ಬೆಳಗಾವಿ –
ಭಾರತ ಜೋಡೋ ಪಾದಯಾತ್ರೆಯ ಪೂರ್ವ ಭಾವಿಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಪಕ್ಷದ ಕಾರ್ಯಕರ್ತರ ಮುಖಂಡರ ಸಭೆ ನಡೆಸಿ ಪಾದಯಾತ್ರೆ ಸಿದ್ದತೆ ಕುರಿತು ಚರ್ಚೆ
ಹೌದು ಕಾಂಗ್ರೇಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನೇತ್ರತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಪಾದಯಾತ್ರೆ ರಾಜ್ಯದಲ್ಲೂ ಸಂಚರಿಸ ಲಿದ್ದು ಹೀಗಾಗಿ ಈ ಒಂದು ಕಾರ್ಯಕ್ರಮದ ಕುರಿ ತಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಬೆಳಗಾವಿಯಲ್ಲಿ ಪೂರ್ವ ಭಾವಿ ಸಭೆಯನ್ನು ಮಾಡಿದರು.
ಬೆಳಗಾವಿಯ ಪಕ್ಷದ ಕಚೇರಿಯಲ್ಲಿ ನಡೆದ ಈ ಒಂದು ಸಭೆಯಲ್ಲಿ ಪಾದಯಾತ್ರೆ ಕುರಿತಂತೆ ಜೊತೆಗೆ ಪಾಲ್ಗೊಳ್ಳುವ ಕುರಿತಂತೆ ಅದರ ಅಂಗ ವಾಗಿ ಹಮ್ಮಿಕೊಳ್ಳುವ ಸಿದ್ದತೆಗಳನ್ನು ಚರ್ಚೆ ಮಾಡಲಾಯಿತು.ಸಭೆಯಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ನಾವಲಘಟ್ಟಿ, KPCC ಪ್ರದಾನ ಕಾರ್ಯದರ್ಶಿ ಯಾದ ಸದಾನಂದ ಡಂಗಣ್ಣವರ್, ವಿಧಾನ ಪರಿಷತ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹಾಗೂ ಬೆಳಗಾವಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇನ್ನೂ ಇದರೊಂದಿಗೆ ಭಾರತ ಜೋಡೋ ಪಾದಯಾತ್ರೆಯ ಪೂರ್ವಭಾವಿಯ ಸಭೆ ಕಿತ್ತೂರಿನಲ್ಲೂ ನಡೆಯಿತು.