ಧಾರವಾಡ –
ವಿಕಲಚೇತನರಿಗೆ UDID ಕಾರ್ಡ್ ವಿತರಣೆ ಅಂಚಟಗೇರಿ ಗ್ರಾಮದಲ್ಲಿ ಕಾರ್ಡ್ ವಿತರಣೆ ಮಾಡಿದ ಅಧಿಕಾರಿ ಗಳು.ಹೌದು ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಅಂಗವಿಕಲರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್ ವಿತರಣೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ವಿತರಿಸಲಾಯಿತು.
ಎಂ.ಆರ್.ಡಬ್ಲೂ ಮಹಾಂತೇಶ ಕುರ್ತಕೋಟಿ ಮಾತನಾಡಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಲು ಯುಡಿಐಡಿ ಕಾರ್ಡ್ ಅವಶ್ಯಕವಾಗಿದೆ.ಹೀಗಾಗಿ ವಿಕಲಚೇತ ನರು ಕಡ್ಡಾಯವಾಗಿ ಯುಡಿಐಡಿ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಫರೀದಾ ಶಿರಗೇರಿ ಅವರು ಯುಡಿಐಡಿ ಹಾಗೂ ವಿವಿಧ ಸರ್ಕಾರದ ಯೋಜನೆಗಳ ಕುರಿತು ಮಾತನಾಡಿ ದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಭೀಮಪ್ಪ ವಾಲ್ಮೀಕಿ, ಕಾರ್ಯದರ್ಶಿ ಶಿವಾನಂದ ಅರ್ಜಿ, ಗ್ರಂಥಪಾಲಕ ಈಶ್ವರ ಬೊಮ್ಮನಹಳ್ಳಿ, ಬಿಲ್ಲ್ ಕಲೇಕ್ಟರ್ ಮಹಾದೇವಪ್ಪ ಕಲ್ಲವನವರ, ಮಹಾಂತೇಶ ಮೇಲಿನಮನಿ, ಗ್ರಾಮ ಪಂಚಾಯತ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..