ಹುಬ್ಬಳ್ಳಿ –
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಕರ್ನಾಟಕ ವಿಶ್ವವಿದ್ಯಾಲಯ ಧಾರವಾ ಡದಲ್ಲಿ, ಪ್ರತಿವರ್ಷ ಸುಮಾರು 105000 ವಿದ್ಯಾರ್ಥಿ ಗಳು ಪ್ರತಿವರ್ಷವೂ ಪದವಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆ.ಆದರೆ 2019 – 2020 ನೇ ವರ್ಷ ದಲ್ಲಿ ಪದವಿ ಮುಗಿಸಿದಂತ ಸುಮಾರು 2 ಲಕ್ಷ ವಿದ್ಯಾ ರ್ಥಿಗಳು ಯಾವುದೇ ರೀತಿಯ ಪ್ರಮಾಣ ಪತ್ರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಇದರಿಂದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ನಿರ್ಮಾಣ ದ ಅವಕಾಶಗಳಿಂದ ವಂಚಿತರಾಗಿ, ಸಾಕಷ್ಟು ಪರ ದಾಡುವಂಥ ಪರಿಸ್ಥಿತಿ ಬಂದಿದೆ.ಈ ಒಂದು ವಿಚಾರ ಕುರಿತು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂ ದ ನಾಯಕಿ ದೀಪಾ ಗೌರಿ ಮುಖ್ಯ ಮಂತ್ರಿ ಭೇಟಿ ಯಾಗಿ ಮನವಿ ನೀಡಿದರು

ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಈ ಸಮಸ್ಯೆ ಇಲ್ಲ. ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ ಇದ್ದು ನಮ್ಮ ಘನವೆತ್ತ ರಾಜ್ಯಪಾಲರು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಮಯಾವಕಾಶ ನೀಡದಿರುವುದೆ ಇದಕ್ಕೆ ಮುಖ್ಯ ಕಾರಣ. ಈ ಬಗ್ಗೆ ದಯವಿಟ್ಟು ತಾವುಗಳು ಗಮನ ಹರಿಸಿ ಸುಮಾರು 2 ಲಕ್ಷ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಎಂಬುದು ನಮ್ಮ ಕಳಕಳಿಯ ಮನವಿ ಎಂದು ದೀಪಾ ಗೌರಿ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷದದವರುಮುಖ್ಯಮಂತ್ರಿ ಬಳಿ ಮನವಿ ನೀಡಿದರು.ಹಾಗೂ ಈ ಕೂಡಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯವರ ಮೇಲೆ ಕಾನೂನು ಕ್ರಮ ಕೈಕೊಂಡು ಬಂಧಿಸಬೇಕೆಂ ದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿ ಳಾ ಕಾಂಗ್ರೆಸ್ ದಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಿಳಾ ಕಾಂಗ್ರೆಸ್ಸಿನ ಬ್ಲಾಕ್ ಅಧ್ಯಕ್ಷರುಗಳಾದ ಬಾಳಮ್ಮ ಜಂಗಿನವರ್, ಚೇತನ ಲಿಂಗದಾಳ್, ಸುಜನ್ ಕಾಕೆ, ಜ್ಯೋತಿ ವಾಲಿಕಾರ, ಲಕ್ಷ್ಮಿ ಗುತ್ತೆ, ಅಕ್ಕಮ್ಮ ಕಂಬಳಿ, ಪ್ರೀತಿ ಜೈನ ಮುಂತಾದವರು ಉಪಸ್ಥಿತರಿದ್ದರು.