ಬೆಳಗಾವಿ –
ಮಹಾಮಾರಿ ಕೊರೋನಾ ಎರಡನೇ ಅಲೆಯ ಆತಂಕದ ನಡುವೆಯೂ ರಾಜ್ಯದಲ್ಲಿ ಉಪಚುನಾ ವಣೆ ನಡೆಯುತ್ತಿದೆ. ಇನ್ನೂ ಚುನಾವಣೆ ಹಿನ್ನಲೆ ಯಲ್ಲಿ ಪ್ರಚಾರ ಕಾರ್ಯ ಬಿಸಿಲಿನ ಹಾಗೇ ಚುರುಕಾ ಗಿದೆ.ಇನ್ನೂ ಏಪ್ರಿಲ್ 17ರಂದು ಬೆಳಗಾವಿ ಲೋಕಸ ಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು ಪ್ರಚಾರಕ್ಕೆ ಹೊರಟಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕಾರನ್ನು ತಡೆದು ಅಧಿಕಾರಿ ಗಳು ಪರಿಶೀಲನೆ ಮಾಡಿದರು.

ಹುಬ್ಬಳ್ಳಿಯಿಂದ ಬೆಳಗಾವಿಗೆ ತೆರಳುವ ವೇಳೆ ಮಾರ್ಗ ಮಧ್ಯೆ ಹಿರೇಬಾಗೇವಾಡಿ ಟೋಲ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಕಾರನ್ನು ತಡೆದು ಪರಿಶೀಲನೆ ನಡೆಸಿದರು. ಡಿ.ಕೆ. ಶಿವಕುಮಾರ್ ಅವರ ಕಾರನ್ನು ತಡೆದು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದರು

ಚುನಾವಣೆ ಆಯೋಗ ಕೂಡ ನಾಯಕರುಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿ ದ್ದಾರೆ. ಈ ವೇಳೆ ಚುನಾವಣಾಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರ ಕಾರ್ ತಡೆದು ತಪಾಸಣೆ ಮಾಡಿ ಕಳಿಸಿದರು

ಇನ್ನು ಇದೇ ಚುನಾವಣಾ ಪ್ರಚಾರದ ಸಲುವಾಗಿ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರನ್ನು ನಿನ್ನೆ ಮೊನ್ನೆಯಷ್ಟೇ ಸಹ ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿದ್ದರು.