ಧಾರವಾಡದ ವಾರ್ಡ್ 14 ರಲ್ಲಿ ಸುಭಾಷ್ ಶಿಂಧೆ ಅವರ ಪ್ರಚಾರ ಹೇಗಿದೆ ಗೊತ್ತಾ – ಹಿರಿಯ ನಾಯಕನಿಗೆ ಕೈಕೊಟ್ಟ ಕೈ ಪಕ್ಷ ಬಿಜೆಪಿ ಯಿಂದ ಸ್ಪರ್ಧೆ, ಕಚೇರಿ ಆರಂಭ…..

Suddi Sante Desk

ಧಾರವಾಡ –

ಧಾರವಾಡದ ಕಾಂಗ್ರೇಸ್ ಪಕ್ಷದಲ್ಲಿ ಸ್ಥಳೀಯವಾಗಿ ಹಿರಿಯ ನಾಯಕರಲ್ಲಿ ಸರಳ ಸಜ್ಜನಿಕೆಯ ಆದರ್ಶ ವ್ಯಕ್ತಿತ್ವದ ನಾಯಕರ ಸಾಲಿನಲ್ಲಿ ಸುಭಾಷ ಶಿಂಧೆ ಕೂಡಾ ಒಬ್ಬರು. 1976 ರಲ್ಲಿ ಚಿಕ್ಕ ವಯಸ್ಸಿನಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇವರು ಆರಂಭದಿಂದಲೂ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷ ವಹಿಸಿದ ಕೆಲಸ ಕಾರ್ಯ ಗಳನ್ನು ಚಾಚು ತಪ್ಪದೇ ಮಾಡಿಕೊಂಡು ಬಂದಿದ್ದಾರೆ ಪಕ್ಷದಲ್ಲಿ ಯಾವುದೇ ಆಸೆಯನ್ನು ಇಟ್ಟುಕೊಳ್ಳದೇ ನಾಯಕರು ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ

1996 ರಲ್ಲಿ ಮೊದಲ ಬಾರಿಗೆ ಪಾಲಿಕೆಯ ಚುನಾವ ಣೆಗೆ ಪಕ್ಷದಿಂದ ಟಿಕೆಟ್ ಕೇಳಿದರು.ಮೊದಲ ಬಾರಿಗೆ ಕೇಳಿದರು ಕೂಡಾ ನೀಡಲಿಲ್ಲ ನಂತರ 2001 ರಲ್ಲಿ ಬಿಜೆಪಿ ಯಿಂದ ಟಿಕೆಟ್ ಕೊಟ್ಟರು 11ನೇ ವಾರ್ಡ್ ನಿಂದ ಸ್ಪರ್ಧೆ ಮಾಡಿ ಪಾಲಿಕೆಯನ್ನು ಪ್ರವೇಶ ಮಾಡಿದರು.

ನಂತರ ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆಗೊಂಡ ಇವರಿಗೆ 2007 ರಲ್ಲಿ ಟಿಕೆಟ್ ನ್ನು ತಪ್ಪಿಸಿದರು.ಸಾಕಷ್ಚು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದರು ಕೂಡಾ ಟಿಕೆಟ್ ತಪ್ಪಿಸಿದರು.ನಂತರ ಇವರ ಆದರ್ಶ ಕೆಲಸ ಕಾರ್ಯಗಳನ್ನು ನೋಡಿ ಅಂದು ದಿನೇಶ್ ಗುಂಡೂರಾವ್ ಅವರು ಕರೆದು ಟಿಕೆಟ್ ನೀಡಿದರು.

