ಕೇರಳ –
ಸಾಮಾನ್ಯವಾಗಿ , ಕೊರೋನಾ, ಕೋವಿಡ್ ಮಹಾಮಾರಿಯ ಕುರಿತು ಎಲ್ಲೇಡೆ ಕೇಳಿದ್ದೆವೆ ಇನ್ನೂ ಕೇಳುತ್ತಿದ್ದೇವೆ. ಈಗಾಗಲೇ ಒಂದನೇಯ ಹಂತದ ವೈರಸ್ ಕುರಿತಂತೆ ಕೇಳಿ ನೋಡಿ ಅನುಭವಿಸಿದ ನಾವುಗಳು ಮತ್ತೊಂದು ವೈರಸ್ ಭೀತಿಯಲ್ಲಿದ್ದೆವೆ. ಇನ್ನೂ ಇದನ್ನು ಕೇಳಿದರೆ ಬೆಚ್ಚಿ ಬೀಳುವುದು ನೂರಕ್ಕ ನೂರರಷ್ಟು ಗ್ಯಾರಂಟಿ. ಕೂಡಲೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದವು ಎಲ್ಲೆಡೆಯೂ ಸಂಭವಿಸುತ್ತಿದೆ. ಆದರೆ, ಕೊರೋನಾ ಎಂದು ಹೇಳಿಕೊಂಡು ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬಂದರೆ ಹೇಗೆ ಅನಿಸಬಹುದು. ಹೌದು ಇಂಥ ಒಂದು ಘಟನೆ ದಕ್ಷಿಣ ಭಾರತದ ಕೇರಳ ರಾಜ್ಯದ ಕೊಲ್ಲಂ ಎಂಬಲ್ಲಿ ಬೆಳಕಿಗೆ ಬಂದಿದೆ. ಸಧ್ಯ ಕೊಲ್ಲಂ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾವು. ನಾ ಮುಂದು ನೀ ಮುಂದು ಎನ್ನುತ್ತಾ ಎಲ್ಲರೂ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಬಿಡುವಿಲ್ಲದೇ ಪ್ರಚಾರವನ್ನು ಮಾಡ್ತಾ ಇದ್ದಾರೆ. ಆದರೆ ಇದರ ನಡುವೆ ಒರ್ವ ಮಹಿಳೆ ಅದು ಸ್ಥಳೀಯ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.ಹೌದು ಹೆಸರು ಕೊರೋನಾ ಥಾಮಸ್ ಎಂಬುವರು ಸ್ಥಳೀಯ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಫರ್ಧೆಗೆ ಇಳಿದಿದ್ದಾರೆ.

ಮತ ಯಾಚನೆಯಲ್ಲಿ ತೊಡಗಿದ್ದಾರೆ.ಇವರು ಕೊಲ್ಲಂ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮಥಿಲಿಲ್ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ.ಅದು ಬೇರ್ಯಾಾರೂ ಅಲ್ಲ.ಈಗಾಗಲೇ ಹೇಳಿದಂತೆ ಹೆಸರು ಕೊರೋನಾ ಥಾಮಸ್. ವಯಸ್ಸು ೨೪. ಕಳೆದ ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಮಹಾ ಮಾರಿಗೆ ಈಕೆಯ ಕುಟುಂಬ ತತ್ತರಿಸಿದ ಸಂದರ್ಭ, ಮಗುವಿಗೆ ಜನ್ಮವಿತ್ತರು. ಇಬ್ಬರು ಸದ್ಯ ಆರೋಗ್ಯವಾಗಿದ್ದಾರೆ. ಈ ವೇಳೆಯಲ್ಲಿ ಕೊರೋನಾ ಥಾಮಸ್ ಹೆಸರು ಬೆಳಕಿಗೆ ಬಂದಿದೆ. ಅಂದ ಹಾಗೆ, ಕೊರೋನಾ ಥಾಮಸ್ ಪರಿ ಜಿನು ಸುರೇಶ್ ಸಕ್ರಿಯ ಬಿಜೆಪಿ ಕಾರ್ಯಕರ್ತರು ಕೂಡ ಹೌದು.

ಚುನಾವಣೆಗೆ ಸ್ಫರ್ಧಿಸುವ ಕುರಿತಂತೆ, ಕೊರೋನಾ ಥಾಮಸ್ ಅವರು, ಮೊದಲಿನಿಂದಲೂ ರಾಜಕೀಯದಲ್ಲಿ ನಿರಾಸಕ್ತಿ ಇತ್ತು. ಹೆರಿಗೆ ಆಗಿ ಗಂಡನ ಮನೆಗೆ ಬಂದ ಬಳಿಕ, ರಾಜಕೀಯದಲ್ಲಿ ಆಸಕ್ತಿ ಬಂದಿದೆ. ಈ ವಿಚಾರದಲ್ಲಿ ಪತಿಯ ಕುಟುಂಬದವರಿಂದಲೂ ಪ್ರೋತ್ಸಾಹ ದೊರಕುತ್ತಿದೆ. ಚುನಾವಣೆ ಪ್ರಚಾರ ಕೈಗೊಳ್ಳಲು ಯಾವುದೇ ತೊಂದರೆ ಆಗುತ್ತಿಲ್ಲ ಎಂದು ಕೊರೋನಾ ಥಾಮಸ್ ಎಂದಿದ್ದಾರೆ.ಆದರೆ ಪ್ರಚಾರಕ್ಕೆ ತೆರಳಿದ ಸಂದರ್ಭ, ಹಲವಾರು ರೀತಿಯ ಪ್ರತಿಕ್ರಿಯೆ ಬಂದಿದೆ. ಆರಂಭದಲ್ಲಿ ಕೊರೋನಾ ಕೇಳಿದಾಗಲೇ ಆಘಾತ ಕ್ಕೀಡಾದವರು, ತಮಾಷೆ ಮಾಡಿದ್ದಾರೆ. ಪ್ರಚಾರಕ್ಕಾಗಿಯೇ ಹೆಸರು ಬದಲಾಯಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದವರಿದ್ದಾರೆ. ಇದಕ್ಕೆ ಮುಗುಳ್ನಗುವ ಕೊರೋನಾ ಥಾಮಸ್, ನಿಮಗೆ ಕೊರೋನಾ ಮಾಹಾಮಾರಿ ಬಗ್ಗೆ ಕಳೆದ ಎಂಟು ತಿಂಗಳ ಹಿಂದಷ್ಟೇ ತಿಳಿದಿರಬಹುದು. ಆದರೆ, ನನ್ನ ತಂದೆ ನನಗೆ ಈ ಹೆಸರನ್ನು ೨೪ ವರ್ಷ ಹಿಂದೆಯೇ ಇಟ್ಟಿದ್ದಾರೆ ಎಂದು ಉತ್ತರಿಸುತ್ತಾರೆ.ಕೊರೋನಾ ಥಾಮಸ್ ತಂದೆ ಥಾಮಸ್ ಮ್ಯಾಥ್ಯೂ. ಅವರಿಗೆ ಇಬ್ಬರು ಮಕ್ಕಳು. ಕೋರಲ್ ಹಾಗೂ ಕೊರೋನಾ. ಕೊರೋನಾಳಿ ಗಿಂತ ಕೋರಲ್ ಕೇವಲ ೨೦ ನಿಮಿಷ ಹಿರಿಯ. ಪುತ್ರನಿಗೆ ಕೋರಲ್ ಎಂದು ನಾಮಕರಣ ಮಾಡಿದಾಗ, ಎರಡನೇಯಳಿಗೆ ರೈಮಿಂಗ್ ಶಬ್ದ ಬರುವಂತಹ ಹೆಸರು ಇಡಬೇಕೆಂದು ನಿರ್ಧರಿಸಿದ್ದರಂತೆ. ಕೊರೋನಾ ಎಂದರೆ, ದೀಪಗಳ ವೃತ್ತ ಎಂದರ್ಥ.ಹೀಗಿದೆ ನೋಡಿ, ಕೇರಳದ ಕೊಲ್ಲಂನ ಕುಟುಂಬವೊಂದರ ಕೊರೋನಾ ಕಥೆ.