ಧಾರವಾಡ –
ಧಾರವಾಡದ ಅಕ್ಷರತಾಯಿ ಎಂದೇ ಹೆಸರಾದವರು ಶ್ರೀಮತಿ ಲೂಸಿ ಕೆ ಸಾಲ್ಡಾನರವರು. ಈಗಾಗಲೇ 75 ಸರ್ಕಾರಿ ಶಾಲೆಗಳಿಗೆ ದತ್ತಿ ನೀಡುತ್ತಾ ಬಂದಿರುವ ಇವರು ಇಂದು ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಮತ್ತೊಂದು ಸರ್ಕಾರಿ ಶಾಲೆಗೆ ದತ್ತಿ ನೀಡಿದರು.

ಹೌದು ಧಾರವಾಡ ತಾಲೂಕಿನ ಮುಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ದತ್ತಿ ನೀಡಿದರು. ಶಾಲೆಯ ಶಿಕ್ಷಕರಾದ ಸಿದ್ಧಲಿಂಗೇಶ ಎಂ ವ.ಕೆ ಎಂ ಮುನವಳ್ಳಿ, ಮುಖ್ಯ ಶಿಕ್ಷಕರ ಕೋರಿಕೆಯ ಮೇರೆಗೆ ಸದರಿ ಶಾಲೆಗೆ 20 ಸಾವಿರ ದತ್ತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ದತ್ತಿ ನೀಡಿದರು. ಲೂಸಿ ಸಾಲ್ಡಾನ ಮಾತನಾಡಿ ನಾನು ಇದು ವರೆಗೆ ಧಾರವಾಡ ಜಿಲ್ಲೆಯ 75 ಸರ್ಕಾರಿ ಶಾಲೆಗಳಿಗೆ ದತ್ತಿಯನ್ನು ನೀಡಿರುವೆ, ಇದು 76 ನೆಯ ದತ್ತಿ ಶಾಲೆಯಾಗಿದೆ ಎಂದರು.

ಇದು ಸೂರ್ಯ ಚಂದ್ರ ಇರುವವರೆಗೆ ಇದು ಬ್ಯಾಂಕಿನಲ್ಲಿ ಪಿಕ್ಸ್ ಡಿಪಾಜಿಟ್ ಆಗಿ ಇರುವುದು, ಇದಕ್ಕೆ ಸ್ಥಳೀಯ ಶಾಲಾ ಸಮಿತಿಯ ಸಂಘ ಸಂಸ್ಥೆಯವರು, ದತ್ತಿ ಸೇರಿಸಬೇಕು, ದತ್ತನಿಧಿ ಹೆಚ್ಚಿಸಬೇಕು, ಪ್ರತಿವರ್ಷ ಅದರಲ್ಲಿ ಬರುವ ಬಡ್ಡಿಯನ್ನು ಮಾತ್ರ ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಕೊಡಬೇಕು, ಪ್ರತಿ ವರ್ಷವೂ ಸದರಿ ಶಾಲೆಯ ಒಬ್ಬ ಶಿಕ್ಷಕರಿಗೆ ಸತ್ಕರಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಲೂಸಿ ಸಾಲ್ಡಾನ ಮನೆಯಲ್ಲಿ ತಂದೆ,ತಾಯಿ, ಹಿರಿಯರಿಗೆ, ಶಾಲೆಯಲ್ಲಿ ಶಿಕ್ಷಕರಿಗೆ ಗೌರವ ಕೊಡುವುದರ ಜೊತೆಗೆ ಮನಸ್ಸಿಟ್ಟು ಓದಬೇಕು, ಮೊಬೈಲ್ ಬಳಸ ಬೇಡಿ ಹೆಚ್ಚಿನ ಸಮಯವನ್ನು ಓದಿನ ಕಡೆ ಗಮನಕೊಡಿ ಎಂದರು.ಈವರೆಗೆ ನನ್ನ ಜೀವನದಲ್ಲಿ ಕೂಡಿಟ್ಟಿ ಎಲ್ಲಾ ಹಣವನ್ನು 75 ಸರ್ಕಾರಿ ಶಾಲೆಗಳಿಗೆ ದತ್ತಿದಾನ ಮಾಡಿದ್ದು ಉಪಯೋಗ ಮಾಡಿಕೊಳ್ಳಿ ಎಂದರು.

ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಪಿಕೆ ಕಾಂಬಳೆ.SDMC ಅಧ್ಯಕ್ಷ ನಾಗೇಂದ್ರ ಜೋಡಳ್ಳಿ, ಉಪಾಧ್ಯಕ್ಷ ಮಡಿವಾಳಪ್ಪ ಧಾರವಾಡ. ಗ್ರಾಂ ಪ ಸದಸ್ಯ ಈಶ್ವರ ಸಿದ್ದುಮನಿ, ಶಾಸಕರ ಆಪ್ತ ಕಾರ್ಯದರ್ಶಿ ಆತ್ಮಾನಂದ ಕಡ್ಲೆಸ್ಕರ್, sdmc ಸದಸ್ಯರಾದ ಮಹೇಶ ಗೌಡ್ರೆ ಅಪ್ನಾದೇಶ ಬಳಗದ ಸಂಚಾಲಕರಾದ ಎಲ್ ಐ ಲಕ್ಕಮ್ಮನವರ ಸಿ ಆರ್ ಪಿ ರುದ್ರಪ್ಪಕುರ್ಲಿ ಮುಂತಾದವರು ಹಾಜರಿದ್ದರು, ಸಿದ್ದಲಿಂಗೇಶ ಎಂ ವಿ ಸ್ವಾಗತಿಸಿದರು, ಕೆ ಎಂ ಮುನವಳ್ಳಿ ನಿರೂಪಿಸಿದರು, ಮಂಜುನಾಥ್ ಮಳಗಲಿ ವಂದಿಸಿದರು.