ಧಾರವಾಡ – ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಗೆ ಕೆಲವರು ವಿರೋಧ ಮಾಡುತ್ತಿದ್ದು.ಇನ್ನೂ ಕೆಲವರು ಕನ್ನಡ ಪರ ಸಂಘಟನೆಗಳೊಂದಿಗೆ ಸೇರಿಕೊಂಡು ನವೆಂಬರ್ 5 ಕ್ಕೆ ರಾಜ್ಯ ಬಂದ್ ಗೆ ಕರೆ ನೀಡಿದ್ದಾರೆ.ಇವೆಲ್ಲ ವಿಚಾರಗಳ ಕುರಿತು ಚರ್ಚೆ ಮಾಡಲು ಧಾರವಾಡದಲ್ಲಿ ನವೆಂಬರ್ 29 ರಂದು ಮರಾಠಾ ಸಮಾಜದ ರಾಜ್ಯ ಕಾರ್ಯಕಾರಣಿಯನ್ನು ಕರೆಯಲಾಗಿದೆ.

ವಿದ್ಯಾಪ್ರಸಾರಕ ಮಂಡಳಿಯಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ.ಮರಾಠಾ ಅಭಿವೃದ್ದಿ ಪ್ರಾಧಿಕಾರ ರಚನೆಯ ಕುರಿತು ಕೆಲ ಕನ್ನಡಪರ ಸಂಘಟನೆಗಳು ಆಕ್ಷೇಪ ಎತ್ತಿದ್ದು ವಿಷಾದಕರ ಸಂಗತಿಯಾಗಿದ್ದು ಇನ್ನೂ ಕೆಲವು ಸಂಘಟನೆಗಳು ಇದನ್ನು ವಿರೋಧಿಸಿ ನವಂಬರ್ 5ಕ್ಕೇ ಬಂದ್ ಗೆ ಕರೆ ನೀಡಿವೆ.ಇನ್ನೂ 2ಎ ಮೀಸಲಾತಿ ಕುರಿತು ಚರ್ಚಿಸಲು ನವಂಬರ್ 29 ರಂದು ಧಾರವಾಡದ ಮರಾಠಾ ವಿದ್ಯಾಪ್ರಸಾರಕ ಮಂಡಳಿಯಲ್ಲಿ ಮೋಹನ ಮೋರೆ ನೇತ್ರತ್ವದಲ್ಲಿ ಸಭೆ ಕರೆಯಲಾಗಿದೆ.ಈ ಸಭೆಯಲ್ಲಿ ಸಮಾಜದ ಮುಖಂಡರು ಮಾಜಿ ಹಾಲಿ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಧಾರವಾಡ ಜಿಲ್ಲಾ ಮರಾಠಾ ಕ್ರಾಂತಿ ಮೌನ ಮೋರ್ಚಾದ ಸಂಚಾಲಕ ಭೀಮಪ್ಪ ಕಸಾಯಿ ಕೋರಿದ್ದಾರೆ.