ಮತ್ತೆ ವಿಜಯದ ಪತಾಕೆ ಹಾರಿಸಿದ ತಮ್ಮ ತಾಕತ್ತನ್ನು ತೋರಿಸಿದರು. ಇದರೊಂದಿಗೆ ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ ಇವರಿಗೆ ಮತ್ತೆ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎನ್ನಲಾಗಿತ್ತು ಆದರೆ ಮತ್ತೆ ಕಾಣದ ಕೈಗಳು ಇವರಿಗೆ ಟಿಕೆಟ್ ತಪ್ಪಿಸಿದ್ದು ಹೀಗಾಗಿ ಈಗ ಮತ್ತೆ ಬಿಜೆಪಿ ಯಿಂದ ಸ್ಪರ್ಧೆ ಮಾಡಿದ್ದಾರೆ.

ಕಳೆದ ಬಾರಿ ಯಾರು ಮಾಡದಂತಹ ಕೆಲಸ ಕಾರ್ಯ ಗಳನ್ನು ವಾರ್ಡ್ ನಲ್ಲಿ ಮಾಡಿ ಮಾದರಿಯಾಗಿದ್ದ ಇವರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ಗೌಳಿ ಗಲ್ಲಿಯಲ್ಲಿ ಸುಸಜ್ಜಿತವಾದ ಶೌಚಾಲವನ್ನು ಮಾದರಿಯನ್ನಾಗಿ ಮಾಡಿ ಬಯಲು ಪ್ರದೇಶದಲ್ಲಿ ಶೌಚಾಲಯ ಹೋಗುತ್ತಿದ್ದವರಿಗೆ ಗೌರವ ಪೂರ್ವ ದಿಂದ ಶೌಚಾಲಯ ಮಾಡಿದರು

ಇದರೊಂದಿಗೆ ಮಾಳಮಡ್ಡಿ,ದಾನು ನಗರ ಹತ್ತಿಕೊಳ್ಳ ಪ್ಲಾಟ್,ಸೇರಿದಂತೆ ವಾರ್ಡ್ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿ ಮಾಡಿ ಅಭಿವೃದ್ದಿಯ ನಾಯಕ ಏನೇ ಸಮಸ್ಯೆಗಳನ್ನು ಕೇಳಿಕೊಂಡು ಬಂದವರಿಗೆ ನೆರವಾಗುವ ಮಹಾನ್ ನಾಯಕನಾ ಗಿದ್ದು ಸರಳ ಸಜ್ಜನಿಕೆಯ ಯಾವುದೇ ಆರೋಪ ಪ್ರತ್ಯಾರೋಪಗಳಿಲ್ಲದೇ ಮಾದರಿಯಾಗಿದ್ದಾರೆ.

ಇಂಥಹ ಮಹಾನ್ ಜನ ನಾಯಕ ಮತ್ತೆ ಈ ಬಾರಿ ಬಿಜೆಪಿ ಪಕ್ಷದಿಂದ 14 ನೇ ವಾರ್ಡ್ ನಿಂದ ಸ್ಪರ್ಧೆ ಮಾಡಿದ್ದಾರೆ ಕಾಣದ ಕೈಗಳು ಟಿಕೆಟ್ ತಪ್ಪಿಸಿದ್ದು ಅದಕ್ಕೆ ಇವರ ಫಲಿತಾಂಶವೇ ಉತ್ತರವಾಗಲಿದ್ದು ಇಂದು ನಗರದ ವಾರ್ಡ್ ನಲ್ಲಿ ಅಧಿಕೃತವಾಗಿ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು.

ನಗರದ ರವಿವಾರ ಪೇಠೆಯ ಕೊಟೂರ ಕಟ್ಟಡದಲ್ಲಿ ಕಚೇರಿಯನ್ನು ಆರಂಭ ಮಾಡಲಾಯಿತು.ಈ ಮೂಲಕ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.ಇನ್ನೂ ಈ ಒಂದು ಸಮಯದಲ್ಲಿ ಹೇಮರಾಜ ಭಂಡಾರಿ,ಬಸವರಾಜ ಗರಗ ಯಲ್ಲಪ್ಪಣ್ಣ ಸವಣೂರು,ಭೀಮರಾವ ಸವಣೂರು ನಂದಕುಮಾರ ಪಂಡಿತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.