ಹುಬ್ಬಳ್ಳಿ –
ಹೆಸರಿಗೆ ಖಾಸಗಿ ಕಾರು ಬಾಡಿಗೆ ಪಡೆದುಕೊಂಡು ಅದರ ಮೇಲೆ ಕರ್ನಾಟಕ ಸರ್ಕಾರ ಎಂದು ಬರೆದು ಕೊಂಡು ಸುತ್ತಾಡುತ್ತಿದ್ದ ಕಾರೊಂದನ್ನು ನಿಲ್ಲಿಸಿ ಹುಬ್ಬಳ್ಳಿಯಲ್ಲಿ ಪೊಲೀಸರು ಬುದ್ದಿ ಕಲಿಸಿದ್ದಾರೆ.
ಹೌದು ಗದಗ ನ ಕನ್ನಡ ಮತ್ತು ಸಂಸ್ಕ್ರತ ಇಲಾಖೆಯ ಸಹಾಯಕ ನಿರ್ದೇಶಕರು ತಮಗೆ ಸುತ್ತಾಡಲು ಖಾಸ ಗಿ ಕಾರೊಂದನ್ನು ಬಾಡಿಗೆ ಪಡೆದುಕೊಂಡಿದ್ದರು.
ಗದಗ ವ್ಯಾಪ್ತಿಯಲ್ಲಿ ಸುತ್ತಾಡಬೇಕಾಗಿದ್ದ ಕಾರು ಹುಬ್ಬಳ್ಳಿಯಲ್ಲಿ ಬೋರ್ಡ್ ಹಾಕಿಕೊಂಡು ತಿರುಗಾಡು ತ್ತಿದ್ದನ್ನು ನೋಡಿದ ಹುಬ್ಬಳ್ಳಿಯಲ್ಲಿನ ಪೊಲೀಸರು ನಗರದ ಚನ್ನಮ್ಮ ಸರ್ಕಲ್ ನಲ್ಲಿ ಕಾರನ್ನು ತಡೆ ಹಿಡಿದು ನಿಲ್ಲಿಸಿ ಬೋರ್ಡ್ ತಗೆಸಿದಿದ್ದಾರೆ.
ಗದಗನ ವೀರಯ್ಯಸ್ವಾಮಿ ಎಂಬುವರು ಈ ಕಾರನ್ನು ಇಲಾಖೆಗೆ ಬಾಡಿಗೆ ಪಡೆದುಕೊಂಡು ಅದಕ್ಕೆ ಕರ್ನಾಟಕ ಸರ್ಕಾರ ಎಂದು ಬೋರ್ಡ್ ಹಾಕಿಕೊಂ ಡು ತಿರುಗಾಡುತ್ತಿದ್ದರು. ಪ್ರಮುಖವಾಗಿ ಯಾವುದೇ ಖಾಸಗಿ ಕಾರನ್ನು ಬಾಡಿಗೆ ತಗೆದುಕೊಂಡಾಗ ಅದಕ್ಕೆ ಕರ್ನಾಟಕ ಸರ್ಕಾರ ಅಂತಾ ಹಾಕಲು ಬರೋದಿಲ್ಲ ಹೀಗಿರುವಾಗ ನಿಯಮಗಳನ್ನು ಗಾಳಿಗೆ ತೂರಿ ನಗರಕ್ಕೆ ಬಂದಿದ್ದ ಕಾರನ್ನು ಹಿಡಿದ ಹುಬ್ಬಳ್ಳಿಯ ಪೊಲೀಸರು ಬೋರ್ಡ್ ತಗೆಸಿ ತಿಳುವಳಿಕೆ ಹೇಳಿ ಬಿಟ್ಟು ಕಳಿಸಿದ್ದಾರೆ.
ಸಧ್ಯ ಕಾರನ್ನು ಬಿಟ್ಟು ಕಳಿಸಿದ್ದು ಹೀಗೆ ಇನ್ನೊಮ್ಮೆ ಮಾಡದಂತೆ ಎಚ್ಚರಿಕೆಯನ್ನು ನೀಡಿ ಕಳಿಸಿದ್ದಾರೆ.
ವರದಿ ಯಶವಂತ ಡೋಣೂರ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