ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಡಾ ಬಾಬು ಜಗಜೀವನರಾಮ್ ಜನ್ಮದಿನ ಆಚರಣೆ – ಪಾಲಿಕೆಯ ಮೇಯರ್,ಉಪಮೇಯರ್,ಆಯುಕ್ತರು CAO ಸೇರಿದಂತೆ ಹಲವರಿಂದ ಮಾಲಾರ್ಪಣೆ ಗೌರವ…..ಸಮಾಜದ ಮುಖಂಡರು ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತಿ
ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಮತ್ತು ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ನಾಯಕರಾಗಿ ರುವ ಡಾ.ಬಾಬು ಜಗಜೀವನರಾಮ್ ಅವರ 118 ನೇ ಜನ್ಮ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲಿ ಆಚರಣೆ ಮಾಡಲಾಯಿತು ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯಿಂದ ಈ ಒಂದು ಕಾರ್ಯಕ್ರಮವನ್ನು ಮಾಡಲಾಯಿತು.ಇದೇ ವೇಳೆ ಬಾಬು ಜಗಜೀವನ ರಾಮ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮೇಯರ್ ರಾಮಣ್ಣ ಬಡಿಗೇರ, ಉಪಮಹಾಪೌರರು ಶ್ರೀಮತಿ ದುರ್ಗಮ್ಮ ಬಿಜವಾಡ, ಆಯುಕ್ತರಾದ ಡಾ ರುದ್ರೇಶ ಘಾಳಿ ಪಾಲಿಕೆಯ ವಿರೋಧ ಪಕ್ಷದ ನಾಯಕರು ರಾಜಶೇಖರ ಕಮತಿ,ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಶಂಕರನಂದ ಬನಶಂಕರಿ ಸಮಾಜದ ಮುಖಂಡರು ಗುರುನಾಥ ಉಳ್ಳಿಕಾಶಿ ಹಾಗೂ ಪಾಲಿಕೆಯ ಅಧಿಕಾರಿಗಳು ಸಮಾಜದ ಮುಖಂಡರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……