ಹುಬ್ಬಳ್ಳಿ –
ಹುಬ್ಬಳ್ಳಿ ಪ್ರವಾಸಿ ಮಂದಿರದ ಆವರಣದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಜಗದೀಶ್ ನಾಯಕ್ ಅವರ ಮುಂದಾಳತ್ವ ಹಾಗೂ ಇಂಡಿಯಾ ಫುಡ್ ಬ್ಯಾಂಕಿಂ ಗ್ ನೆಟ್ ವರ್ಕ್ ಸಂಸ್ಥೆ ಸಹಯೋಗದೊಂದಿಗೆ ಧಾರವಾಡ ಜಿಲ್ಲೆಯ 3,64,000 ಆರೊಗ್ಯ ಕಾರ್ಯ ಕರ್ತರು,ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ದೈನಂದಿನ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಸಮಾಜದ ದುರ್ಬಲ ವರ್ಗಕ್ಕೆ ಸೇರಿದ ಜನರನ್ನು ಒಳಗೊಂಡ ಕರೋನ ವಾರಿಯರ್ಸ್ ಗೆ ಆಹಾರ ಸಾಮಗ್ರಿ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡ ಲಾಯಿತು.

ಕಂಪನಿಯಿಂದ ತಯಾರು ಮಾಡಿದಂತ ಹೆಚ್ಚಿನ ಉತ್ಪನ್ನಗಳನ್ನು ಜಿಲ್ಲೆಯ Front line workers ಗಾಗಿ ವಿಶೇಷ ಕಿಟ್ ಗಳನ್ನಾಗಿ ಮಾಡಿಕೊಟ್ಟಿದ್ದಾರೆ. ಈ ಕಿಟ್ ನಲ್ಲಿ ದಿನಸಿ ಪದಾರ್ಥಗಳೊಂದಿಗೆ ಚಿಕ್ಕ ಮಕ್ಕಳೂ ಇಷ್ಟಪಡುವ ಚಾಕ್ಲೇಟ್, ನೂಡಲ್ಸ್, ಬಿಸ್ಕೆಟ್ ಹಾಗೂ ಇತ್ಯಾದಿ ಪದಾರ್ಥಗಳಿದ್ದು ಇವುಗಳ ಪ್ಯಾಕೆಟ್ ಗಳನ್ನು ವಿತರಿಸಲಾಯಿತು

ಕೊರೋನಾ ಸಂಕಷ್ಟದ ಸಮಯದಲ್ಲಿ ನಮ್ಮ ಜಿಲ್ಲೆ ಯ ಹೆಚ್ಚಿನ ಜನರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯ ವಾಗುವಂತೆ ಈ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ಅದರಲ್ಲೂ ಗ್ರಾಮೀಣ ವಿಕಾಸ ಸಂಸ್ಥೆಯ ಮುಖ್ಯಸ್ಥ ಜಗದೀಶ್ ನಾಯಕ ಅವರ ಒಂದು ಸಾಮಾಜಿಕ ಕಾಳಜಿಯಿಂದ ಈ ಬಾರಿಯೂ ವಿತರಣೆ ಮಾಡಲಾಗುತ್ತಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.ಇಂಡಿಯಾ ಫುಡ್ ಬ್ಯಾಂಕಿಂಗ್ ನೆಟ್ ವರ್ಕ್ ಸಂಸ್ಥೆ ಸಹಕಾರ ಗ್ರಾಮ ವಿಕಾಸ ಸಂಸ್ಥೆಯ ಜಗದೀಶ್ ನಾಯಕ ಅವರ ಮುಂದಾಳತ್ವದಲ್ಲಿ ಈ ಒಂದು ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಯವರು ಕರೋನಾ ವಾರಿಯ ರ್ಸ್ ಗಳಿಗೆ ಆಹಾರದ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ಮಾಧ್ಯಮ ಮಿತ್ರರಿಗೆ, ವೈಧ್ಯರಿಗೆ,ನರ್ಸ್ ಗಳಿಗೆ ಪಾಲಿ ಕೆಯ ಸ್ವಚ್ಚತಾ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆಹಾರದ ಸಾಮಗ್ರಿಗಳನ್ನು ವಿತರಿಸಿದರು. ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥ ಜಗದೀಶ್ ನಾಯಕ, ಪಾಲಿಕೆಯ ಆಯುಕ್ತರಾದ ಸುರೇಶ್ ಇಟ್ನಾಳ್, ಬಿಜೆಪಿ ಮುಖಂಡ ಉಮೇಶ ದುಶಿ,ಶರಣು ಅಂಗಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಮಂಜು ಸೇರಿದಂತೆ ಹಲವರು ಈ ಒಂದು ಸಂಸ್ಥೆಯ ಒಳ್ಳೇ ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರದ ಸಚಿವರಿಗೆ ಸಾಥ್ ನೀಡಿ ಮೆರಗು ನೀಡಿದರು. ಅಲ್ಲದೇ ಗ್ರಾಮ ವಿಕಾಸ ಸಂಸ್ಥೆಯ ಪರವಾಗಿ ಆಹಾರದ ಸಾಮಗ್ರಿಗಳನ್ನು ವಿತರಿಸಿದರು.
