ಹುಬ್ಬಳ್ಳಿ –
ರಾಜ್ಯದ ದೊಡ್ಡ ಎರಡನೇಯ ರೈಲ್ವೆ ನಿಲ್ದಾಣ ಮತ್ತು ಉತ್ತರ ಕರ್ನಾಟಕದ ಹೆಮ್ಮೆಯ ಹುಬ್ಬಳ್ಳಿಯ ಶ್ರೀಸಿದ್ದಾರೂಢ ರೈಲ್ವೆ ನಿಲ್ದಾಣದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನವನ್ನು ಮಾಡಲಾಗಿದೆ.
ಹೌದು ಇತ್ತೀಚಿಗೆ ಈ ಒಂದು ನಿಲ್ದಾಣದ ಮುಂದೆ ಎತ್ತರದಲ್ಲಿ ರಾಷ್ಟ್ರ ಧ್ವಜವನ್ನು ನಿರ್ಮಾಣ ಮಾಡ ಲಾಗಿದೆ. ಇದರಲ್ಲಿ ಧ್ವಜವನ್ನು ಕೂಡಾ ಹಾಕಲಾಗಿದೆ. ನಗರಕ್ಕೆ ಬಂದವರಿಗೆ ನಿಲ್ದಾಣದ ಮುಂದೆ ಮೊದಲು ಸಿದ್ದಾರೂಢ ಅಜ್ಜನ ಮೂರ್ತಿಯೊಂದಿಗೆ ಈ ಒಂದು ರಾಷ್ಟ್ರ ಧ್ವಜವು ಕೂಡಾ ತುಂಬಾ ತುಂಬಾ ಅಂದ ಚಂದವಾಗಿ ಕಾಣುತ್ತಿದೆ.
ಹೀಗಿರುವಾಗ ಈ ಒಂದು ಎತ್ತರವಾಗಿ ಹಾರಾಡುತ್ತಿ ರುವ ಕಂಬದಲ್ಲಿನ ರಾಷ್ಟ್ರ ಧ್ವಜ ಹರಿದು ಹಾರಾಡು ತ್ತಿದೆ. ಹೌದು ಕಳೆದ ಮೂರು ನಾಲ್ಕು ದಿನಗಳಿಂದ ನಿಲ್ದಾಣದಲ್ಲಿ ಎತ್ತರವಾಗಿ ಹಾರುಡುತ್ತಿರುವ ಈ ಒಂದು ಧ್ವಜದಲ್ಲಿನ ರಾಷ್ಟ್ರ ಧ್ವಜವು ಹರಿದಿದ್ದು ಹಾರಾಡುತ್ತಿದೆ ಹೀಗಾಗಿ ಇಲ್ಲಿಗೆ ಬರುವವರು ಹೋ ಗುವವರು ಹರಿದ ಧ್ವಜವನ್ನು ನೋಡುತ್ತಾ ಹೋಗು ತ್ತಿದ್ದಾರೆ.
ಈ ಕುರಿತಂತೆ ಕೆಲವರು ಸಂಭಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರೂ ಕೂಡಾ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾತ್ರ ನೋಡುತ್ತಿಲ್ಲ ಹರಿದು ಹಾರಾಡುತ್ತಿರುವ ಧ್ವಜದ ಬಗ್ಗೆ ಗಮನವನ್ನು ಹರಿಸುತ್ತಿಲ್ಲ.ಇನ್ನಾದರೂ ಇದನ್ನು ನೋಡಿದ ಅಧಿಕಾರಿಗಳು ಇತ್ತ ಗಮನವನ್ನು ಹರಿಸಿ ಹರಿದು ಹಾರಾಡುತ್ತಿರುವ ಈ ಒಂದು ರಾಷ್ಟ್ರ ಧ್ವಜ ವನ್ನು ತಗೆಯುತ್ತಾರೆ ಎಂಬುದನ್ನು ಕಾದು ನೋಡ ಬೇಕು.