This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

ಕಾರ್ಯಾಚರಣೆ ಯಶಸ್ವಿ ಕವಲಗೇರಿಯಲ್ಲಿ ಚಿರತೆ ಸೆರೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ

WhatsApp Group Join Now
Telegram Group Join Now

ಧಾರವಾಡ –


ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ
ಬೋನಿ(ಕೇಜ್)ಗೆ ನಿನ್ನೆ ತಡರಾತ್ರಿ ಚಿರತೆ ಸಿಕ್ಕಿ ಬಿದಿದ್ದು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಧಾರವಾಡ ತಾಲೂಕಿನ ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳಲ್ಲಿ ಚಿರತೆ ವಾಸವಾಗಿತ್ತು. ಗ್ರಾಮದ ರೈತರು ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದು,ಅದು ಎತ್ತರವಾಗಿ, ದಟ್ಟವಾಗಿ ಬೆಳೆದಿದ್ದ ರಿಂದ ಚಿರತೆ ಅಡಗಿಕೊಳ್ಳಲು ಸಹಾಯಕವಾಗಿತ್ತು.

ಅರಣ್ಯ ಇಲಾಖೆಯ ಡಿಎಪ್ಓ ನೇತೃತ್ವದಲ್ಲಿ ಸುಮಾರು 60 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ,ಅಧಿಕಾರಿಗಳು ಚಿರತೆ ಕಾರ್ಯಾಚರಣೆ ಯನ್ನು ನಿರಂತರವಾಗಿ ಮತ್ತು ತೀವ್ರವಾಗಿ ಮಾಡುತ್ತಿ ದ್ದರು ಎಂದಿದ್ದಾರೆ

ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳ ಮಧ್ಯ ಹಾಗೂ ಸುತ್ತಲೂ ಸುಮಾರು 6 ಕ್ಕೂ ಹೆಚ್ಚು ಬೋನಗಳನ್ನು ಮೌಂಸದೊಂದಿಗೆ ಇಟ್ಟಿದ್ದರು.ಬಹುಶಃ ನಿನ್ನ ತಡ ರಾತ್ರಿ ಅಥವಾ ಬೆಳಗಿನ ಜಾವ ಚಿರತೆ ಬೋನಿನಲ್ಲಿ ರುವ ಮೌಂಸ ತಿನ್ನಲು ಬಂದು ಸಿಕ್ಕಿ ಹಾಕಿ ಕೊಂಡಿದೆ.

ಚಿರತೆ ಸುರಕ್ಷಿತವಾಗಿ ಸೆರೆ ಸಿಕ್ಕಿದೆ.ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಡಿಎಪ್ಓ ಯಶಪಾಲ ನೇತೃತ್ವದ ಎಲ್ಲ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಭಿನಂದಿಸಿ ದ್ದಾರೆ.

ಇನ್ನೂ ಕಂದಾಯ ಇಲಾಖೆ,ಗ್ರಾಮ ಪಂಚಾಯತ, ಆರೋಗ್ಯ ಇಲಾಖೆ ಸಹಕಾರ ಈ ಒಂದು ಕಾರ್ಯಾ ಚರಣೆ ಯಲ್ಲಿ ಇದೆ.ಹೌದು ಚಿರತೆ ಕಾರ್ಯಾಚರಣೆ ಯಲ್ಲಿ ಅರಣ್ಯ ಇಲಾಖೆಯೊಂದಿಗೆ ಉಪವಿಭಾಗಾಧಿ ಕಾರಿ ಡಾ.ಗೋಪಾಲಕೃಷ್ಣ ಬಿ.ತಹಶಿಲ್ದಾರಸಂತೋಷ ಬಿರಾದಾರ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ,ಜಿಲ್ಲಾ ಪಂಚಾಯತ ಸಿಇಓ ಡಾ‌ಸುಶೀಲಾ ಬಿ ಅವರ ಮಾರ್ಗದರ್ಶನದಲ್ಲಿ ಕನಕೂರ ಗ್ರಾಮ ಪಂಚಾಯತ ಸಿಬ್ಬಂದಿಗಳು ಕವಲಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ಜನರಲ್ಲಿ ಚಿರತೆ ಕುರಿತು ಜಾಗೃತಿ, ಜನಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಲು ಸಹಕಾರ ಪಡೆದಿದ್ದಾರೆ.

