ಬೆಂಗಳೂರು –
ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳ ಕೈಗೆ ಪಠ್ಯಪುಸ್ತಕ ಯಾವಾಗ ಸಿಗಲಿವೆ ಗೊತ್ತಾ – ಪಠ್ಯಪುಸ್ತಕ ಸಂಘದ ಮುಖ್ಯಸ್ಥರು ಹೇಳಿದ್ದೇನು ನೋಡಿ
ಶೈಕ್ಷಣಿಕ ವರ್ಷ ಮುಕ್ತಾಯದ ಬೆನ್ನಲ್ಲೇ ಮುಂದಿನ ಶೈಕ್ಷಣಿಕ ವರ್ಷದ ಸಿದ್ದತೆಯನ್ನು ಈಗಾಗಲೇ ಶಿಕ್ಷಣ ಇಲಾಖೆ ಮಾಡಿಕೊಳ್ಳುತ್ತಿದೆ.ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಬೇಕಾದ ಸಮವಸ್ತ್ರ ,ಶೂ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಇಲಾಖೆ ಈಗಾಗಲೇ ಮಾಡಿಕೊಳ್ಳುತ್ತಿದ್ದು
ಈ ನಡುವೆ ಪಠ್ಯಪುಸ್ತಕಗಳನ್ನು ಕೂಡಾ ತರಿಸಿ ಕೊಳ್ಳಲು ವ್ಯವಸ್ಥೆಯನ್ನು ಮಾಡುತ್ತಿದೆ.ಹೌದು ಶಾಲಾ ಆರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ಪ್ರಮುಖವಾಗಿ ಬೇಕಾಗಿರುವ ಪಠ್ಯಪುಸ್ತಕ ವ್ಯವಸ್ಥೆ ದೊಡ್ಡ ಕಾರ್ಯವಾಗಿದ್ದು ಮೇ ಕೊನೆಯ ವಾರದಲ್ಲಿ ಮಕ್ಕಳ ಕೈಗೆ ಪಠ್ಯಪುಸ್ತಕಗಳು ಸೇರಲಿವೆ ಎಂದು ಪಠ್ಯಪುಸ್ತಕ ಸಂಘದ ಮುಖ್ಯ ಸ್ಥರಾಗಿರುವ ಎನ್ ಮಂಜುಶ್ರೀ ಹೇಳಿದ್ದಾರೆ.
ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ಎಪ್ರಿಲ್‌ನಲ್ಲೇ ಶಾಲಾ ಮಕ್ಕಳ ಕೈಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳು ಸೇರಿದ್ದವು.ಆದರೆ ಈ ವರ್ಷ ಮೇ ತಿಂಗಳ ಕೊನೆಯ ವಾರ ಅಂದರೆ ಶಾಲೆ ಆರಂಭದ ಹಿಂದಿನ ವಾರವಷ್ಟೇ ಪಠ್ಯ ಪುಸ್ತಕಗಳು ಮಕ್ಕಳ ಕೈ ಸೇರಲಿವೆ ಎಂದರು.
ಇನ್ನೂ 2023-24ರ ಸಾಲಿನಲ್ಲಿ ಪಠ್ಯ ಪುಸ್ತಕದ ಮುದ್ರಣದ ಟೆಂಡರ್ 2022ರ ಡಿಸೆಂಬರ್ ಹೊತ್ತಿಗೆ ಅಖೈರುಗೊಂಡಿತ್ತು ಎಪ್ರಿಲ್ ಮೊದಲ ವಾರದಲ್ಲೇ ಪಠ್ಯ ಪುಸ್ತಕಗಳ ವಿತರಣೆ ಆರಂಭ ಗೊಂಡು ಆ ತಿಂಗಳ ಕೊನೆಯ ಹೊತ್ತಿಗೆ ಶೇ. 95ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳು ಶಾಲೆ ಅಥವಾ ಮಕ್ಕಳ ಕೈ ಸೇರಿದ್ದವು
ಆದರೆ 2024-25ರ ಸಾಲಿನ ಟೆಂಡರ್‌ನ ಬಿಡ್ಡಿಂಗ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಹೀಗಾಗಿ ಸ್ವಲ್ಪು ವಿಳಂಬವಾಗಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..