ಧಾರವಾಡ –
ಸಾಮಾನ್ಯವಾಗಿ ಯಾವುದೇ ಪಕ್ಷದ ನಾಯಕರ ಹುಟ್ಟು ಹಬ್ಬ ಬಂತೆಂದರೆ ಸಾಕು ಊರ ತುಂಬೆಲ್ಲಾ ರಾರಾಜಿವಂತೆ ಬ್ಯಾನರ್ ಬಂಟಿಂಗ್ಸ್ ಹಾಕಿ ಕೇಕ್ ಕಟ್ ಮಾಡಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸೊದನ್ನು ಕೇಳಿದ್ದೆವೆ ನೋಡಿದ್ದೆವೆ .
ಆದರೆ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದವರು ಶಾಸಕರ ಹುಟ್ಟು ಹಬ್ಬವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಣೆಗೆ ಮುಂದಾಗಿದ್ದಾರೆ.
ಹೌದು ನವಂಬರ್ 16 ರಂದು ಶಾಸಕ ಅಮೃತ ದೇಸಾಯಿ ಅವರಿಗೆ ಹುಟ್ಟು ಹಬ್ಬದ ಸಂಭ್ರಮ.ಹೀಗಾಗಿ ಏನಾದರೂ ಮಾಡಿ ಬರ್ಥಡೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಮತ್ತೊಂದೆಡೆ ಸಧ್ಯ ಬೆಳಕಿನ ಹಬ್ಬ ದೀಪಾವಳಿ ಹೀಗಾಗಿ ನೆಚ್ಚಿನ ಶಾಸಕರ ಹುಟ್ಟು ಹಬ್ಬವನ್ನು ಬಿಜೆಪಿ ಯುವ ಮೋರ್ಚಾದ ಘಟಕದವರು ವಿಭಿನ್ನವಾಗಿ ಅದರಲ್ಲೂ ಅರ್ಥವಾಗಿ ಆಚರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಬ್ಯಾನರ್ ಬಂಟಿಂಗ್ಸ್ ಹಾಕದೇ ದೀಪಾವಳಿ ಹಿನ್ನೆಲೆಯಲ್ಲಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಪಣತಿ ನೀಡಲು ಮುಂದಾಗಿದ್ದಾರೆ.ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಕ್ತಿ ಹಿರೇಮಠ ಈ ಪ್ಲಾನ್ ಮಾಡಿದ್ದು ಈಗಾಗಲೇ ನೂರಕ್ಕೂ ಹೆಚ್ಚು ಮಣ್ಣಿನ ಪಣತಿಗಳನ್ನು ನೀಡಿ ವಿಶೇಷವಾಗಿ ತಮ್ಮ ಶಾಸಕರ ಹುಟ್ಟು ಹಬ್ಬವನ್ನು ಆಚರಣೆ ಮಾಡಲು ಮುಂದಾಗಿದ್ದಾರೆ. ಪಣತಿಗಳನ್ನು ತೆಗೆದುಕೊಂಡು ಬಂದು ಒಂದೊಂದು ಕುಟುಂಬಕ್ಕೆ ಪ್ರತ್ಯೇಕವಾಗಿ ಪ್ಯಾಕ್ ಮಾಡಿಟ್ಟುಕೊಂಡಿದ್ದಾರೆ.
ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ನಗರದ ಎರಡು ಮೂರು ಕೊಳಚೆ ಪ್ರದೇಶಗಳ ಕುಟುಂಬಕ್ಕೆ ಮಣ್ಣಿನ ಪಣತಿಗಳನ್ನು ನೀಡಿ ಕುಟುಂಬಕ್ಕೆ ದೀಪಾವಳಿ ಬೆಳಕಾಗಲಿದ್ದಾರೆ.ಈ ಮೂಲಕ ಬಿಜೆಪಿ ಯುವ ಮೋರ್ಚಾದ ಶಕ್ತಿ ಹಿರೇಮಠ ಮತ್ತು ಟೀಮ್ ಸಿದ್ದವಾಗಿದೆ.ಈಗಾಗಲೇ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಇದರೊಂದಿಗೆ ತಮ್ಮ ನಾಯಕರ ಹುಟ್ಟು ಹಬ್ಬವನ್ನು ಆಚರಿಸಲು ಯುವ ಮೋರ್ಚಾದ ಶಕ್ತಿ ಹಿರೇಮಠ, ವಿನಯ ಗೊಂದಲಿ ,ಮುತ್ತು ಬನಗಾರ,ಕಿರಣ ತೊಗಿ,ಕಾರ್ತಿಕ ಪೂಜಾರ,ಸಾಗರ ಜೋಶಿ ಸಿದ್ದರಾಗಿದ್ದಾರೆ.