This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ನಾಡಿನ ಶಿಕ್ಷಕರ ಪರವಾಗಿ CM ಗೆ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ ಮಾಡಿಕೊಡ ಮನವಿ ಏನು ಗೊತ್ತಾ

WhatsApp Group Join Now
Telegram Group Join Now

ಧಾರವಾಡ –

ಇಂದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ.(ರಿ) ರಾಜ್ಯ ಘಟಕ ಧಾರವಾಡ ಇವರಿಂದ ನಾಡಿನ ಶಿಕ್ಷಕರ ಪರವಾಗಿ ಮನವಿ…..

ಬ್ರಿಟಿಷರ ಕಾಲದಲ್ಲಿ ಶಿಕ್ಷಣ ಕ್ರಾಂತಿ ಮಾಡಿ ಬ್ರಿಟಿಷರಿಂದ ಇಂಡಿಯನ ಫಸ್ಟ ಲೇಡಿ ಟೀಚರ ಎಂಬ ಬಿರುದು ಪಡೆದ ಭಾರತದ ಮೊದಲ ಶಿಕ್ಷಕಿ ಎಂಬ ಹೆಗ್ಗುರೀತಿಗೆ ಪಾತ್ರರಾದ ಮಾತೆ ಸಾವಿತ್ರಿಬಾಯಿ ಪುಲೆಯವರ ಹೆಸರಿನಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸರ್ಕಾರಿ, ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕಿಯರನ್ನು ಒಳಗೊಂಡ ಕರ್ನಾಟಕದ ಏಕಮಾತ್ರ ಸಂಘ ನಮ್ಮದಾಗಿದೆ ನಮ್ಮ ಸಂಘದ ಈ ಬೇಡಿಕೆಗಳು ಕರ್ನಾಟಕ ರಾಜ್ಯದಾ ದ್ಯಂತ ಕಾರ್ಯನಿರ್ವಹಿಸುತ್ತಿರುವ ಸಮಸ್ತ ಮಹಿಳಾ ಶಿಕ್ಷಕರಿಗೆ ಸಂಬಂಧಿಸಿದ್ದು, ಇವುಗಳನ್ನು ಈಡೇರಿಸಬೇಕಾ ಗಿದೆ ಸವಿನಯವಾಗಿ ಪ್ರಾರ್ಥಿಸುತ್ತೇವೆ.

1.ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡಕ್ಕೆ ಮಾನ್ಯತೆ ನೀಡುವ ಕುರಿತು ಶಿಕ್ಷಕಿ ಶಿಕ್ಷಣದ ಕಣ್ಣು ಕರ್ನಾಟಕದಲ್ಲಿ ಒಟ್ಟು ಶಿಕ್ಷಕರ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಶಿಕ್ಷಕಿಯರು ಇದ್ದಾರೆ. ಸರ್ಕಾರ ಕೇವಲ ಮಾನ್ಯತೆ ಪಡೆದಿರುವ ಸಂಘಗಳ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ OOD ಸೌಲಭ್ಯವನ್ನು ನೀಡುತ್ತಿದೆ.. ಆದರೆ ಶೈಕ್ಷಣಿಕ ಪರ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಧನಾತ್ಮಕ ಯೋಜನೆಗಳನ್ನು ರೂಪಿಸುತ್ತ ಶೈಕ್ಷಣಿಕ ಕಾರ್ಯಾಗಾರಗಳನ್ನು ನಮ್ಮ ಸಂಘಟನೆ ಹಮ್ಮಿಕೊಳ್ಳುತ್ತ ಬಂದಿದೆ.ಆದಕಾರಣ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಸರಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕಿಯರ ಸಂಘಟನೆಯಾಗಿದ್ದು ಅತಿಹೆಚ್ಚಿನ ಶಿಕ್ಷಕಿಯರು ಸಂಘಟಿತ ರಾಗಿದ್ದು ನಮ್ಮ ಸಂಘಟನೆಗೂ ಸಹ ಸಂವಿಧಾನಾತ್ಮ ಕವಾಗಿ ರಚನೆಯಾಗುವ ಹಕ್ಕು ಇದ್ದು, ನ್ಯಾಯಸಮ್ಮತ ವಾಗಿ ನೋಂದಣಿಯಾಗಿದ್ದು, ನಮಗೂ ಮಾನ್ಯತೆಯನ್ನು ಹಾಗೂ ಓ.ಓ.ಡಿ ಸೌಲಭ್ಯವನ್ನು ನೀಡಬೇಕೆಂದು ಕೇಳಿಕೊ ಳ್ಳುತ್ತೇವೆ.

  1. ಪ್ರತಿ ಶಾಲೆಗಳಲ್ಲಿ ಕಿಶೋರಿಯರಿಗೆ ಒಂದು ವಿಶ್ರಾಂತಿ ಕೊಠಡಿ:
    ತರಗತಿ ಕೊಠಡಿಗಳಲ್ಲಿ ಹದಿಹರೆಯದ ವಿದ್ಯಾರ್ಥಿನಿಯರ ಋತುಸ್ರಾವದ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ಯಾತನೆಯನ್ನು ಆ ಸಂದರ್ಭದಲ್ಲಿ ಹೊಟ್ಟೆನೋವು ಅನುಭವಿಸುತ್ತಿದ್ದು. ಪರ ಸ್ಥಳಗಳಿಂದ ಬರುವಂತಹ ವಿದ್ಯಾರ್ಥಿನಿಯರಿಗೆ ಆ ಸಂದರ್ಭದಲ್ಲಿ ದಿನದ ಒಂದು ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಪ್ರತಿ ಶಾಲೆಗಳಲ್ಲಿ ಒಂದು ಕೊಠಡಿ ವ್ಯವಸ್ಥೆಯನ್ನು ಮಾಡುವದು

3 ಮಹಿಳಾ ಶಿಕ್ಷಕಿಯರಿಗೆ ಪ್ರತ್ಯೇಕ ಶೌಚಾಲಯ ರಾಜ್ಯದಾದ್ಯಂತ ಎಲ್ಲಾ ಶಾಲೆಗಳಲ್ಲಿ ಪುರುಷರಿಗಿಂತ ಅತಿ ಹೆಚ್ಚು ಶಿಕ್ಷಕಿಯರೇ ಕಾರ್ಯನಿರ್ವಹಿಸುತ್ತಿದ್ದು,
ಯಾವುದೇ ಪ್ರತ್ಯೇಕ ಶೌಚಾಲಯ ಶಿಕ್ಷಕಿಯರಿಗಾಗಿ ಇಲ್ಲ ನಾವು ಸಹ ಮಕ್ಕಳ ಶೌಚಾಲಯ ಬಳಕೆ ಮಾಡಿಕೊಳ್ಳುತ್ತಿದ್ದು, ದಯಮಾಡಿ ನಮ್ಮದೇ ಆದ ಒಂದು ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಆಗಬೇಕು.

