ಧಾರವಾಡ –
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಆದೇಶವನ್ನು ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿ ದ್ದಾರೆ. ಮೇ 22 ರಿಂದ ಮೇ 24 ರ ಬೆಳಿಗ್ಗೆ 6 ಗಂಟೆ ವರೆಗೆ ಲಾಕ್ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಡೌನ್ ಮಾಡಿ ಆದೇಶವನ್ನು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಆದೇಶ ಮಾಡಿದ್ದಾರೆ.
ಇನ್ನೂ ಎರಡು ದಿನಗಳ ಈ ಒಂದು ಲಾಕ್ ಡೌನ್ ನಲ್ಲಿ ಜಿಲ್ಲೆಯಲ್ಲಿ ಪ್ರಮುಖವಾಗಿ ವೈದ್ಯಕೀಯ ಸೌಲ ಭ್ಯ ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಇನ್ನೂ ಹಣ್ಣು ತರಕಾರಿ ಹಾಲು ಮಾರಾಟಕ್ಕೆ ಬೆಳಿಗ್ಗೆ 7 ಗಂಟೆ ಯಿಂದ ರಾತ್ರಿ 8 ಗಂಟೆ ವರೆಗೆ ಅವಕಾಶಗಳನ್ನು ನೀಡಲಾಗಿದೆ.
ಇನ್ನೂ ಇದರೊಂದಿಗೆ ಸರ್ಕಾರಿ ವಾಹನಗಳಿಗೆ ಈ ಕೋವಿಡ್ ಕರ್ತವ್ಯ ಮಾಡುವವರಿಗೆ ಈ ಒಂದು ಆದೇಶ ಅನ್ವಯ ಆಗೊದಿಲ್ಲ.ಅಂತ್ಯ ಸಂಸ್ಕಾರಕ್ಕೆ ಐದು ಜನರಿಗೆ ಅವಕಾಶ ನೀಡಲಾಗಿದೆ. ಈ ಒಂದು ನಿಯಮಗಳನ್ನು ಯಾರಾದರೂ ತಪ್ಪಿದಲ್ಲಿ ಅಂಥ ವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಒಟ್ಟಾರೆ ನಾಳೆ ಮತ್ತು ನಾಡಿದ್ದು ಎರಡು ದಿನ ಸಂಪೂರ್ಣ ಲಾಕ್ ಡೌನ್ ಇದೆ ಹೊರಗೆ ಅನಾವ ಶ್ಯಕವಾಗಿ ಕಾಲಿಡುವ ಮುನ್ನ ಹುಷಾರಾಗಿರಿ