ಬೆಳಗಾವಿ-
ಗ್ರಾಮ ಪಂಚಾಯತಿ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ಆರಂಭವಾಗಿದೆ.ರಾಜ್ಯದ ಹಲವೆಡೆ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು ಇನ್ನೂ ಮತ ಚಲಾವಣೆ ಮಾಡಲು ಮತಗಟ್ಟೆಗೆ ಬರುವವರಿಗೆ ರಾಜಾರೋಷವಾಗಿ ಹಣವನ್ನು ಕೊಡಲಾಗುತ್ತಿದೆ.

ಹೌದು ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ ಎಚ್ ಗ್ರಾಮದಲ್ಲಿ ರಾಜಾ ರೋಷವಾಗಿ ಹಣವನ್ನು ಹಂಚಿಕೆ ಮಾಡಲಾಗುತ್ತಿರುವ ಘಟನೆ ಕಂಡು ಬಂದಿದೆ.ವಾರ್ಡ್ ನಂಬರ್ 4ರ ಅಭ್ಯರ್ಥಿ ಪರವಾಗಿ ಹಣವನ್ನು ಹಂಚಿಕೆ ಮಾಡಲಾಗುತ್ತಿದೆ.

ಮತಗಟ್ಟೆಗೆ ಆಗಮಿಸೋವರಿಗೆ ಹಣವನ್ನು ಕೈಯಲ್ಲಿ ವ್ಯಕ್ತಿಯೊಬ್ಬರು ನೀಡುತ್ತಿರುವ ಚಿತ್ರಣ ಕಂಡು ಬಂದಿತು.
ಬಹಿರಂಗವಾಗಿ ಹೀಗೆ ಹಣವನ್ನು ನೀಡುತ್ತಾ ಮತವನ್ನು ನಮ್ಮ ಅಭ್ಯರ್ಥಿಗೆ ಹಾಕುವಂತೆ ಈ ವ್ಯಕ್ತಿ ಮತದಾರರಿಗೆ ಆಮಿಷವನ್ನು ನೀಡುತ್ತಿದ್ದಾನೆ.
ಹೀಗೆ ಮತದಾನ ಕೇಂದ್ರದ ಮುಂದೆ ರಾಜಾ ರೋಷವಾಗಿ ಹಣವನ್ನು ಹಂಚಿಕೆ ಮಾಡುತ್ತಿದ್ದರೂ ಕೂಡಾ ಸುತ್ತ ಮುತ್ತಲಿದ್ದ ಯಾರೊಬ್ಬರು ಅದರಲ್ಲೂ ಪೊಲೀಸರಾಗಲಿ ಚುನಾವಣಾಧಿಕಾರಿಗಳಾಗಿ ನೋಡುತ್ತಿಲ್ಲ ಗಮನಿಸುತ್ತಿಲ್ಲ .
ಹೀಗಾಗಿ ಈ ವ್ಯಕ್ತಿಯ ಹಣ ಹಂಚಿಕೆ ಮತದಾನ ಕೇಂದ್ರದ ಮುಂದೆ ಜೋರಾಗಿದೆ.
