ಧಾರವಾಡದ ಕಲಘಟಗಿಯಲ್ಲಿ ಮತ್ತೊಂದು ದಾಖಲೆ ಬರೆದ ಮಾಜಿ ಸಚಿವ ಸಂತೋಷ ಲಾಡ್ 9 ಕಿಮೀ ಉದ್ದದ 9 ಅಡಿ ತಿರಂಗಾ ರ‍್ಯಾಲಿ ಹೇಗಿತ್ತು ಗೊತ್ತಾ…..

Suddi Sante Desk

ಕಲಘಟಗಿ –

ಹೌದು ಧಾರವಾಡದ ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಮತ್ತೊಂದು ದಾಖಲೆ ಬರೆದಿದ್ದಾರೆ ದೇಶದಲ್ಲಿ ಸಧ್ಯ 75ನೇ ಅಮೃತ ಮಹೋತ್ಸವದ ಹಿನ್ನೆಲೆ ಯಲ್ಲಿ ಈ ಒಂದು ಕಾರ್ಯಕ್ರಮವನ್ನು ಕಲಘಟಗಿ ಪಟ್ಟಣ ದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಈ ಬಾರಿಯೂ ವಿಶೇಷವಾಗಿ ಆಚರಣೆ ಮಾಡಿದರು

ದಾಸ್ತಿಕೊಪ್ಪದಿಂದ ಆರಂಭಗೊಂಡ 9 ಕಿಮಿ ಉದ್ದ, 9 ಅಡಿ ಅಗಲದ ತಿರಂಗಾ ಮಹಾ ರ‍್ಯಾಲಿ ಹೌದು ಆಗಸ್ಟ್ 15 2022ರ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದು ಕಲಘಟಗಿ-ಅಳ್ನಾವರ ಮತಕ್ಷೇತ್ರದ ಕಲಘಟಗಿ ಪಟ್ಟಣ ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಯಿತು.

ಸ್ವಾತಂತ್ರ್ಯ ಭಾರತದ 75ನೇ ವರ್ಷಾಚರಣೆಯ ಸಂಭ್ರ ಮದ ದಿನದಂದು ಈ ಬಾರಿಯೂ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಬರೋಬ್ಬರಿ 9 ಕಿಮಿ ಉದ್ದ, 9 ಅಡಿ ಅಗಲದ ತ್ರಿವರ್ಣ ಧ್ವಜ ರ‍್ಯಾಲಿಯನ್ನು ಅದ್ದೂರಿ ಯಾಗಿ ಮಾಡಲಾಯಿತು

ರ‍್ಯಾಲಿಯುದ್ದಕ್ಕೂ ಕಣ್ಮನ ಸೆಳೆದ 300ಕ್ಕೂ ಹೆಚ್ಚಿನ ಕಲಾತಂಡ ಗಳಿಂದ ಕಲಾ ಪ್ರದರ್ಶನ

  • 6 ಬೃಹತ್ ವೇದಿಕೆಗಳಲ್ಲಿ ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ನಾಡಿನ ಕಲೆ ಮತ್ತು ಸಾಂಸ್ಕೃತಿಕ ಪ್ರತಿಭೆ ಯನ್ನು ಬಿಂಬಿಸುವ ಹಲವಾರು ವಿವಿಧ ಕಲಾವಿದರಿಂದ ಅದ್ದೂರಿಯಾದ ಗತ ವೈಭವದ ಕಾರ್ಯಕ್ರಮ ಗಳು ಕಂಡು ಬಂದವು

10,000 ತಾಯಂದಿರು ಭಾರತ ಮಾತೆಗೆ ಪೂರ್ಣ ಕುಂಭ ಗೌರವ ಹೌದು ಕಾರ್ಯಕ್ರಮ ದಲ್ಲಿ ವಿಶೇಷವಾಗಿ ಕಂಡು ಬಂದಿದ್ದು ಕ್ಷೇತ್ರದ ಮೂಲೆ ಮೂಲೆಗಳಿಂದ ಉತ್ಸಾಹ ದಿಂದ ಬಂದಿದ್ದ ಮಹಿಳೆ ಯರು ತಾಯಂದಿರರು ತಿರಂಗಾ ಕಾರ್ಯಕ್ರಮಕ್ಕೆ ಕುಂಭ ಗೌರವ ನೀಡಿದರು.

2021ರ ಆಗಸ್ಟ್ 15 ರಂದು ಕಲಘಟಗಿ ಪಟ್ಟಣದಲ್ಲಿ ನಡೆದಿದ್ದ 2 ಕಿ ಮೀ ಉದ್ದ ಹಾಗೂ 9 ಅಡಿ ಅಗಲದ ಬೃಹತ್ ತಿರಂಗಾ ರ‍್ಯಾಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವಕ್ಕೆ ಪಾತ್ರವಾಗಿತ್ತು.ಈಗ ವಿಶ್ವ ದಾಖಲೆಯಲ್ಲಿ ಕಲಘಟಗಿ ಅಳ್ನಾವರ ಮತಕ್ಷೇತ್ರದ ಹೆಸರು ಬರೆಸುವ ಸಮಯ ಇವತ್ತಿನ ಈ ಒಂದು ಕಾರ್ಯಕ್ರಮ ದಿಂದ ಬಂದಿತು

ದಾಸ್ತಿಕೊಪ್ಪ ಬ್ರಿಡ್ಜ್ ನಿಂದ ಗಳಗಿನಗಟ್ಟಿ ಕ್ರಾಸ್ ವರೆಗೆ ಈ ಒಂದು ತಿರಂಗಾ ಕಾರ್ಯಕ್ರಮ ಅದ್ದೂರಿಯಾಗಿ ಕಂಡು ಬಂದಿತು.ಒಟ್ಟಾರೆ ಗಿನ್ನಿಸ್ ದಾಖಲೆಯ ಅಪೂರ್ವ ಕ್ಷಣಕ್ಕೆ ಕಲಘಟಗ ಪಟ್ಟಣ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ‌ನ ಈ ಒಂದು ಕಾರ್ಯಕ್ರಮ ದ ಮೂಲಕ ಸಾಕ್ಷಿಯಾಯಿತು.ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸ ವವನ್ನು ಸುವರ್ಣಾಕ್ಷರಗಳಲ್ಲಿ ಬರೆಯುವ ಐತಿಹಾಸಿಕ ಕ್ಷಣಕ್ಕೆ ಕಲಘಟಗಿ ಸಾಕ್ಷಿ ಯಾಗಿ ಕಂಡು ಬಂದಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.