ಶಿವಮೊಗ್ಗ –
ಖಾಸಗಿ ಶಾಲೆಗಳ ಹಾವಳಿ ಮುಂದೆ ಮಂಕಾಗಿದ್ದ ಸರಕಾರಿ ಶಾಲೆಗಳು ಗ್ರಾಮ ಪಂಚಾಯತ್ ದಾನಿಗಳ ನೆರವಿನಿಂದ ಈಗ ಹೊಸ ರೂಪ ಪಡೆದು ಹೊಳೆಯುತ್ತಿವೆ.ಸುಣ್ಣ ಬಣ್ಣ ಕಂಡು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ.ಶಾಲೆ ಆವರಣ ಕೂಡ ಸ್ವಚ್ಛವಾಗುತ್ತಿದೆ.ಸರಕಾರದಿಂದ ಬರುವ ಅನುದಾ ನವು ಶಾಲೆಗಳ ದುರಸ್ತಿಗೆ ಸೀಮಿತವಾಗಿತ್ತು.ಸುಣ್ಣ ಬಣ್ಣ ಕಾಣುವುದು ಕನಸಿನ ಮಾತೇ ಆಗಿತ್ತು.ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಜಿಪಂ ಸಿಇಒ ಎಂ.ಎಲ್. ವೈಶಾಲಿ ಅವರು ಗ್ರಾಪಂಗಳಿಗೆ ಮನವಿ ಮಾಡಿದರು.ಮನ ವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್‌ಗಳು ದಾನಿಗಳ ನೆರವಿನಿಂದ ಶಾಲೆಗಳಿಗೆ ಸುಣ್ಣ ಬಣ್ಣ ಹಚ್ಚುವ ಕಾರ್ಯ ಕೈಗೊಂಡಿವೆ.ಈ ಕಾರ್ಯಕ್ಕೆ ಗ್ರಾಪಂ ಸದಸ್ಯರು,ಅಧ್ಯಕ್ಷರು, ಪಿಡಿಒ,ಅಧಿಕಾರಿಗಳು, ತಾಪಂ ಅಧಿಕಾರಿಗಳು,ಊರಿನ ಪ್ರಮುಖರು,ಆಯಾ ಶಾಲೆಗಳ ಹಿರಿಯ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ.ನಮ್ಮೂರ ಶಾಲೆ ಎಂಬ ಅಭಿಮಾನಕ್ಕೆ 500,ಸಾವಿರ ರೂ.ಹೆಚ್ಚಿನ ಧನಸಹಾಯ ನೀಡಿ ಖುದ್ದು ತಾವೇ ಬಣ್ಣ ಖರೀದಿಸಿ ಶಾಲೆಗಳನ್ನು ಸುಂದರಗೊಳಿಸುತ್ತಿ ದ್ದಾರೆ.ಖುದ್ದು ಖರೀದಿಯಿಂದ ಖರ್ಚು,ವೆಚ್ಚವೂ ಸಾಕಷ್ಟು ಉಳಿತಾಯವಾಗಿದೆ.

300 ಕ್ಕೂ ಹೆಚ್ಚು ಶಾಲೆಗಳಿಗೆ ಈಗಾಗಲೇ ಬಣ್ಣವನ್ನು ಹಚ್ಚಲಾಗಿದ್ದು ಜಿಲ್ಲೆಯಲ್ಲಿ 262 ಗ್ರಾಪಂಗಳಿದ್ದು ಒಟ್ಟು 1839 ಕಿರಿಯ ಪ್ರಾಥಮಿಕ,ಹಿರಿಯ ಪ್ರಾಥಮಿಕ ಶಾಲೆ ಹಾಗೂ 164 ಪ್ರೌಢಶಾಲೆಗಳಿವೆ.ಇದರಲ್ಲಿ ಶೇ.50ರಷ್ಟು ಶಾಲೆಗಳಿಗೆ ಸುಣ್ಣಬಣ್ಣದ ಅಗತ್ಯವಿದೆ ಎಂದು ಅಂದಾಜಿಸ ಲಾಗಿದೆ. ಈಗಾಗಲೇ 300ಕ್ಕೂ ಶಾಲೆಗಳು ಸುಂದರಗೊಂ ಡಿದ್ದು ಮೇ ಕೊನೆವರೆಗೂ ಅಭಿಯಾನ ಮುಂದುವರೆಯ ಲಿದೆ.ಸಾವಿರಾರು ಶಾಲೆಗಳು ಗ್ರಾಮ ಪಂಚಾಯತ್ ನೆರವಿನಿಂದ ಅಭಿವೃದ್ಧಿ ಕಾಣುತ್ತಿವೆ.ಸಣ್ಣ ಶಾಲೆಗಳಿಗೆ 10 ರಿಂದ 20 ಸಾವಿರ ದೊಡ್ಡ ಶಾಲೆಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.

ಸರಕಾರಿ ಶಾಲೆ ಅಭಿವೃದ್ಧಿ ಸಂಬಂಧ ಜಿಪಂ ಮನವಿ ಮಾಡಿತ್ತು.ಊರಿನಲ್ಲಿ ಸಭೆ ನಡೆಸಿದ ಮೇಲೆ ಎಲ್ಲ ಗ್ರಾಪಂ ಸದಸ್ಯರು,ಸಂಘ,ಸಂಸ್ಥೆಗಳು ಊರಿನ ಮುಖಂಡರೆಲ್ಲ ಸಹಾಯ ಮಾಡಲು ಮುಂದೆ ಬಂದಿದ್ದಾರೆ.ಕೆಲಸ ಆರಂಭ ವಾಗಿದೆ.ಜನರ ಉತ್ಸಾಹ ನೋಡಿ ಸರಕಾರ ಮಾಡಬೇಕಾದ ಕೆಲಸವನ್ನು ನಾವೇ ಮಾಡಬಹುದು ಎಂದೆನಿಸಿತು ಎಂಬ ಮಾತನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ರಾದ ಶಿವನಗೌಡ ಹೇಳಿದರು ಇನ್ನೂ ನಾವು ಓದಿದ ಶಾಲೆ ದೇವಾಲಯ ಇದ್ದಂತೆ.ಜಿಪಂ ಅವರು ಅಭಿಯಾನ ಮಾಡಲು ಕೇಳಿದ್ದರು. ಸದಸ್ಯರೆಲ್ಲ ಸೇರಿ ವೈಯಕ್ತಿಕವಾಗಿ ಹಣ ಹಾಕಿದ್ದೇವೆ.ಶಾಲೆ ಎಸ್‌ಡಿಎಂಸಿ,ಶಿಕ್ಷಕರು,ಇದೇ ಶಾಲೆಯಲ್ಲಿ ಓದಿದ ಊರಿನ ಮುಖಂಡರು ಹಣ ಕೊಡಲು ಮುಂದೆ ಬಂದಿದ್ದಾರೆ. ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಎ.ಜಿ.ಮಲ್ಲನಗೌಡ ಅಧ್ಯಕ್ಷರು ದಾಸರಕಲ್ಲಹಳ್ಳಿ ಗ್ರಾಪಂ ಇವರು ಹೇಳಿದರು.