  1. ವರ್ಗಾವಣೆಯ ನೀತಿಯಲ್ಲಿ ತಿದ್ದುಪಡಿ ಮಾಡುವ ಕುರಿತು: ಕಳೆದ 4,5 ವರ್ಷಗಳಿಂದ ವರ್ಗಾವಣೆ ಭ್ರಮೆಯಲ್ಲಿಯೇ ಜೀವನ ಮಾಡುತ್ತಿರುವ ಶಿಕ್ಷಕರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.. ಸತತವಾಗಿ ಹಲವು ವರ್ಷಗಳಿಂದ ಕುಟುಂಬದಿಂದ ದೂರ ಇದ್ದು ಒಂದೇಕಡೆ ಕಾರ್ಯನಿರ್ವಹಿಸುತ್ತಿದ್ದಾರೆ. ನೇಮಕಾತಿ ಆದೇಶದಂತೆ 5 ವರ್ಷ ಸೇವೆ ಪೂರೈಸಿದ್ದಾರೆ. ಆದರೂ ಸಹ ಸ್ವಂತ ಜಿಲ್ಲೆಗೆ ವರ್ಗಾವಣೆ ಯಾಗದೆ ಪರಿತಪಿಸುತ್ತಿದ್ದಾರೆ ಆದ್ದರಿಂದ ವರ್ಗಾವಣೆ ಬಯಸುವ ಎಲ್ಲ ಶಿಕ್ಷಕರಿಗೆ OTS ಅನುಸಾರ ವರ್ಗಾವಣೆ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.. ಒಂದು ಬಾರಿ ಅವರ ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿ ಹೋಗುವ ಅವಕಾಶ ಕಲ್ಪಿಸಬೇಕು
  2. Back to OPS: ನೂತನ ಪಿಂಚಣಿ ಯೋಜನೆಯು ಪ್ರಸ್ತುತ ಎಲ್ಲಾ ನೌಕರರಿಗೆ ಮಾರಕವಾಗಿದ್ದು, ತಮ್ಮ ವಯೋನಿವೃತ್ತಿಯ ಅವಧಿಯಲ್ಲಿ, ಯಾವುದೇ ಸಾಮಾಜಿಕ, ಆರ್ಥಿಕ ಭದ್ರತೆ ಇಲ್ಲದೆ ನಿವೃತ್ತ ಶಿಕ್ಷಕರ ಹೀನಾಯ ಸ್ಥಿತಿಯನ್ನು ತಲುಪುತ್ತಾರೆ ಆದಕಾರಣ ನೂತನ ಪಿಂಚಣಿ ಯೋಜನೆಯ ಪ್ರಗತಿಯನ್ನು ಹಾಗೂ ಮಾರ್ಪಾಡನ್ನು ಮಾಡಿ, ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕಾಗಿದೆ ಸಮಸ್ತ ನೌಕರರ ಭಾಂಧವರ ಪರವಾಗಿ ಕೇಳಿಕೊಳ್ಳುತ್ತೇವೆ..

*6) *C and R ನಿಯಮ ಪರಿಷ್ಕರಣೆ* : ಕರ್ನಾಟಕ ರಾಜ್ಯದ ಎಲ್ಲಾ ಇಲಾಖೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ತಮ್ಮ ಸೇವಾವಧಿ ಹಾಗೂ ಜೇಷ್ಠತೆ ಅನುಸಾರ ಮುಂಬಡ್ತಿ ನೀಡಲಾಗುತ್ತಿದೆ.ಆದರೆ ವಿಷಾದವೆಂದರೆ ರಾಜ್ಯದ ಅತಿ ಹೆಚ್ಚು ನೌಕರರ ಸಂಖ್ಯೆ ಹೊಂದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಮುಂಬಡ್ತಿಯನ್ನು ದೊರೆಯದೆ ಸೇವಾವಧಿ, ಹಾಗೂ ಪದವಿಗಳು ಹಿಂಬಡ್ತಿಯಾಗುತ್ತಿವೆ. ದಯಮಾಡಿ ರಾಜ್ಯದ ಎಲ್ಲಾ ಪ್ರತಿಭಾನ್ವಿತ ಶಿಕ್ಷಕರಿಗೆ ತಮ್ಮ ಸೇವಾವಧಿ ಹಾಗು ಜೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಬೇ ಕಾಗಿ ಸಂಘದ ಲತಾ. ಎಸ್. ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು,ಹಾಗೇ ಶ್ರೀಮತಿ ಜ್ಯೋತಿ. H. ರಾಜ್ಯ ಪ್ರಧಾನ ಕಾರ್ಯದರ್ಶಿವಿನಂತಿಸಿಕೊಂಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk