ಹುಬ್ಬಳ್ಳಿ –
ನೀವು ಮುಖ್ಯಮಂತ್ರಿ ಆಗತೀರಾ ಎಂಬ ಪ್ರಶ್ನೆ ಯನ್ನು ಮಾಧ್ಯಮದವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕೇಳುತ್ತಿದ್ದಂತೆ ನಗು ನಗುತ್ತಾ ಉತ್ತರಿಸಿದರು ಅಲ್ಲದೇ ನೀವೇ ಹೇಳಬೇಕು ಎಂದು ನಗುತ್ತಾ ನಕ್ಕು ಸುಮ್ಮನಾದರು ಪ್ರಲ್ಹಾದ್ ಜೋಶಿ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಹೇಳಿಕೆಯನ್ನು ನೀಡಿದ್ದಾರೆಂದರು. ಯಡಿಯೂರಪ್ಪ ಮತ್ತು ಕೇಂದ್ರ ನಾಯಕರ ಮಧ್ಯೆ ಏನು ಮಾತುಕತೆ ನಡೆದಿದೆ ಅದರ ವಿವರ ನನಗೆ ಗೊತ್ತಿಲ್ಲವೆಂದರು.
ಇನ್ನೂ ಏನೇ ಮಾತುಕತೆ ನಡೆದಿದ್ದರೂ ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರಿಗೆ ಮಾತ್ರ ಗೊತ್ತು ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಬಗ್ಗೆ ಯಾರು ನನ್ನ ಜೊತೆ ಚರ್ಚೆ ಮಾಡಿಲ್ಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ.ನರೇಂದ್ರ ಮೋದಿ ಅವರು ಇದ್ದಾರೆ ಅವರು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ತುಟಿಬಿಚ್ಚದ ಪ್ರಲ್ಹಾದ್ ಜೋಶಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸೂಕ್ತ ವ್ಯಕ್ತಿ ಅಲ್ಲ ಎನ್ನುತ್ತಾ ಮಾತನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಗಿಸಿದರು.