ಧಾರವಾಡ –
ಪ್ರಧಾನಮಂತ್ರಿಗಳ ಕಾರ್ಯಕ್ರಮ ನಿಮಿತ್ಯ ವಾಹನ ಪಾಕಿರ್ಂಗ್ ಮಾಹಿತಿ ಹೌದು ಮಾರ್ಚ್ 12 ರಂದು ಐಐಟಿ ಕಟ್ಟಡ ಉದ್ಘಾಟನೆಗೆ ಆಗಮಿ ಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಕಾರ್ಯಕ್ರಮಕ್ಕೆ ವಾಹನಗಳಲ್ಲಿ ಬರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿ ಯಿಂದ ಈ ಕೆಳಗಿನಂತೆ ಮಾರ್ಗಗಳನ್ನು ಗುರುತಿಸಿ ಸಿಬ್ಬಂದಿಗಳನ್ನು ನಿಯೋಜಿಸಿ ವ್ಯವಸ್ಥೆ ಕಲ್ಪಸಲಾಗಿ ರುತ್ತದೆ.ಗುರುತಿಸಲಾದ ಮಾರ್ಗದಲ್ಲಿ ಬಂದು ಸಹಕರಿಸಲು ಕೋರಿದೆ.
ಬೆಳಗಾವಿ ಕಡೆಯಿಂದ ಎನ್.ಎಚ್-4 ರಸ್ತೆಯಲ್ಲಿ ಬರುವ ಕಾರ್, ಕ್ರೂಸರ್, ಬೈಕ್, ಜೀಪ್‍ಗಳು ಹೆಗ್ಗೇರಿ ಗ್ರಾಮ ದಾಟಿ ನಂತರ ಬರುವ ಬೇಲೂರ ಸ್ಟೀಪ್ ಔಟ್‍ನ ಮುಖಾಂತರ ಸರ್ವಿಸ್ ರಸ್ತೆ ಯಲ್ಲಿ ಬಂದು ಮೊದಲು ಮತ್ತು ಎರಡನೇ ಅಂಡರ್ ಪಾಸ್‍ಗಳ ಮೂಲಕ ಬೇಲೂರು ಇಂಡಸ್ಟ್ರೀಯಲ್ ಏರಿಯಾಕ್ಕೆ ಬಂದು ಐಐಟ ಮುಖ್ಯ ರಸ್ತೆಗೆ ಸೇರಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಕ್ಕೆ ಬರುವುದು.
ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ-ಧಾರವಾಡ, ಕಲಘಟಗಿ ಮತ್ತು ಅಳ್ಳಾವರ ಕಡೆಯಿಂದ ಬರುವ ಕಾರ್, ಕ್ರೂಸರ್, ಬೈಕ್, ಜೀಪ್‍ಗಳು ನರೇಂದ್ರ ಅಂಡರ್ ಮುಖಾಂತರ ಎನ್.ಎಚ್-4 ರಸ್ತೆಯಲ್ಲಿ ಬೆಳಗಾವಿ ಕಡೆಗೆ ಆಕಾಶ ಹೊಟೇಲ್ ಸ್ಲೀಪ್ ಔಟ್ ನಲ್ಲಿ ಇಳಿದು ಸರ್ವಿಸ್ ರಸ್ತೆ ಸೇರಿ ಐಐಟಿ ಧಾರವಾಡ ಮುಖ್ಯ ರಸ್ತೆಗೆ ಬಂದು ಸೇರಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಕ್ಕೆ ಬರುವುದು.
ಗರಗ ಕಡೆಯಿಂದ ಬರುವ ಕಾರ್, ಕ್ಯೂಸರ್, ಬೈಕ್, ಜೀಪ್‍ಗಳು ಗರಗ ಕ್ರಾಸ್ ದಿಂದ ಮುಮ್ಮಿಗಟ್ಟಿ ಅಂಡರ್ ಪಾಸ್ ಮುಖಾಂತರ ಯುಪ್ಲೇಕ್ಸ್ ಸರ್ಕಲ್‍ಗೆ ಬಂದು ಐಐಟಿ ಧಾರವಾಡ ಮುಖ್ಯ ರಸ್ತೆಗೆ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಕ್ಕೆ ಬರುವುದು.
ಗರಗ ಕಡೆಯಿಂದ ಬರುವ ಟ್ರ್ಯಾಕ್ಟರ್ ಗಳು ಗರಗ ಕ್ರಾಸ್‍ದಿಂದ ಹೈಕೋರ್ಟ್ ಬಳಿ ಇರುವ ಅಂಡರ್ ಪಾಸ್ ಮುಖಾಂತರ ಬೇಲೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಬಂದು ಸೇರಿ ಐಐಟಿ ಧಾರವಾಡ ಮುಖ್ಯ ರಸ್ತೆಗಳ ಬಂದು ಸೇರಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಲು ಸೂಚನೆ ನೀಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..