ಧಾರವಾಡ –
ವಿದ್ಯಾಕಾಶಿ ಖ್ಯಾತಿಯ ಧಾರವಾಡ ಜಿಲ್ಲೆ ಸಮಗ್ರ ವಾಗಿ ಅಭಿವೃದ್ಧಿ ಆಗಬೇಕು. ಶಿಕ್ಷಣ, ಪರಿಸರ, ಉದ್ಯೋಗ, ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಇತರ ಜಿಲ್ಲೆಗಳಿಗೆ ಮಾದರಿ ಆಗಬೇಕು. ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಯಾಗಿ ನನ್ನ ಸಂಪೂರ್ಣ ಸಹಕಾರ ಮತ್ತು ಪಯತ್ನವಿದೆ ಎಂದು ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿಗಳು ಆಗಿರುವ ಧಾರವಾಡ ಜಿಲ್ಲಾ ನೂತನ ಉಸ್ತುವಾರಿ ಕಾರ್ಯದರ್ಶಿ ಅನ್ಬುಕು ಮಾರ ಅವರು ಹೇಳಿದರು.
ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿ, ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣ ದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧಿಕಾರಿಗಳನ್ನು ಉದ್ದೇಶಿಸಿ ಮಾತ ನಾಡಿದರು.
ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಇಲಾಖಾ ವಾರು ಬಾಕಿ ಇರುವ ಪ್ರಸ್ತಾವನೆ, ಕಡತಗಳ ಮಾಹಿತಿಯನ್ನು ನೀಡಿ ಸರ್ಕಾರದ ಹಂತದಲ್ಲಿ ಆಯಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಇಲಾಖೆ ಮುಖ್ಯಸ್ಥರೊಂದಿಗೆ ಚರ್ಚಿಸಿ ಆದಷ್ಟು ಬೇಗ ಅವುಗಳನ್ನು ಪರಿಹರಿಸುತ್ತೇನೆ ಎಂದು ಅವರು ಹೇಳಿದರು.
ಜಿಲ್ಲೆಯ ಹಸರೀಕರಣಕ್ಕೆ ಆದ್ಯತೆ ನೀಡಿ, ಎಲ್ಲ ಸರ್ಕಾರಿ ಕಟ್ಟಡ, ಕಾಮಗಾರಿ ಸ್ಥಳ, ಶಾಲೆ, ಹಾಸ್ಟೇಲ್, ಆಸ್ಪತ್ರೆ ಆವರಣಗಳಲ್ಲಿ ಗಿಡ ನೆಡಿ, ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಜಮೀನು, ಪಾರ್ಕ್‍ಗಳಲ್ಲಿ ಮಿನಿ ಫಾರೆಸ್ಟ್ ನಿರ್ಮಿಸಬೇಕು. ಮಿನಿ ಇಕೊ ಸಿಸ್ಟಮ್ ಮಾಡುವುದರಿಂದ ಸುಂದರ ಪರಿಸರ, ಉತ್ತಮ ಆರೋಗ್ಯದೊಂದಿಗೆ ನೈಸರ್ಗಿಕ ಸಂಪನ್ಮೂಲದ ಹೆಚ್ಚಳವಾಗುತ್ತದೆ ಎಂದು ಉಸ್ತುವಾರಿ ಕಾರ್ಯದರ್ಶಿ ಅನ್ಬುಕು ಮಾರ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಜಲ್ ಜೀವನ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ ಮಾಡಿದ ಅವರು, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಸಿಗಬೇಕು,ಕಲ್ಮಶವಾದ ಅಥವಾ ಅಶುದ್ಧ ನೀರು ಸರಬರಾಜು ಕಂಡುಬಂದರೆ, ಆ ಸ್ಥಳಕ್ಕೆ ಅಧಿಕಾರಿ ಗಳು ತಕ್ಷಣ ಭೇಟಿ ನೀಡಿ ಸಮಸ್ಯೆ ಪರಿಹರಿಸ ಬೇಕು ಜಲ್ ಜೀವನ ಮಿಷನ್ ಕಾಮಗಾರಿಗಳನ್ನು ತ್ವರೀತವಾಗಿ ಪೂರ್ಣಗೊಳಿಸಬೇಕು.
ಕಾಮಗಾರಿ ಮುಗಿದ ಗ್ರಾಮಗಳಿಗೆ ನೀರು ಸರಬ ರಾಜು ಆರಂಭಿಸಿ, ಸಂಬಂಧಿಸಿದ ಸ್ಥಳೀಯ ಆಡಳಿತಕ್ಕೆ ಅದನ್ನು ಹಸ್ತಾಂತರಿಸಬೇಕೆಂದು ಅವರು ತಿಳಿಸಿದರು.ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ರೈತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಉತ್ತಮ ಕೃಷಿ ಸಲಹೆ ನೀಡಬೇಕು. ರೈತರಿಗೆ ಬೀಜ, ಗೊಬ್ಬರದೊಂದಿಗೆ ಬೆಳೆ ವಿಮೆ ಕುರಿತು ಜಾಗೃತಿ ಮೂಡಿಸಬೇಕು.
