ಧಾರವಾಡದ ಹೆಬ್ಬಳ್ಳಿ ಯಲ್ಲಿ ಶಾಲಾ ಪ್ರಾರಂಭೊತ್ಸವ ಹೇಗಿತ್ತು ಗೊತ್ತಾ

Suddi Sante Desk

ಹೆಬ್ಬಳ್ಳಿ –

ಹೆಬ್ಬಳ್ಳಿಯಲ್ಲಿ ಶಾಲಾ ಆರಂಭೋತ್ಸವ ಶಾಲೆಯ ಎಲ್ಲಾ ಶಿಕ್ಷಕರಿಗೆ ಮಕ್ಕಳ ಸಮ್ಮುಖದಲ್ಲಿ ಸತ್ಕಾರ ಮಾಡಿ ಶಾಲೆಗೆ ಮಕ್ಕಳನ್ನು ವಿಶಿಷ್ಟವಾಗಿ ಸ್ವಾಗತಿಸಿ ದರು.

ಹೌದು ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಯಲ್ಲಿ ಶಾಲಾ ಆರಂಭೋತ್ಸವವನ್ನು ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೆ ಸತ್ಕರಿಸುವ ಮೂಲಕ ಮಕ್ಕಳ ಸಮ್ಮುಖದಲ್ಲಿ ತುಂಬಾ ವಿಶಿಷ್ಟ ರೀತಿಯಲ್ಲಿ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಯವರು ಆಚರಿಸಿದರು

ಈ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಸದಸ್ಯ ಚಂದ್ರ ಶೇಖರ ಮಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಭಾರತದ ಭವಿಷ್ಯ ನಮ್ಮ ಗೌರವಾನ್ವಿತ ಗುರುಗಳ ಹಾಗೂ ಮುದ್ದು ಮಕ್ಕಳ ಕಣ್ಣುಗಳಲ್ಲಿದೆ, ಗುರುಗಳ ಹಾಗೂ ಮಕ್ಕಳ ಕಣ್ಣುಗಳಲ್ಲಿ ಉಲ್ಲಾಸ ಸಂತೋಷ ನಗು ಇದ್ದರೆ ಈ ದೇಶಕ್ಕೆ ಭವಿಷ್ಯ ಇದೆ ಒಂದು ವೇಳೆ ಗುರು ಮತ್ತು ಮುದ್ದು ಮಕ್ಕಳ ಕಣ್ಣು ಗಳಲ್ಲಿ ನಿರುತ್ಸಾಹ, ನೋವು,ತುಂಬಿದ್ದರೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ ಆದ್ದರಿಂದ ಸಮಾಜದ ಪ್ರತಿಯೊಬ್ಬರೂ ಗುರುಗಳನ್ನು ಗೌರವಿಸುವ ಹಾಗೂ ಮಕ್ಕಳ ಕಲಿಕೆಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಹಾಗೂ ಮೇಲು ಸ್ತುವಾರಿ ಸಮಿತಿಯ ಅದ್ಯಕ್ಷ ಈರಣ್ಣ ತಟ್ಟಿಮನಿ ಕರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಮುಖಾಮುಖಿ ಕಲಿಕೆ ಸಾಧ್ಯವಾಗಿಲ್ಲ ಈಗ ಕರೋನ ಇಳಿಮುಖವಾಗಿದೆ ಸರಕಾರ 6- ರಿಂದ 8. ನೆಯ ತರಗತಿಯನ್ನು ಆರಂಭಿಸಲು ಕರೋನಾ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಶಾಲೆಯ ಸ್ವಚ್ಚತೆಯ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಮಕ್ಕಳ ಕಲಿಕೆಯನ್ನು ಚುರುಕುಗೊಳಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಮತ್ತೊಬ್ಬ ಮುಖ್ಯ ಅತಿಥಿ ಹೆಬ್ಬಳ್ಳಿ ಕ್ಲಸ್ಟರ್ ಸಂಪ ನ್ಮೂಲ ವ್ಯಕ್ತಿ ಮುಲ್ಲಾನವರ ಪಾಲ್ಗೊಂಡು ಶಾಲಾ ಆರಂಭದ ಸವಿಸ್ತಾರವಾದ ಮಾಹಿತಿಯನ್ನು ಒಂದು ವರ್ಗ ಕೊಠಡಿಯಲ್ಲಿ ಮಕ್ಕಳ ಅನುಪಾತ ಹಾಗೂ ಶಿಕ್ಷಕರು ವಹಿಸಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಇಲಾಖೆ ನೀಡಿದ ಸಲಹೆ ಸೂಚನೆಗಳನ್ನು ವಿವರಿಸಿದರು, ಕೆ ಜಿ ಎಸ್ ಶಾಲೆಯ ಅದ್ಯಕ್ಷ ಸುರೇಶ ಅಂಬಿಗೇರ( ಸುಣಗಾರ) ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಸರೋಜ ರವದಿ ಭೀಮಪ್ಪ ಕೊಟಬಾಗಿ ಶಿವಾನಂದ ತಳವಾರ ಹಟೇಲಸಾಬ ಗುಡಸಲಮನಿ ಕಸ್ತೂರಿ ಸವದತ್ತಿ ಗಂಗವ್ವ ಭೋವಿ ಅನ್ನಪೂರ್ಣ ಮಾಳಾಪೂರ ಸುಜಾತ ಹಂಚಿನಾಳ ರತ್ನ ಹೂಲಿ ಸೃತಿ ಮೇದಗೊಪ್ಪ ಲಕ್ಷ್ಮಿ ಉಪ್ಪಿನ ಮಲ್ಲಮ್ಮ ಕುಂಬಾರ ರಾಜೇಶ ಲಕ್ಕಮ್ಮನವರ ಶಿವಕುಮಾರ್ ಹೂಗಾರ ಶಿವಾನಂದ ಹಡಪದ ಶಂಕ್ರಪ್ಪ ಮುಳ್ಳೂರ ಮಂಜುನಾಥ ಸಾಲಿ ಶಿವಾನಂದ ಹೂಗಾರ ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದರು, ನಾಗರತ್ನ ಅಂಚಟಗೇರಿ ಸ್ವಾಗತಿಸಿ ದರು, ಮುಖ್ಯ ಶಿಕ್ಷಕ ಎಂ ಆರ್ ಪಾಲ್ತಿ ನಿರೂಪಿಸಿ ದರು, ಎಸ್ ಎ ಜಾಧವ ವಂದಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.