಗಿದ್ದೆ ಯಾವುದೇ ಆಸ್ತಿಯನ್ನು ಪರಬಾರೆ ಮಾಡಬಾರದೆಂಬ ಷರತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದೆ ಅತ್ಯಂತ ಒಳ್ಳೆಯ ಕೆಲಸ ಮಾಡಿದ್ದಿರೀ ಎಂದಿದ್ದರು ಶೆಟ್ಟರ್ ಕೆಎಲ್ಇ ಸಂಸ್ಥೆಗೆ ಆಸ್ತಿಯನ್ನು ದಾನ ಮಾಡಿದ್ದನ್ನು ಕೇಳಿದ್ದೆ ಅದನ್ನ ಸಮರ್ಥನೆಯನ್ನು ನೀವು ಮಾಡಿಕೊಂಡಿದ್ದಿರಿ ನಾಡಿನ ಪ್ರಸಿದ್ಧ ಮಠದ 25 ಎಕರೆ, ಮಲ್ಲಿಕಾರ್ಜುನ ಎನ್‌ಎಚ್ ಅವರಿಗೆ ಜಮೀನು ಹೋಗಿದೆ ಮೂರುಸಾವಿರ ಮಠದ ಆಸ್ತಿ ಉಳಿಯಬೇಕೆಂದು ಒತ್ತಾಯ ಮಾಡಿದರು.
ಮಠ ಆಸ್ತಿಗಳ ದಾನದಿಂದ ಹಾಳಾಗಬಾರದು ಮಠ ಸಂಸಷ್ಟದಲ್ಲಿದ್ದಾಗ 1.25 ಕೋಟಿ ಖರ್ಚು ಮಾಡಿದ್ದು ನಾನು, ಆ ವೇಳೆ ಇವರು ಯಾರು ಇರಲಿಲ್ಲ 10 ಲಕ್ಷಕ್ಕೆ ತೊಂದರೆ ಇದೆಯೆಂದು ಹೇಳುವವರಲ್ಲಿ ಒಂದು ಕೋಟಿ 25 ಲಕ್ಷ ರೂಪಾಯಿ ಕೊಟ್ಟಾಗ ಹತ್ತು ಲಕ್ಷ ಕೊಡಿಸಿಕೊಡಲು ನಿಮಗೆ ಏನಾಗಿತ್ತು? ನಿಮ್ಮ ಮನೆತನದ ಆಸ್ತಿಯೇ? ಸಮಿತಿಯ ಆಸ್ತಿಯೆ? ಆಡಳಿತ ಸಮಿತಿಯವರ ತಂದೆತಾಯಿವರ ಹೆಸರಿನಲ್ಲಿ ಜಮೀನು ಕೊಡಬಾರದೇ? ಮೂರುಸಾವಿರ ಮಠದ ಆಸ್ತಿಯನ್ನು ಪರಬಾರೆ ಮಾಡಲು ಬಿಡುವುದಿಲ್ಲ ಐದುನೂರು ಗಾಡಿ ಮಣ್ಣು ಹೋಗಿರಬಹದು ಕಾಲ ಮಿಂಚಿಲ್ಲ, ಕೆಎಲ್ಇ ಸಂಸ್ಥೆಯವರು ಮಠದ ಆಸ್ತಿಯನ್ನು ಮಠಕ್ಕೆ ಬಿಡಿ ಈಗಿರುವ, ಮುಂದೆ ಬರುವ ಸ್ವಾಮೀಜಿಗಳು ಮಠದ ಸಂಸ್ಥೆ ಕಟ್ಟಿ ಬೆಳೆಸಲಿ ಮೂರು ಸಾವಿರ ಮಠದ ವಿರೋಧಿ ನಾನಲ್ಲ, ಈಗಿರುವ ಸ್ವಾಮೀಜಿಗಳ ಅಭಿಮಾನಿ ನಾನು ಇದರಲ್ಲಿ ನಾನು ಯಾವುದೇ ದುರುದ್ದೇಶವನ್ನು ಹೊಂದಿಲ್ಲ ಎಂದರು.
ಬಹುಸಂಖ್ಯಾತರ ವಿರೋಧ ವ್ಯಕ್ತವಾಗುತ್ತದೆ, ಮಾನ ಹರಾಜು ಹಾಕುತ್ತಾರೆ, ಜೀವ ತೆಗೆಯುವುದಕ್ಕೆ ಹೋಗಬಹುದು ಎಂದು ಕೆಲವರು ಹೇಳಿದ್ದಾರೆ ಮಠದ ಸ್ವಾಮೀಜಿಗಳು ಇದರ ಬಗ್ಗೆ ಗಮನಹರಿಸಬೇಕು ನೀವು ಏನಾದರೂ ಜವಾಬ್ದಾರಿ ಕೊಟ್ಟರೆ, ಅದನ್ನು ನಿಭಾಯಿಸುವ ಸಾಮರ್ಥ್ಯ ನನ್ನಲ್ಲಿದೆ ಮಠದ ವಿಚಾರಕ್ಕೆ ನನ್ನ ಮುಗಿಸಲು 7 ಬಾರಿ ಅಪಘಾತ ಮಾಡಿಸುವ ಯತ್ನ ನಡೆದಿತ್ತು ಮೊನ್ನೆಯೂ ಕಾರಿಗೆ ಎದುರಾಕಿ ದಮ್ಕಿ ಹಾಕಿದ್ದಾರೆ 24 ಕ್ಕೆ ಮೂರುಸಾವಿರ ಮಠದಿಂದ ಕುಂದಗೋಳ ಕಡೆಗೆ ಹೋಗುವಾಗ ಬೆದರಿಕೆ ನೀಡಿದ್ದಾರೆ ಎಂದರು.
ಇದೊಂದು ಬಾರಿ ನಿಮ್ಮನ್ನು ಸುಮ್ಮನೆ ಬಿಡುತ್ತೇವೆ ಇದನ್ನು ಮುಂದುವರೆಸಿದರೆ, ನಿಮ್ಮನ್ನು ಮುಗಿಸುತ್ತೇವೆ ಅಂತಾರೆ ಸರ್ಕಾರದ ರಕ್ಷಣೆ ನನಗೆ ಇರದೇ ಇದ್ದರೂ ಕೂಡ ಪರಮಾತ್ಮನ ರಕ್ಷಣೆ ಇದೆ ಎನ್ನುತ್ತಾ ನಾತು ಮುಗಿಸಿದರು.