ಧಾರವಾಡ –
ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಒಂದರಿಂದ ಹತ್ತನೇಯ ತರಗತಿಯವರೆಗೆ ಅಧ್ಯಯನ ಮಾಡುತ್ತಿರುವ ಶಾಲಾ ಮಕ್ಕಳಿಗೆ ಗೋದಿ ಅಕ್ಕಿ ತೋಗರಿಬೆಳೆ ವಿತರಣೆ ಆರಂಭಗೊಂಡಿದೆ.

ನಿನ್ನೇಯಿಂದ ಶಾಲಾ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದ್ದು ಧಾರವಾಡ ಜಿಲ್ಲೆಯಲ್ಲೂ ವಿತರಣೆ ಆರಂಭಗೊಂಡಿದೆ. ಶಿಕ್ಷಣ ಇಲಾಖೆಯ ವತಿಯಿಂದ ಈ ಒಂದು ಕಾರ್ಯ ಆರಂಭವಾಗಿದ್ದು ಮಧ್ಯಾಹ್ನ ಉಪಹಾರ ಯೋಜನೆ ಗಾಗಿ ಪ್ರತಿಯೊಬ್ಬ ಮಕ್ಕಳಿಗಾಗಿ ಒಂದರಿಂದ ಹತ್ತನೇಯ ತರಗತಿಯವರೆಗಿನ ಮಕ್ಕಳಿಗೆ ಅಕ್ಕಿ ಗೋದಿ ಮತ್ತು ತೋಗರಿ ಬೇಳೆಯನ್ನು ವಿತರಣೆ ಮಾಡಲಾಗುತ್ತಿದೆ.
ಮಕ್ಕಳಿಗೆ ಕೊಡುತ್ತಿರುವುದು ಒಳ್ಳೇಯ ವಿಚಾರ ಆದರೆ ವಿತರಣೆಯಾದ ಅಕ್ಕಿಗಳಲ್ಲಿ ಎರಡು ಗುಣಮಟ್ಟದ ಅಕ್ಕಿಗಳು ಬಂದಿವೆಯಂತೆ. ಧಾರವಾಡದ ಕ್ಯಾರಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿರುವ ಅಕ್ಕಿಯಲ್ಲಿ ಎರಡು ಗುಣಮಟ್ಟದ್ದು ಬಂದಿದ್ದು ಇದರಿಂದ ಮಕ್ಕಳು ಪೊಷಕರು ಆತಂಕಗೊಂಡಿದ್ದಾರೆ.

ಕೆಲವೊಂದಿಷ್ಟು ಮಕ್ಕಳಿಗೆ ಬಿಳಿ ಅಕ್ಕಿಗಳು ಬಂದರೆ ಇನ್ನೂ ಕೆಲವೊಂದಿಷ್ಟು ಮಕ್ಕಳಿಗೆ ಕಂದು ಬಣ್ಣದ ಅಕ್ಕಿಗಳು ಬಂದಿವೆ. ಇದರಿಂದ ಗ್ರಾಮದಲ್ಲಿನ ಕೆಲ ಮಕ್ಕಳು ಪೊಷಕರು ಭಯಗೊಂಡಿದ್ದು ಉಪಯೋಗ ಮಾಡಬೇಕಾ ಬೇಡ ಎಂದು ಚಿಂತಿಸುತ್ತಿದ್ದು ಕೂಡಲೇ ಜಿಲ್ಲಾ ಶಿಕ್ಷಣ ಇಲಾಖೆ ಈ ಕುರಿತಂತೆ ಪರಿಶೀಲನೆ ಮಾಡೊದು ಅವಶ್ಯಕವಿದೆ. ಅಲ್ಲದೇ ಇದರಿಂದ ಭಯಗೊಂಡಿರುವ ಮಕ್ಕಳಿಗೆ ಪೊಷಕರ ಆಂತಕವನ್ನು ನಿವಾರಣೆ ಮೊಡೊದು ಅವಶ್ಯಕವಿದೆ