ಬೆಂಗಳೂರು ,-
7ನೇ ವೇತನ ಆಯೋಗದ ರಚನೆ ಯಿಂದಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಲ್ಲಿ ಹೊಸ ಹೊಸ ವೆಚ್ಚದ ಲೆಕ್ಕಾಚಾರಗಳು ಹುಟ್ಟಿಕೊಂಡಿವೆ ಹೌದು ಪ್ರಸ್ತುತ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ವೃಂದಗಳ ಒಟ್ಟು ನೌಕರರ ಮೂಲ ವೇತನ-23,908 ಕೋಟಿ ರೂ.
ಪ್ರಸ್ತುತ ತುಟ್ಟಿ ಭತ್ಯೆ ದರ ಶೇ.31ರ ಪ್ರಕಾರ- 7, 441.48 ಕೋಟಿ ರೂ.ಪ್ರಸ್ತುತ ಮೂಲ ವೇತನ ಹಾಗೂ ಶೇ.31ರ ತುಟ್ಟಿಭತ್ಯೆ ವಿಲೀನ ಸೇರಿ- 31,319 ಕೋಟಿ ರೂ. ವಿಲೀನದ ಬಳಿಕ ಶೇ.40 ಫಿಟ್‌ಮೆಂಟ್ ನೀಡಿದರೆ ಆಗುವ ಹೆಚ್ಚುವರಿ ವೆಚ್ಚ- 12,527.79 ಕೋಟಿ ರೂ. ಆಗಲಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸಲಾಗುತ್ತದೆ.ಆಯೋಗವು ಬೆಲೆ ಏರಿಕೆ, ಇತರ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ, ಕೇಂದ್ರದ ಕ್ರಮಗಳನ್ನು ಪರಿಶೀಲಿಸಿ ವೇತನ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ.ಐದು ವರ್ಷ ಕೆಳಗೆ ಅಂದಿನ ಮುಖ್ಯಮಂತ್ರಿ ಸಿದ್ದರಾ ಮಯ್ಯ ಚುನಾವಣೆಗೆ ಹೋಗುವ ಮುನ್ನ ಆಯೋಗ ರಚಿಸಿ ವರದಿಯನ್ನು ಅನುಷ್ಠಾನಗೊ ಳಿಸುವ ತೀರ್ಮಾನ ಪ್ರಕಟಿಸಿದ್ದರು.
ಇದೀಗ ಬಸವರಾಜ ಬೊಮ್ಮಾಯಿ ವೇತನ ಆಯೋಗ ರಚನೆ ಮಾಡಿದ್ದಾರೆ.ವೇತನ ಆಯೋಗದ ಐದು ವರ್ಷಗಳ ಅವಧಿ ಜುಲೈ 31ಕ್ಕೆ ಕೊನೆಯಾಗಿದೆ. ಹೀಗಾಗಿ ಹೊಸ ವೇತನ ಆಯೋಗದ ರಚನೆ ಮತ್ತು ಅನುಷ್ಠಾನವನ್ನು ಸರ್ಕಾರಿ ನೌಕರರು ಕಾಯುತ್ತಿದ್ದರು.
ಮೂರು ತಿಂಗಳಿನಿಂದಲೇ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸಿತ್ತು. ಸದ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿರುವ ಬೇಡಿಕೆ ಒಪ್ಪಿದರೆ ಸರ್ಕಾರದ ಬೊಕ್ಕಸದ ಮೇಲೆ ಮಾಸಿಕ 1 ಸಾವಿರ ಕೋಟಿಯಂತೆ ವರ್ಷಕ್ಕೆ 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.
ಸುದ್ದಿ ಸಂತೆ ನ್ಯೂಸ್…..