ಧಾರವಾಡ –
ಧಾರವಾಡ ನಗರದಲ್ಲಿ ನಡೆದ ಸರಣಿ ಕಳ್ಳತನಕ್ಕೆ ಬಂದವರ ಗ್ಯಾಂಗ್ ನ ಸಿಸಿ ಟಿವಿ ಯಲ್ಲಿ ಸರೆಯಾಗಿದೆ.ಇನ್ನೂ ಕಳ್ಳತನಕ್ಕೆ ಬಂದವರ ಮತ್ತು ಅವರ ಚಲನವಲನಗಳನ್ನು ನೋಡಿದರೆ ಖಂಡಿತವಾಗಿಯೂ ಬೆಚ್ಚಿ ಬೀಳಿಸುವಂತಹ ಚಿತ್ರಣ ಕಂಡು ಬರುತ್ತದೆ.

ಕಳ್ಳರ ಚಲನ ಚಲನ ನೋಡಿದ್ರೆ ನೀವು ಹೌಹಾರೋದು ಗ್ಯಾರಂಟಿ ಎಂಬ ಮಾತುಗಳಿಗೆ ಈ ಸಿಸಿ ಟಿವಿ ದೃಶ್ಯ ಗಳಲ್ಲಿ ಸೆರೆಯಾಗಿರುವ ಕಳ್ಳರ ಗ್ಯಾಂಗ್ ಸಾಕ್ಷಿ.
ಧಾರವಾಡದ ಮದಿಹಾಳದಲ್ಲಿ ರಾತ್ರಿ ನಡೆದಿರೋ ಸರಣಿ ಕಳ್ಳತನಕ್ಕೆ ಬಂದವರು ಹೇಗಿದ್ದರು ಎಷ್ಟು ಜನ ಬಂದಿದ್ದರು ಕಳ್ಳತನಕ್ಕೆ ಬಂದ ಗ್ಯಾಂಗ್ ಹೇಗಿದೆ ಗೊತ್ತಾ

ಒಂಬತ್ತು ಜನರ ಈ ಒಂದು ಗ್ಯಾಂಗ್ ನಿನ್ನೆ ರಾತ್ರಿ ಕಳ್ಳತನಕ್ಕೆ ಬಂದಿದ್ದಾರೆ. ಅವರು ಮನೆಗೆ ನುಗ್ಗಿದ್ರೆ ಮನೆಯವರನ್ನೂ ಬಿಡೊಲ್ಲ ಎಂಬ ಅನುಮಾನ ಈ ಸಿಸಿ ಟಿವಿ ದೃಶ್ಯ ಗಳು ಹೇಳುತ್ತಿವೆ

ಕಳ್ಳರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಕಳ್ಳತನಕ್ಕೆ ಬಂದಿದ್ದಾರೆ. ಮಾರಕಾಸ್ತ್ರ ಹಿಡಿದುಕೊಂಡು ಗ್ಯಾಂಗ್ ಸುತ್ತಾಡ್ತಾ ಇರೋ ಕಳ್ಳರ ಚಿತ್ರಣ ಸೆರೆಯಾಗಿದೆ.
ಒಂಬತ್ತು ಜನರ ಕಳ್ಳರು ರಾಜಾರೋಷ ಓಡಾಡುವ ದೃಶ್ಯ ಗಳು ಈಗ ಸಿಸಿ ಟಿವಿ ಯಲ್ಲಿ ಸೆರೆಯಾಗಿವೆ. ಕಳ್ಳರು ಗ್ಯಾಂಗ್ ಕಟ್ಟಿಕೊಂಡು ಓಡಾಡ್ತಾ ಇದ್ದರೂ ಕಣ್ಣ ಮುಚ್ಚಿ ಕುಳಿತಿರೋ ಪೊಲೀಸರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರತಾ ಇವೆ.