ಧಾರವಾಡ –
ಈ ಕೊವಿಡ್ ಸಂಕಷ್ಟ ದಿನಗಳಲ್ಲಿ ಹಲವಾರು ಸವಾಲುಗಳು ಇರುವಂತ ಈ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಬಿಸಲು ಈಗಾಗಲೇ ಇಲಾಖೆ ಸೂಚನೆ ನೀಡಿದೆ.ಎಲ್ಲಾ ಶಿಕ್ಷಕ ಶಿಕ್ಷಕಿಯರು
ಜೂನ್ 15 ರಿಂದ ಶಾಲೆಗೆ ಹಾಜರಾಗಿ ಮಕ್ಕಳ ಶಾಲಾ ದಾಖಲಾತಿ ಪ್ರಾರಂಬಿಸಿಕೊಳ್ಳಲು ಶಾಲೆಗ ಳಿಗೆ ತೆರಳಬೇಕಾಗಿದೆ ಇದನ್ನು ಈಗಲೇ ಆರಂಭ ಮಾಡದೇ ಮುಂದೂಡಿಕೆ ಮಾಡುವಂತೆ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಸರ್ವ ಸದಸ್ಯರ ಧ್ವನಿಯಾಗಿ ಒತ್ತಾಯವನ್ನು ಮಾಡಿದೆ.

ಕೊವಿಡ್ ಎರಡನೇ ಅಲೆಯು ನಗರ ಪ್ರದೇಶ ಗಳಿಗಿಂತ ಹಳ್ಳಿ ಪ್ರದೇಶಗಳಲ್ಲಿಯೇ ಬಾರಿ ಸಂಚಲನ ಉಂಟು ಮಾಡಿರುವುದು ಎಲ್ಲರಿಗೂ ತಿಳಿದಿದೆ ಈಗಾಗಲೇ ನೂರಾರು ಶಿಕ್ಷಕ-ಶಿಕ್ಷಕಿಯರು ಕೊವಿಡ್ ಸೋಂಕಿಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಲು ಗರ್ಭಿಣಿ ಶಿಕ್ಷಕಿಯರು,ಒಂದು ವರ್ಷದ ಮಗು ಇರುವ ತಾಯಂದಿರುಗಳಿಗೆ, ವಿಕಲ ಚೇತನ ಶಿಕ್ಷಕಿಯರಿಗೆ ಹಾಗೂ ತೀವ್ರತರ ಕಾಯಿಲೆಗ ಳಿಂದ ಬಳಲುತ್ತಿರುವ ಶಿಕ್ಷಕಿಯರಿಗೆ ಕಷ್ಟ ಸಾದ್ಯವಾ ಗುತ್ತದೆ ಎಂದು ಸಂಘದ ಅಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರು ಒತ್ತಾಯ ಮಾಡಿದ್ದಾರೆ

ಅಂತಹ ಶಿಕ್ಷಕಿಯರ ಆರೋಗ್ಯದ ದೃಷ್ಟಿಯಿಂದ ಶಾಲಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಹಾಗೂ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು ಅವರ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕೆಂದು ಹಾಗೆಯೇ ಬೇಸಿಗೆ ರಜೆ ಕಾರಣಕ್ಕೆ ಪ್ರಸ್ತುತ ದಿನದಲ್ಲಿ ತಮ್ಮ ಸ್ವಂತ ಜಿಲ್ಲೆಗಳಲ್ಲಿರುವ ಸಾವಿರಾರು ಶಿಕ್ಷಕರು ಇಂದು ಲಾಕ್ ಡೌನ್ ವಿಸ್ತರಣೆಯಿಂದಾಗಿ ಬಸ್ ಸಂಚಾರ ಇಲ್ಲದೆ ಸ್ವಂತ ಜಿಲ್ಲೆಗಳಿಂದ ಶಾಲೆಗಳತ್ತ ತೆರಳಲುಸಾದ್ಯವಿಲ್ಲ, ಆದ ಕಾರಣ ಕೂಡಲೇ ಬಸ್ ಸಂಚಾರ ಪ್ರಾರಂಭಿಸಿ ಸಕಾಲದಲ್ಲಿ ಶಾಲೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಡಬೇಕೆಂದು ಹಾಗೂ ಪ್ರತೀ ಶಿಕ್ಷಕರಿಗೂ ಮೊದಲ ಸಾಲಿನ ಪ್ರಾಶಸ್ತ್ಯ ನೀಡಿ ಕೊವಿಡ್ ಲಸಿಕೆ ನೀಡಬೇಕು ಇದರಿಂದ ಎಲ್ಲಾ ಶಿಕ್ಷಕರಿಗು ಅನುಕೂಲವಾಗುತ್ತದೆ.ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ. H. ಸಮಸ್ತ ಶಿಕ್ಷಕ- ಶಿಕ್ಷಕಿಯರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
