ಕಲಘಟಗಿ –
ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳಲ್ಲಿ ಎಡೆಬಿಡದೇ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಆನ್ ಮಾಡುವಾಗ ಮತ್ತು ಆಫ್ ಮಾಡುವಾಗ ತುಂಬ ಜಾಗರೂಕತೆ ವಹಿಸಬೇಕು.ಹಾಗೆಯೇ ಹೊಲಗಳಲ್ಲಿ,ರಸ್ತೆಬದಿಗಳಲ್ಲಿ ವಿದ್ಯುತ್ ತಂತಿಗಳು, ಕಂಬಗಳು ತುಂಡಾಗಿ,ಮುರಿದು ಬಿದ್ದಿದ್ದರೆ ಕೂಡಲೇ ಈ ಮಾಹಿತಿಯನ್ನು ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಬೇಕೆಂದು ಮಾಜಿ ಸಚಿವ ಸಂತೋಷ ಲಾಡ್ ಕ್ಷೇತ್ರದ ಜಿಲ್ಲೆಯ ರೈತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ

ಹಾಗೆಯೇ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ, ಹೊಲಕ್ಕೆ ಹೋಗುವಾಗ ಹಳ್ಳಗಳು,ಕೆರೆಗಳು ತುಂಬಿ ಹರಿಯುತ್ತಿದ್ದರೆ ಅಂತಹ ರಸ್ತೆಗಳನ್ನು ದಾಟುವ ದುಸ್ಸಾಹಸ ಮಾಡಬಾರದು.ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ನಿಮ್ಮಲ್ಲಿ ಕಳಕಳಿಯ ಮನವಿ ಮಾಡುತ್ತೇನೆ ಎಂದಿದ್ದಾರೆ