ಧಾರವಾಡ –
ಪ್ರಾಚೀನ ಜೈನ ಧರ್ಮದ ತತ್ವ ಸಿದ್ಧಾಂತ, ಶಾಂತಿ, ಅಹಿಂಸೆ ವಿಶ್ವ ಬಾತೃತ್ವದ ಶ್ರೇಷ್ಠತೆಯನ್ನು ಪರಿಗಣಿಸಿ ದಶಲಕ್ಷಣ ಮಹಾಪರ್ವ ಶುಭ ಸಂದರ್ಭದಲ್ಲಿ 12 ಪಿಕ್ಚರ್ಸ್, ಪೋಸ್ಟ್ ಕಾರ್ಡ್ ಗಳನ್ನು ಮತ್ತು ವಿಶೇಷ ಮುದ್ರೆಯನ್ನೊಳಗೊಂಡ ಅಂಚೆ ಲಕೋಟೆಯನ್ನು ಉತ್ತರ ಕರ್ನಾಟಕ ಅಂಚೆ ವಲಯ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಡಾ.ವಿನೋದ ಕುಮಾರ ಲೋಕಾರ್ಪಣೆ ಮಾಡಿದರು.
ವಿಶೇಷ ಅತಿಥಿಗಳಾಗಿ ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹಾಗೂ ಸಂಸ್ಕಾರ ಶಾಲೆಯ ಅಧ್ಯಕ್ಷ ಮಹಾವೀರ ಕುಂದೂರು ಭಾಗವಹಿಸಿದ್ದರು.ಧಾರವಾಡ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ವಿ.ಎಸ್.ಎಲ್. ನರಸಿಂಹ ರಾವ್,ಉತ್ತರ ಕರ್ನಾಟಕ ಅಂಚೆ ವಲಯದ ಸಹಾಯಕ ನಿರ್ದೇಶಕರುಗಳು ಹಾಗೂ ಧಾರವಾಡ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರು ಉಪಸ್ಥಿ ತರಿದ್ದರು.