ಧಾರವಾಡ –
ನಿಧನರಾದ ಹಿರಿಯ ಕವಿ ಡಾ ಚೆನ್ನವೀರ ಕಣವಿ ಅವರ ಪಾರ್ಥಿವ ಶರೀರ ಧಾರವಾಡದ ಕೆಸಿಡಿ ಮೈದಾನಕ್ಕೆ ಆಗಮಿಸಿದ್ದು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ ಹೌದು ಆಸ್ಪತ್ರೆಯಿಂದ ಮನೆಗೆ ತಗೆದು ಕೊಂಡು ಅಲ್ಲಿ ಪೂಜೆಯನ್ನು ಮಾಡಿ ನಂತರ ಅಲ್ಲಿಂದ ಧಾರವಾಡದ ಕೆಸಿಡಿ ಮೈದಾನಕ್ಕೆ ತಗೆದುಕೊಂಡು ಬರಲಾಯಿತು.ಕೆಸಿಡಿ ಮುಖ್ಯ ಕಟ್ಟಡದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು
ಕೆಸಿಡಿ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು ಇದೇ ವೇಳೆ ಸಾಹಿತಿಗಳು ಚಿಂತಕರು ಅಧಿಕಾರಿಗಳು ಜಿಲ್ಲೆಯ ಗಣ್ಯರು ಸೇರಿದಂತೆ ಹಲವರು ಅಂತಿಮ ದರ್ಶನ ವನ್ನು ತಗೆದುಕೊಂಡರು.ಸಂಜೆ ಸೃಷ್ಟಿ ಫಾರ್ಮ್ ಹೌಸ್ ನಲ್ಲಿ ಪತ್ನಿಯ ಸಮಾಧಿಯ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಿತು