ಧಾರವಾಡ –
ಮಹಾಮಾರಿ ಕರೊನಾದ ನಡುವೆ ಐತಿಹಾಸಿಕ ಧಾರವಾಡದ ಗರಗ ಮಡಿವಾಳೇಶ್ವರ ಜಾತ್ರೆ ನಡೆಯುತ್ತಿದೆ.ಉತ್ತರ ಕರ್ನಾಟಕದ ಐತಿಹಾಸಿಕ ಈ ಒಂದು ಜಾತ್ರೆ ಇಂದಿನಿಂದ ಆರಂಭವಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ನಿಜಕ್ಕೂ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಹೌದು ಜಾತ್ರೆ ಆರಂಭವಾಗಿದ್ದು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಕಂದಾಯ ಇಲಾಖೆಯ ಅಧಿಕಾರಿ ಗಳು ತಹಶೀಲ್ದಾರ್ ಸಂತೋಷ ಬಿರಾದಾರ ಮಾರ್ಗದರ್ಶನದಲ್ಲಿ ನಿಜಕ್ಕೂ ಒಳ್ಳೇಯ ಕೆಲಸವನ್ನು ಮಾಡಿದ್ದಾರೆ.

ಜಾತ್ರೆಗೆ ಬಂದವರಿಗೆ ಉಚಿತವಾಗಿ ಮಾಸ್ಕ್ ಗಳನ್ನು ವಿತರಣೆ ಮಾಡಿದ್ದಾರೆ. ಹೌದು ಇಂದಿನಿಂದ ಆರಂಭ ಗೊಂಡ ಜಾತ್ರೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದ್ದಾರೆ.

ಬರೊಬ್ಬರಿ 30 ಸಾವಿರ ಮಾಸ್ಕ್ ಗಳನ್ನು ಖರೀದಿ ಮಾಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಾಲ್ಕೈದು ತಂಡಗಳನ್ನು ಮಾಡಿದ್ದು ಅಲ್ಲಲ್ಲಿ ನಿಂತು ಕೊಂಡು ಜಾತ್ರೆಗೆ ಬಂದವರಿಗೆ ಮಾಸ್ಕ್ ಗಳನ್ನು ನೀಡಿದ್ದಾರೆ.

ತಹಶೀಲ್ದಾರ್ ಸಂತೋಷ ಬಿರಾದರ ಉಪ ತಹಶೀಲ್ದಾರ ನಾಡಕಚೇರಿ ಗರಗದ ಸುನೀಲ ಕುಲಕರ್ಣಿ, ಕಂದಾಯ ನಿರೀಕ್ಷಿತ ಮಂಜುನಾಥ ಗೂಳಪ್ಪನವರ, ಗರಗ ಗ್ರಾಮ ಲೆಕ್ಕಾಧಿಕಾರಿ ಮಹೇಶ ನಾಗವ್ವನವರ,ಗಂಗಾಧರಮೇದಾರ ಅರವಿಂದ ಚವ್ಹಾಣ,

ರೇಖಾ ಗಾಣಿಗೇರ ಶೋಭಾ ಮಲಗುಂದ ನಬೀಸಾಬ ನದಾಫ್ ಮಂಜುನಾಥ ಜಲಗೇರಿ, ವಿಶ್ವನಾಥ ನಂದಿಕೊಪ್ಪ ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇವರೊಂದಿಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಯವರು ಕೂಡಾ ಸಾಥ್ ನೀಡಿದ್ದಾರೆ ಇವರ ಸಹಕಾರದೊಂದಿಗೆ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.