ಸರ್ಕಾರಿ ನೌಕರರ ವಿಶೇಷ ಯೋಗ ಶಿಬಿರ ಮುಕ್ತಾಯ ನೌಕರರು ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ ಕರೆ…..

Suddi Sante Desk

ಧಾರವಾಡ –

ವಾರದ ಐದು ದಿನ ನಿರಂತರವಾಗಿ ಯೋಗ ಶಿಬಿರ ಆಯೋಜನೆ; ಜಿಲ್ಲೆಯ ನೌಕರರು ಸದುಪಯೋಗ ಪಡೆಯಲಿ: ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ

ಅಂತರಾಷ್ಟ್ರೀಯ ಯೋಗದಿನಾಚರಣೆ ಅಂಗವಾಗಿ ರಾಜ್ಯ ಸರಕಾರಿ ನೌಕರರಿಗೆ ಸಂಘದಿಂದ ಜೂ.21 ರಿಂದ ಜು.3ರ ವೆರೆಗೆ ಪ್ರತಿದಿನ ಬೆಳಿಗ್ಗೆ 6:30 ರಿಂದ 7:30 ರ ವರೆಗೆ ಆಯೋಜಿಸಿದ್ದ ವಿಶೇಷ ಯೋಗ ಶಿಬಿರ ಯಶಸ್ವಿಯಾಗಿ ಮುಕ್ತಾಯವಾಗಿದ್ದು ಬರುವ ಸೋಮವಾರದಿಂದ ವಾರದ ಐದು ದಿನ ಉಚಿತವಾಗಿ ನೌಕರರಿಗೆ ಉಚಿತ ಯೋಗ ಶಿಬರವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಹೇಳಿದರು.

ಅವರು ಇಂದು ಬೆಳಿಗ್ಗೆ ಸರಕಾರಿ ನೌಕರ ಸಂಘದ ಸಭಾವ ನದಲ್ಲಿ ಆಯೋಜಿಸಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ 15 ದಿನಗಳಿಂದ ಜರುಗಿದ ಯೋಗ ಶಿಬಿರದ ಲಾಭ ವನ್ನು ವಿವಿಧ ಇಲಾಖೆಗಳ ನೌಕರರು ಮತ್ತು ಕುಟುಂಬ ಸದಸ್ಯರು ಪಡೆದಿದ್ದಾರೆ.

ನಿರಂತರ ಕೆಲಸದ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಹ ಜಿಲ್ಲೆಯ ಎಲ್ಲ ನೌಕರರ ಸಲುವಾಗಿ ನೌಕರಭವನದಲ್ಲಿ ನಿರಂತರ ಯೋಗಾಭ್ಯಾಸವನ್ನು ಏರ್ಪಡಿಸಲಾಗಿತ್ತು.ಇದಕ್ಕೆ ನೌಕರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.ಆದ್ದರಿಂದ ನಾಳೆ ಜು.4 ರಿಂದ ಪ್ರತಿದಿನ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನಗಳ ಕಾಲ ಮುಂಜಾನೆ 6:30 ರಿಂದ 7:30 ರವರೆಗೆ ಯೋಗ ಶಿಕ್ಷಕರಾದ ಮಲ್ಲನ ಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಯೋಗ ಅಭ್ಯಸವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.ಇದರ ಸದುಪಯೋಗವನ್ನು ನಮ್ಮ ನೌಕರ ಬಂಧುಗಳು ಅವರ ಕುಟುಂಬ ಸಮೇತರಾಗಿ ಪಡೆಯಬಹುದು ಎಂದು ಎಸ್.ಎಫ್.ಸಿದ್ದನಗೌಡರ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಶ್ರೀಮತಿ ಡಾ.ಆಶಾರಾಣಿ ಎನ್.ಅವರು ಮಾತನಾಡಿ, ಯೋಗ ಅಭ್ಯಾಸದಿಂದ ಆಗುವ ಲಾಭಗಳ ಬಗ್ಗೆ ಹಾಗೂ ನಮ್ಮ ನಿತ್ಯ ಆಹಾರ ಪದ್ದತಿ ಹೇಗಿರಬೇಕು ಎಂಬುದರ ಬಗ್ಗೆ ಉಪನ್ಯಾಸ ನೀಡಿದರು.ಆಯುಷ್ ಇಲಾಖೆಯ ಯೋಗ ಶಿಕ್ಷಕ ಡಾ. ಶ್ರೀಧರ ಅವರು ವಿಶೇಷ ಯೋಗ ಆಸನಗಳನ್ನು ಮಾಡಿಸಿದರು.

ಪ್ರತಿದಿನದ ಯೋಗಭ್ಯಾಸದಲ್ಲಿ ನಿರಂತರವಾಗಿ ಹಿರಿಯ ಅಧಿಕಾರಿಗಳಾದ ಜೆ.ಸಿ. ಕಠಾರೆ,ಎ.ಎ.ಖಾಜಿ.ಆರ್.ಪಿ. ದ್ಯಾಬೇರಿ, ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಸುಬ್ಬಾಪೂರಮಠ ಮತ್ತು ಇತರ ಪದಾಧಿಕಾರಿ ಗಳು, ಇಲಾಖೆಗಳ ನೌಕರರು ಭಾಗವಹಿಸಿದ್ದರು.

ನಿರಂತರವಾಗಿ ಯೋಗ ಅಭ್ಯಾಸದಿಂದ ಆಗುವ ಲಾಭಗಳ ಬಗ್ಗೆ ವಿವಿದ ಇಲಾಖೆ ನೌಕರರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರತಿದಿನ ಯೋಗಾಭ್ಯಾಸವನ್ನು ಹೇಳಿ ಕೊಟ್ಟ ಧಾರವಾಡ ಜಿಲ್ಲಾ ಪತಂಜಲಿ ಯೋಗ ಸಂಘಟ ನೆಯ ಮಲ್ಲನಗೌಡ ಪಾಟೀಲ ಮತ್ತು ಮಹಾವೀರ್ ಗುಂಡೇವಾಡಿರವರಿಗೆ ಸತ್ಕರಿಸಿ ಧನ್ಯವಾದಗಳನ್ನು ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಭೂಮಾಪನ ಇಲಾಖೆಯ ಹಿರಿಯ ಸಿಬ್ಬಂದಿ ಹಿರೇಗೌಡರ ಅವರ ಪುತ್ರಿ ವಿನುತಾ ಅವರು ವಿಶೇಷ ಯೋಗ ಆಸನಗಳನ್ನು ಪ್ರದರ್ಶಿಸಿದರು.

ಕಾರ್ಯದರ್ಶಿ ಮಂಜುನಾಥ ಯಡಳ್ಳಿ ಸ್ವಾಗತಿಸಿದರು. ವ್ಹಿ ಬಿ. ಕುರುಬೆಟ ನಿರೂಪಿಸಿದರು.ಕೋಶಾಧ್ಯಕ್ಷ ರಾಜಶೇಖರ ಬಾಣದ ವಂದಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಸರಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.