ಜಿಲ್ಲೆಯಲ್ಲಿ ಕೃಷಿ ಸಮ್ಮಾನ್ ಯೋಜನೆಗೆ ಸಂಬಂಧಿಸಿದಂತೆ, ಶೇ.88 ರಷ್ಟು ರೈತರು ಇ-ಕೆವೈಸಿ ಮಾಡಿಕೊಂಡಿದ್ದಾರೆ. ಇನ್ನುಳಿದ ಶೇ.12 ರಷ್ಟು ಅಂದರೆ 14,516 ಜನರ ರೈತರು ತಮ್ಮ ಇ-ಕೆವೈಸಿ ಮಾಡಿಸಿಕೊಳ್ಳಲು ಅವರಿಗೆ ಜಾಗೃತಿ ಮೂಡಿಸಬೇಕು.ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಶ್ರಮಿಸಿ ಇದನ್ನು ಶೇ.100 ರಷ್ಟು ಗುರಿ ಸಾಧಿಸಬೇಕೆಂದು ಅವರು ತಿಳಿಸಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಮಾಡಿ, ಆರೋಗ್ಯ ಇಲಾಖೆ ಯೋಜನೆಗಳು ಜನರಿಗೆ ತಲುಪುತ್ತಿವೆ. ಆಸ್ಪತ್ರೆಗಳಲ್ಲಿ ಹೆರಿಗೆ ಸಂಬಂಧ ಉಂಟಾಗುವ ತಾಯಿ ಮರಣದ ಬಗ್ಗೆ ಹೆಚ್ಚು ಗಮನಹರಿಸಬೇಕು. ತಾಯಿ ಮರಣ ಸಂಭವಿಸಿದ ಮಾಹಿತಿಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ತಕ್ಷಣ ನೀಡ ಬೇಕು.ಡಿ.ಸಿ. ಅಥವಾ ಡಿ.ಸಿ. ಅವರು ನೇಮಿಸಿದ ಅಧಿಕಾರಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಸ್ಥಳದಲ್ಲಿ ಕಾರಣ ತಿಳಿದುಕೊಳ್ಳಬೇಕು. ಇಂತಹ ಪ್ರತಿ ಪ್ರಕರಣಗಳನ್ನು ಖುದ್ದಾಗಿ ಪರಿಶೀಲಿಸುವುದ ರಿಂದ ತಾಯಿ ಮರಣದ ಸಂಖ್ಯೆ ಕಡಿಮೆ ಮಾಡಬ ಹುದು ಎಂದು ಅನ್ಬುಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಮಳೆ ಇತ್ತು. ಕಳೆದ ಒಂದು ವಾರ ದಿಂದ ನಿರಂತರ ಮಳೆ ಆಗಿ, ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಗಸ್ಟ್‍ವರೆಗೆ ಕಾಲಾವಕಾಶವಿದೆ.
ಮಳೆ ಉತ್ತಮವಾಗಿದ್ದರಿಂದ ಕೆಲವು ರೈತರು ಬಿತ್ತನೆ ಸೇರಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ ದ್ದಾರೆ ಎಂದು ಹೇಳಿದರು.ವಿವಿಧ ಇಲಾಖೆಗಳ ವಸತಿ ನಿಲಯಗಳಿಗೆ ಹೊಸ ಕಟ್ಟಡ ಮತ್ತು ಹೊಸ ಹಾಸ್ಟೆಲ್‍ಗಳ ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಅವರು ವಿನಂತಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಮಾತನಾಡಿ, ಜಿಲ್ಲಾ ಪಂಚಾಯತ್ ಯೋಜನೆಗಳು ಅನುಷ್ಠಾನ ಹಂತದಲ್ಲಿದ್ದು, ಪ್ರತಿ ಕಾಮಗಾರಿಗಳನ್ನು ಕ್ಷೇತ್ರ ಭೇಟಿ ಮೂಲಕ ಪರಿಶೀಲಿಸಲಾಗುತ್ತಿದೆ. ಕಾಮಗಾ ರಿಗಳು ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಮಳೆಗಾಲದಲ್ಲಿ ಮಹಾನಗರ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಸರಬರಾಜು, ನಿರಂತರ ನೀರು ಯೋಜನೆ ಕುರಿತು ವಿವರಿಸಿದರು. ಸಾರ್ವಜನಿಕರ ನೆರವಿಗೆ ಸಹಾಯವಾಣಿ ಆರಂಭಿಸಲಾಗಿದೆ. ಮತ್ತು ಅಧಿಕಾರಿ,ಸಿಬ್ಬಂದಿಗಳ ತಂಡಗಳನ್ನು ರಚಿಸಲಾ ಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸ್ವಾಗತಿ ಸಿದರು ಉಪವಿಭಾಗಾಧಿಕಾರಿ ಅಶೋಕ ತೇಲಿ ವೇದಿಕೆಯಲ್ಲಿದ್ದರು.ಸಭೆಯಲ್ಲಿ ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ, ಪಿ.ಆರ್.ಇ.ಡಿ., ಪಿಡಬ್ಲ್ಯೂಡಿ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕಂದಾಯ ಇಲಾಖೆ, ಕಿಮ್ಸ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವರದಿ ಯನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ಪಂಚಾಯತ್ ಉಪಕಾ ರ್ಯದರ್ಶಿ ಬಿ.ಎಸ್. ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ, ಆಹಾರ ಇಲಾಖೆ ಜಂಟಿ ನಿರ್ದೇಶಕ ವಿನೋದಕು ಮಾರ ಹೆಗ್ಗಳಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾ ಬಕಾಷ್ ಎಂ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸರೋಜಾ ಹಳಕಟ್ಟಿ, ತಹಶೀಲ್ದಾರರಾದ ಕೆ.ಎಸ್. ಕಲಗೌಡ, ಪ್ರಕಾಶ ನಾಶಿ, ಡಾ. ಮೋಹನ ಭಸ್ಮೆ, ಬಸವರಾಜ ಬೆಣ್ಣೆಶಿರೂರ, ಪ್ರಕಾಶ ಹೊಳೆಪ್ಪನವರ, ಶೈಲೇಶ ಪರಮಾನಂದ, ಮಹಾನಗರ ಪಾಲಿಕೆ ಅಪರ ಆಯುಕ್ತ ಸತ್ಯಪ್ಪ ನರಗಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..