ಹುಬ್ಬಳ್ಳಿ –
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸ್ವಾವಲಂಬನೆ ಯೋಜನೆಯಡಿ ಮಂಜೂರಾದ 2 ಆಟೋ ರಿಕ್ಷಾ ವಿತರಣೆಯನ್ನು ಹುಬ್ಬಳ್ಳಿಯಲ್ಲಿ ಮಾಡಲಾಯಿತು. ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಇಬ್ಬರು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಅನಾರೋಗ್ಯ, ಮಳೆಯಂಥ ಇನ್ನಿತರೆ ತುರ್ತು ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರ ಅವಶ್ಯಕತೆ ಹೆಚ್ಚಿದ್ದು, ಹಗಲುರುಳೆನ್ನದೇ ಗ್ರಾಹಕರಿಗೆ ಸೇವೆ ನೀಡುವ ಹಾಗೂ ಅವರನ್ನು ನಿಗದಿತ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವ ರಿಕ್ಷಾ ಚಾಲಕರ ಕಾರ್ಯ ಶ್ಲಾಘನೀಯ ಎಂದರು.
ಚಾಲಕರು ಗ್ರಾಹಕರೊಂದಿಗೆ ಅತ್ಯಂತ ಸೌಜನ್ಯದಿಂದ ಹಾಗೂ ಸೌಹಾರ್ದತೆಯಿಂದ ವರ್ತಿಸಿ ಗ್ರಾಹಕರ ಮನ ಗೆಲ್ಲಬೇಕು. ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿ ರಿಕ್ಷಾ ಚಾಲಕರಿಗೆ ಸಂಕ್ರಾಂತಿ ಹಬ್ಬದ ಶುಭ ಹಾರೈಸಿದರು.
ಈ ಒಂದು ಆಟೋ ಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಜಿಲಾನಿ ಬ್ಯಾಡಗಿ, ತನ್ವೀರ್, ಮುನ್ನಾ ಐನಾಪುರಿ, ಅನೀಸ್ ಜಮಾದಾರ್,ಸೇರಿದಂತೆ ಇತರರು ಇದ್ದರು.