ಧಾರವಾಡ –
ದಿನ ಬೆಳಗಾದರೆ ಶಾಲೆ ಪೊನ್ ನಲ್ಲಿ ಹಲೋ ಹೇಗಿದ್ದಿರಾ ವಾಟ್ಸ್ ಆಪ್ ನಲ್ಲಿ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುವ ಇವತ್ತಿನ ಪರಸ್ಥಿತಿ ಯಲ್ಲಿ ರಜೆ ಬಿಟ್ಟು ಬಿಡಲಾರದ ಮಳೆಯ ನಡುವೆ ಯೂ ಕೂಡಾ ಎಲ್ಲವೂಗಳ ನಡುವೆ ಧಾರವಾಡದ ಲ್ಲೊಂದು ವಿಶೇಷವಾದ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

ಹೌದು ರವಿವಾರ ಆದ್ರೂ ಕೂಡಾ ನಗರದಲ್ಲಿ ಶಿಕ್ಷಕರ ಸಂಘಗಳ ಪರಿಷತ್ ರಾಜ್ಯಾಧ್ಯಕ್ಷ ಗುರು ತಿಗಡಿ ಅವರ 59 ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

ನಗರದ ಕೊಪ್ಪದಕೇರಿಯಲ್ಲಿನ ತಾಲ್ಲೂಕು ಶಿಕ್ಷಕರ ಸೊಸಾಯಿಟಿಯಲ್ಲಿ ಗುರು ತಿಗಡಿ ಅವರ ಹುಟ್ಟು ಹಬ್ಬವನ್ನು ಆಪ್ತ ಗೆಳೆಯರು ಸರಳವಾಗಿ ಆಚರಣೆ ಮಾಡಿದರು. ಹೌದು ಕಚೇರಿಯಲ್ಲಿ ಕೇಕ್ ಕಟ್ ಮಾಡಿದ ಎಲ್ಲರೂ ಹುಟ್ಟುಹಬ್ಬವನ್ನು ಆಚರಿಸಿದರು.

ರಜಾ ದಿನವಾದರೂ ಕೂಡಾ ಎಲ್ಲರೂ ಒಂದೆಡೆ ಸೇರಿಕೊಂಡು ಹುಟ್ಟಿದ ದಿನವನ್ನು ಆಚರಿಸಿ ಶುಭಾಶಯಗಳನ್ನುಕೊರಿದರು.ಈ ಒಂದು ಸಮಯದಲ್ಲಿ ಶಿಕ್ಷಕ ಬಂಧುಗಳಾದ ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ,ಸಿ ಎಮ್ ಕಿತ್ತೂರ,ಎ ಹೆಚ್ ನದಾಫ್, ಐ ಹೆಚ್ ನಧಾಫ್, ನಾರಾಯಣ ಭಜಂತ್ರಿ,ಆರ್ ಬಿ ಮುಂಗೋಡಿ,ಕಾಶಪ್ಪ ದೊಡವಾಡ,

ಎಸ್ ಬಿ ಶಿವಶಿಂಪಿ,ಅಯ್ಯಪ್ಪ ಮೊಕಾಶಿ,ಎಮ್ ಡಿ ಹೊಸಮನಿ, ಚಂದ್ರಶೇಖರ ತಿಗಡಿ,ಎನ್ ವಿ ತೋರಣಗಟ್ಟಿ,ದಯಾನಂದ ದೊಡಮನಿ, ಸುನೀಲ,ಸೇರಿದಂತೆ ಹಲವರು ಪಾಲ್ಗೊಂಡು ಹ್ಯಾಪಿ ಬರ್ಥಡೆ ಎಂದು ಹೇಳಿ ಶುಭಾಶಯಗಳನ್ನು ಕೋರಿದರು.
