ಧಾರವಾಡ –
ಆಜಾದಿಕಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಹುಬ್ಬಳ್ಳಿಯ ರೊಳ್ಳಿ ದಂಪತಿಗಳಿಂದ ಸಮಾಜೋಪಯೋಗಿ ಕಾರ್ಯ ಹೌದು ಇಂತಹ ದೊಂದು ಸಮಾಜಮುಖಿ ಕಾರ್ಯ ವೊಂದು ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ಕಂಡು ಬಂದಿತು.
ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ಡಾನ ಅವರ ಪ್ರೇರಣೆಯಿಂದ ಹುಬ್ಬಳ್ಳಿಯ ಸಂಜಯ ಮತ್ತು ರೇಖಾ ರೊಳ್ಳಿ ದಂಪತಿಗಳು ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಅನಿರೀಕ್ಷಿತವಾಗಿ ಆಗಮಿಸಿ ಎಲ್ಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೇಖಾ ರೊಳ್ಳಿ ಈ ದಿನ ಎಲ್ಲಾ ಮನೆಮನೆಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ದೇಶದ ಬಹುತೇಕ ಜನರು ತಮ್ಮ ತಮ್ಮ ಮನೆ ಗಳ ಮೇಲೆ ಧ್ವಜಾರೋ ಹಣ ಮಾಡಿದ್ದು ಇದು ದೇಶಭಕ್ತಿ ಯನ್ನು ಇಮ್ಮಡಿಗೊಳಿಸಿದೆ ಜೊತೆಗೆ ನಾವುಗಳು ಪರಿಸರ ವನ್ನು ಸಂರಕ್ಷಣೆ ಮಾಡುವುದು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದು ಕೂಡಾ ಈ ಪ್ರಕೃತಿಗೆ ಮಾರಕವಾಗಿದ್ದು ಜಾಗತಿಕ ತಾಪ ಮಾನ ಹೆಚ್ಚಾಗಿದೆ
ಆದ್ದರಿಂದ ನಾವೆಲ್ಲರೂ ಹೇಗೆ ದೇಶಭಕ್ತಿಯನ್ನು ಮನೆಮನೆ ಗಳಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ದೇಶ ಭಕ್ತಿಯನ್ನು ಮೆರೆದಿದ್ದೇವೆ ಅದೇ ರೀತಿ ಪ್ರಕೃತಿಗೆ ಮಾರಕ ವಾಗುವ ಯಾವುದೇ ಕಾರ್ಯವನ್ನು ನಾವುಗಳು ಮಾಡು ವುದಿಲ್ಲ ಅಂತ ಸಂಕಲ್ಪ ಮಾಡುವುದು ತೀರ ಅಗತ್ಯವಿದೆ ಎಂದರು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾಮ ಪಂಚಾಯತಿ ಸದಸ್ಯೆ ಕುಮಾರಿ ರೇಣುಕಾ ಅಸುಂಡಿ ಮಾತನಾಡಿ ಸಂಜಯ ರೊಳ್ಳಿ ಮತ್ತು ರೇಖಾ ರೊಳ್ಳಿ ಅವರ ನಿಷ್ಕಲ್ಮಶ ವಾದ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಈ ದೇಶದಲ್ಲಿ ದಿನಕ್ಕೆ ಲಕ್ಷ ಲಕ್ಷ ಗಳಿಸುವ ಜನರಿದ್ದಾರೆ ಆದರೆ ಅವರೆಲ್ಲರೂ ಇಂತಹ ಸರಕಾರಿ ಶಾಲೆಗಳ ಮಕ್ಕಳಿಗೆ ಸಹಾಯ ಮಾಡು ವುದಿಲ್ಲ
ಆದರೆ ರೊಳ್ಳಿ ದಂಪತಿಗಳಂತಹವರು ಕೆಲವೇ ಕೆಲವು ಜನರು ಇದ್ದಾರೆ ಅವರುಗಳು ಯಾವುದೇ ಪ್ರಚಾರ ಬಯಸದೇ ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾ ನರವರು ಮತ್ತು ವೇಸ್ಟ್ ಪ್ಲಾಸ್ಟಿಕ್ ಸಂಗ್ರಹಿಸಿ ಅದನ್ನು ಮಾರಿ ಸರಕಾರಿ ಶಾಲೆಗಳ ಮಕ್ಕಳಿಗೆ ಸಹಾಯ ಮಾಡುತ್ತಿ ರುವ ವೀರೇಶ ಅರಕೇರಿ ಅವರಿಂದ ಪ್ರೇರಿತರಾದ ಈ ದಂಪತಿಗಳಿಗೆ ಗ್ರಾಮದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ,ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಸಮಾಜಸೇವಕ ಚಂದ್ರಶೇಖರ ಮಟ್ಟಿ ಇದ್ದರು ಶಿಕ್ಷಕ ಎಲ್ ಐ ಲಕ್ಕಮ್ಮನವರ ಸ್ವಾಗತಿಸಿದರು,ಸಹಶಿಕ್ಷಕಿ ಕೆ ಎಂ ಶಿವಳ್ಳಿ ವಂದಿಸಿದರು.