ಗೌನ ಶಿಷ್ಟಾಚಾರಕ್ಕೆ ಇತಿಶ್ರೀ ಹಾಡಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ ಈರೇಶ ಅಂಚಟಗೇರಿ CM ಗೆ ಮನವಿ ನೀಡಿ ಒತ್ತಾಯಿಸಿದ್ದೇನು ಗೊತ್ತಾ…..

Suddi Sante Desk

ಹುಬ್ಬಳ್ಳಿ –

ದೇಶದ ಮಹಾನಗರ ಪಾಲಿಕೆ ಆಡಳಿತ ನಡೆಸುವ ಮಹಾ ಪೌರರು ಗೌನ ಧರಿಸಿ ಹಲವಾರು ಸಂದರ್ಭದಲ್ಲಿ ವಿಶೇಷ ವಾಗಿ ದೇಶದಗಣ್ಯರನ್ನ ಸ್ವಾಗತಿಸುವ ಸಂದರ್ಭದಲ್ಲಿ ಗೌನ ಧರಿಸಬೇಕಾಗಿದ್ದು ಈ ಶಿಷ್ಟಾಚಾರ ಬ್ರಿಟಿಷ್ ಕಾಲದಲ್ಲಿ ಕಡ್ಡಾಯವಾಗಿ ಧರಿಸಬೇಕಾದ ಉಡುಗೆ ತೊಡುಗೆಗಳ ಒಂದು ಭಾಗವಾಗಿದ್ದು ಭಾರತ ಸ್ವತಂತ್ರಗೊಂಡು 75 ವರ್ಷಗಳು ಗತಿಸಿದರು ಈ ಗೌನ‌ಧರಿಸುವ ಸಂಪ್ರದಾಯ ಮುಂದುವರೆದಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಿವಿಧ ವಿಷಯಗಳಲ್ಲಿ ಹಲವಾರು ಗೊಡ್ಡು ಸಂಪ್ರದಾಯಗಳಿಗೆ ವಿದಾಯಹೇಳಿದ್ದು ನೌಕಾ ಸೇನೆಯಲ್ಲಿ ಬ್ರಿಟೀಷರ ಲಾಂಛನ ತೆಗೆದು ಶಿವಾಜಿ ಮಹಾರಾಜರ ಲಾಂಛನ ಸೇರ್ಪಡೆ ಹಾಗೂ ರಾಷ್ಟ್ರದ ಲಾಂಛನದಲ್ಲಿ ಘರ್ಜಿಸುತ್ತಿ ರುವ ಸಿಂಹಗಳು ಹೀಗೆ ಹಲವಾರು ಬದಲಾವಣೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.

ಹಾಗೆ ಗೌನ ವಿಷಯದಲ್ಲಿ ಇದು ಬ್ರಿಟೀಷರು ಮಾಡುತ್ತಿ ರುವ ಪರಿಪಾಲನೆ ಹಾಗು ಇದರಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕ ಯಾವದೇ ಕರುಹಗಳಿಲ್ಲ ಕಾರಣ ಹುಬ್ಬಳ್ಳಿ ಧಾರವಾಡ ಮಹಾನಗರ ಪೂಜ್ಯ ಮಹಾಪೌರರು ಈ ಮೂಲಕ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿ ಬ್ರಿಟಿಷ್ ಪ್ರತೀಕ ಗೌನ ಧರಿಸುವ ಸಂಪ್ರದಾಯವನ್ನು ರಾಜ್ಯಾದ್ಯಂತ ರದ್ದುಪಡಿಸಿ ಭಾರತೀಯ ಸಾಂಸ್ಕೃತಿಕ ಪೋಷಾಕು ಮೈಸೂರು ಮಹಾರಾಜರು ಪ್ರತಿಪಾದಿಸಿದ ಪೋಷಾಕನ್ನು ಧರಿಸುವ ಬದಲಾವಣೆ ಮಾಡಲು ಮನವಿ ಪತ್ರ ಸಲ್ಲಿಸಿ ಶೀಘ್ರ ಕ್ರಮ ಕೈಗೊಳ್ಳಲು ಕೋರಿದರು.

ಇದರಿಂದ ನಮ್ಮ ಸಂಸ್ಕೃತಿಯ ಪರಿಚಯ ಹಾಗೂ ಭಾರತೀಯತೆಯ ಅನಾವರಣವಾಗಲಿದ್ದು ಈ ಮೂಲಕ ಇಡಿ ದೇಶದಲ್ಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯ ಮಹಾಪೌರರು ಈರೇಶ ಅಂಚಟಗೇರಿ ಮೊದಲ ಹೆಜ್ಜೆ ಇಟ್ಟಿದ್ದು ಸ್ವಾಗತಾರ್ಹ ಹಾಗು ಮಾನ್ಯ ಮುಖ್ಯಮಂತ್ರಿಗಳು ಈ ಬದಲಾವಣೆ ಶೀಘ್ರವಾಗಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.