ಮತ್ತು ಚಿರತೆ ಕಾರ್ಯಾಚರಣೆಗೆ ಅಗತ್ಯವಿರುವ ಸಹಾಯವನ್ಬು ನಿರಂತರವಾಗಿ ಮಾಡಿದ್ದಾರೆ.ವಿವಿಧ ಇಲಾಖೆಗಳ ಸಹಕಾರದಿಂದ ಚಿರತೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಗಳು ಹೇಳಿದರು.

ಕವಲಗೇರಿ ಗ್ರಾಮಸ್ಥರಿಗೂ ಕೃತಜ್ಞತೆ ಹೌದು ಚಿರತೆ ಕಾರ್ಯಾಚರಣೆ ಯಶ್ವಿಗೊಳಿಸಲು ಸಹಕರಿಸಿದ ಕವಲಗೇರಿ ಗ್ರಾಮಸ್ಥರಿಗೆ,ಅಲ್ಲಿನ ರೈತರಿಗೆ ಜಿಲ್ಲಾಧಿ ಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ನೃಪತುಂಗ ಬೆಟ್ಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆ ಇರುವ ಕುರಿತು ಮತ್ತೆ ಯಾವುದೇ ಪುರಾವೆ, ಗುರುತುಗಳು ಕಂಡುಬಂದಿಲ್ಲ. ಅರಣ್ಯ ಇಲಾಖೆಯ ಒಂದು ತಂಡ ನೃಪತುಂಗ ಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪ್ರತಿದಿನ ನಿರತಂರವಾಗಿ ಚಿರತೆಗಾಗಿ ಕಾರ್ಯಾಚರಣೆ ಮಾಡುತ್ತಿದೆ.

ಹುಬ್ಬಳ್ಳಿ ನೃಪತುಂಗಬೆಟ್ಟ ಹಾಗೂ ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಸಿಕ್ಕಿರುವ ಚಿರತೆ ಮಲ(ಲದ್ದಿ)ವನ್ನು ಎರಡು ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎಂಬುವದನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಾಗಿ ಈಗಾಗಲೇ ಹೈದ್ರಾಬಾದ್ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಜಿಲ್ಲಾಡಳಿತ,ಅರಣ್ಯ ಇಲಾಖೆ ಈ ವರದಿ ಬರುವ ನಿರೀಕ್ಷೆಯಲ್ಲಿದೆ.

ಅಲ್ಲಿವರೆಗೂ ಸಾರ್ವಜನಿಕರು ಜಾಗೃತಿಯಿಂದ ಇದ್ದು,ಜಿಲ್ಲಾಡಳಿತ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ನೀಡುವ ಸಲಹೆ,ಸೂಚನೆಗಳನ್ನು ಪಾಲಿಸು ವ ಮೂಲಕ ಚಿರತೆ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.ಮತ್ತು ಪ್ರಯೋಗಾಲಯದ ವರದಿ ಬರುವವರೆಗೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಸೆರೆ ಸಿಕ್ಕ ಚಿರತೆ ಇಂದು ಮರಳಿ ಕಾಡಿಗೆ ಹೌದು
ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಇಂದು ಬೆಳಿಗ್ಗೆ ಸೆರೆ ಹಿಡಿದಿರುವ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಇಂದು ರಾತ್ರಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡುತ್ತಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದು ಇತ್ತ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ ಜಿಲ್ಲಾಡಳಿತ ಸೇರಿದಂತೆ ಅರಣ್ಯ ಇಲಾಖೆಯವರಿಗೂ ಹಾಗೂ ಸಹಕಾರ ನೀಡಿದ ಕವಲಗೇರಿ ಗ್ರಾಮಸ್ಥರಿಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅಭಿನಂದನೆ ಹೇಳಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk